ನವದೆಹಲಿ: ಅಫ್ಗಾನಿಸ್ತಾನ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಡುವ ಭಾರತ ತಂಡದಲ್ಲಿ ಜಮ್ಮು–ಕಾಶ್ಮೀರದ ವೇಗಿ ಅಕೀಬ್ ನಬಿ ದಾರ್ ಅವರಿಗೆ ಅವಕಾಶ ನೀಡಿಲ್ಲ. ಆದರೆ ಅವರಿಗೆ ನೆಟ್ ಬೌಲರ್ ಆಗಿ ನೇಮಕ ಮಾಡಲಾಗಿದೆ. ಈ ಕುರಿತು ಕ್ರಿಕೆಟಿಗ ಇಶಾಂತ್ ಶರ್ಮಾ ಅವರ ಕೋಚ್ ಶ್ರವಣ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಬಿ ಅವರು ಕಳೆದ ರಣಜಿ ಋತುವಿನಲ್ಲಿ ಒಟ್ಟು 60 ವಿಕೆಟ್ ಗಳಿಸಿದರು. ಅವರ ಅಮೋಘ ಆಟದಿಂದಾಗಿ ಜಮ್ಮು–ಕಾಶ್ಮೀರ ತಂಡವು ಮೊದಲ ಬಾರಿಗೆ ರಣಜಿ ಟ್ರೋಫಿ ಜಯಿಸಿತು. ಆದರೆ ಅವರನ್ನು ಟೆಸ್ಟ್ ಪಂದ್ಯದ ತಂಡಕ್ಕೆ ಆಯ್ಕೆ ಮಾಡಿಲ್ಲ. ಅವರನ್ನು ಮೀಸಲು ಬೌಲರ್ ಆಗಿ ತೆಗೆದುಕೊಳ್ಳುವುದು ಯಾವ ಪದ್ಧತಿ’ ಎಂದು ಪ್ರಶ್ನಿಸಿದ್ದಾರೆ.

‘ ಮೀಸಲು ಬೌಲರ್ ಹೆಸರಿನಲ್ಲಿ ಅವರನ್ನು ನೆಟ್ ಬೌಲರ್ ಮಾಡಿದ್ದೀರಿ. ಇದು ದಿಗ್ಬ್ರಮೆಗೊಳಿಸುವಂತಹ ಸಂಗತಿ. ಅವರು ಮಾಡಿರುವ ಸಾಧನೆಯನ್ನು ಯಾಕೆ ಗುರುತಿಸಲಿಲ್ಲ. ಅವರಿಗಿಂತ ಕಡಿಮೆ ವಿಕೆಟ್ ಪಡೆದವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದು ಸಮ್ಮತವಲ್ಲ’ ಎಂದು ಶ್ರವಣ್ ಹೇಳಿದ್ದಾರೆ.

ದೆಹಲಿಯ ಶ್ರವಣ್ ಅವರು ಹಲವು ವರ್ಷಗಳಿಂದ ಇಶಾಂತ್ ಶರ್ಮಾ ಸೇರಿ ಹಲವು ಖ್ಯಾತ ಕ್ರಿಕೆಟಿಗರ ಬಾಲ್ಯದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-1688601085

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.