ಮಂಗಳವಾರ, ನವೆಂಬರ್ 19, 2019
29 °C

ಕ್ರಿಕೆಟ್: ರಾಯಪುರದಿಂದ ಲಖನೌಗ್‌ ಸ್ಥಳಾಂತರ

Published:
Updated:

ನವದೆಹಲಿ:ರಾಯಪುರದಲ್ಲಿ ನಡೆಯಬೇಕಿದ್ದ 23 ವರ್ಷದೊಳಗಿನವರ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಣದ ಏಕದಿನ ಕ್ರಿಕೆಟ್ ಸರಣಿಯನ್ನು ಮಳೆಯ ಕಾರಣದಿಂದ ಲಖನೌಗೆ ಸ್ಥಳಾಂತರಿಸಲಾಗಿದೆ.

ಸೆಪ್ಟೆಂಬರ್ 19ರಿಂದ ರಾಯಪುರದಲ್ಲಿ ಸರಣಿ ಆರಂಭವಾಗಬೇಕಿತ್ತು. ಐದು ಪಂದ್ಯಗಳನ್ನು ಆಯೋಜಿಸಲಾಗಿತ್ತು. ಈಗ ಅಲ್ಲಿ ಸತತ ಮಳೆಯಾಗುತ್ತಿರುವುದರಿಂದ ಟೂರ್ನಿಯನ್ನು ಉತ್ತರಪ್ರದೇಶದ ಲಖನೌಗೆ ಸ್ಥಳಾಂತರಿಸಲಾಗಿದೆ.  ಎಲ್ಲ ಪಂದ್ಯಗಳು ಅಲ್ಲಿಯೇ ನಡೆಯಲಿವೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ 23 ವರ್ಷದೊಳಗಿನವರ ತಂಡ: ಪ್ರಿಯಂ ಗಾರ್ಗ್ (ನಾಯಕ), ಯಶಸ್ವಿ ಜೈಸ್ವಾಲ್, ಮಾಧವ ಕೌಶಿಕ್, ಬಿ.ಆರ್. ಶರತ್ (ವಿಕೆಟ್‌ಕೀಪರ್), ಸಮರ್ಥ್ ವ್ಯಾಸ್, ಆರ್ಯನ್ ಜಯಾಲ್ (ವಿಕೆಟ್‌ಕೀಪರ್), ಋತ್ವಿಕ್ ರಾಯ್ ಚೌಧರಿ, ಕುಮಾರ್ ಸೂರಜ್, ಅತಿಥ್ ಸೇಟ್, ಶುಭಾಂಗ್ ಹೆಗಡೆ, ಹೃತಿಕ್ ಶೋಕೀನ್, ದೃಷಂತ್ ಸೋನಿ, ಆರ್ಷದೀಪ್ ಸಿಂಗ್, ಕಾರ್ತಿಕ್ ತ್ಯಾಗಿ, ಹರಪ್ರೀತ್ ಬ್ರಾರ್.

 

 

ಪ್ರತಿಕ್ರಿಯಿಸಿ (+)