ಸೋಮವಾರ, ಸೆಪ್ಟೆಂಬರ್ 23, 2019
28 °C

ಭಾರತ ‘ಎ’ ತಂಡಕ್ಕೆ ದೇವಿಕಾ ನಾಯಕಿ

Published:
Updated:

ನವದೆಹಲಿ: ಬಾಂಗ್ಲಾದೇಶ ಪ್ರವಾಸ ಹಾಗೂ ಏಷ್ಯಾಕಪ್‌ ಟೂರ್ನಿಗೆ ಭಾರತ ‘ಎ’  ಕ್ರಿಕೆಟ್‌ ತಂಡವನ್ನು ಪ್ರಕಟಿಸಲಾಗಿದೆ. ಆಲ್‌ರೌಂಡರ್‌ ದೇವಿಕಾ ವೈದ್ಯ ತಂಡವನ್ನು ಮುನ್ನಡೆಸಲಿದ್ದಾರೆ.

ಬಾಂಗ್ಲಾದೇಶದಲ್ಲಿ ಭಾರತ ಎ ತಂಡ ಮೂರು ಏಕದಿನ ಪಂದ್ಯಗಳು ಹಾಗೂ ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ.

ಏಷ್ಯಾಕಪ್‌ ಟೂರ್ನಿಯು ಶ್ರೀಲಂಕಾದಲ್ಲಿ ನಡೆಯಲಿದೆ.

ತಂಡ ಇಂತಿದೆ: ದೇವಿಕಾ ವೈದ್ಯ (ನಾಯಕಿ), ಎಸ್‌, ಮೇಘನಾ (ಉಪನಾಯಕಿ), ಯಾಸ್ತಿಕಾ ಭಾಟಿಯಾ, ತೇಜಲ್‌ ಹಸಬ್ನಿಸ್‌, ತನುಶ್ರೀ ಸರ್ಕಾರ್‌, ಸಿಮ್ರನ್‌ ದಿಲ್ ಬಹದ್ದೂರ್‌, ನುಜತ್‌ ಪರ್ವೀನ್‌, ಆರ್‌. ಕಲ್ಪನಾ, ಮನಾಲಿ ದಕ್ಷಿಣಿ, ಕ್ಷಮಾ ಸಿಂಗ್‌, ಅಂಜಲಿ ಸರ್ವಾನಿ, ಮಿನ್ನು ಮಣಿ, ಸುಶ್ರೀ ದಿವ್ಯದರ್ಶಿನಿ, ಟಿ.ಪಿ. ಕನ್ವರ್‌, ರಾಶಿ ಕನೋಜಿಯಾ.

Post Comments (+)