ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಮಾದರಿಯ ತಂಡಗಳಿಗೆ ಪ್ರತ್ಯೇಕ ಕೋಚ್ ನೇಮಕ: ಕ್ರಿಕೆಟ್ ಆಸ್ಟ್ರೇಲಿಯಾ ಚಿಂತನೆ

Last Updated 26 ಡಿಸೆಂಬರ್ 2021, 8:31 IST
ಅಕ್ಷರ ಗಾತ್ರ

ಸಿಡ್ನಿ: ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ನಿಕ್ ಹಾಕ್ಲಿ ಅವರು, ಮೂರೂ ಮಾದರಿಯ (ಟೆಸ್ಟ್‌, ಏಕದಿನ ಹಾಗೂ ಟಿ20) ಕ್ರಿಕೆಟ್‌ ತಂಡಗಳಿಗೆ ಪ್ರತ್ಯೇಕ ಕೋಚ್‌ಗಳನ್ನು ಹೊಂದುವ ಬಗ್ಗೆ ಸುಳಿವು ನಿಡಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಆಸ್ಟ್ರೇಲಿಯಾ ತಂಡದ ಕೋಚ್ ಆಗಿರುವ ಜಸ್ಟೀನ್‌ ಲ್ಯಾಂಗರ್‌ ಅವರ ಒಪ್ಪಂದದ ಅವಧಿಯು ಮುಂದಿನ ವರ್ಷ ಜೂನ್‌ನಲ್ಲಿ ಮುಕ್ತಾಯವಾಗಲಿದೆ. ಅವರು ಕೋಚ್‌ ಆಗಿ ಮುಂದುವರಿಯುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ. ಆದರೆ, ಲ್ಯಾಂಗರ್ ಮುಂದುವರಿಕೆ ಬಗ್ಗೆ ಸ್ಪಷ್ಟತೆ ಇಲ್ಲ.

ನಿಗದಿತ ಓವರ್‌ಗಳ ಕ್ರಿಕೆಟ್‌ ತಂಡಗಳಿಗೆ ಮೈಕಲ್‌ ಡಿ ವೆನುಟೊ ಮತ್ತು ಆ್ಯಂಡ್ರೋ ಮೆಕ್‌ಡೊನಾಲ್ಡ್‌ ಕೋಚ್‌ ಆಗಿ ನೇಮಕಗೊಳ್ಳಲಿದ್ದಾರೆ ಎಂಬ ಸುದ್ದಿ ಆಸ್ಟ್ರೇಲಿಯಾಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ.

ಈ ಸಂಬಂಧ ಮಾತನಾಡಿರುವ ನಿಕ್‌,ಈ (ವಿಭಿನ್ನ ಮಾದರಿಯ ತಂಡಗಳಿಗೆ ಪತ್ಯೇಕ ಕೋಚ್‌ ಹೊಂದುವ) ವಿಚಾರದ ಬಗ್ಗೆ ಸದ್ಯದ ಋತುವಿನ ಬಳಿಕ ಆಲೋಚಿಸುತ್ತೇವೆ. ನಾಲ್ಕು ವರ್ಷಗಳ ಒಪ್ಪಂದದ ಅವಧಿ ಮುಗಿಯುವವರೆಗೂ ಲ್ಯಾಂಗರ್‌ ಅವರೇ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ಹೇಳಿರುವುದಾಗಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ ವರದಿ ಮಾಡಿದೆ.

‘ಜಸ್ಟೀನ್‌ ಅವರ ಒಪ್ಪಂದದತ್ತ ನೋಡುವ ಅಗತ್ಯವಿಲ್ಲ. ಅದು ಮುಂದಿನ ವರ್ಷ ಮಧ್ಯದಲ್ಲಿಮುಗಿಯಲಿದೆ.ಸದ್ಯ ನಡೆಯುತ್ತಿರುವ ಆ್ಯಷಸ್ ಸರಣಿ ಮುಗಿದ ಬಳಿಕ ಸಭೆ ಸೇರಿ, ಮುಂದಿನ ನಡೆ ಬಗ್ಗೆ ನಿರ್ಧರಿಸುತ್ತೇವೆ' ಎಂದಿದ್ದಾರೆ.

ಇತ್ತೀಚೆಗೆ ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವಆ್ಯಷಸ್ ಸರಣಿಯಲ್ಲಿ 2–0 ಅಂತರದಿಂದ ಮುನ್ನಡೆ ಸಾಧಿಸಿದ್ದು, ಸರಣಿ ಜಯದ ವಿಶ್ವಾಸದಲ್ಲಿದೆ. ಇಂದಿನಿಂದ ಮೂರನೇ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT