ಮೆಲ್ಬರ್ನ್: ಆಸ್ಟ್ರೇಲಿಯಾದ ನೆಲದಲ್ಲಿ ಮೊದಲ ಟೆಸ್ಟ್ ತ್ರಿಶತಕ ಬಾರಿಸಿದ್ದ ಎಡಗೈ ಬಾಬ್ ಕೂಪರ್ ಬಾಬ್ ಕೌಪರ್ (84) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ಕೌಪರ್ ಅವರು 1964 ರಿಂದ 1968ರ ಅವಧಿಯಲ್ಲಿ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದು 46.84ರ ಉತ್ತಮ ಸರಾಸರಿಯಲ್ಲಿ 2,061 ರನ್ ಗಳಿಸಿದ್ದರು. ಇದರಲ್ಲಿ ಐದು ಶತಕಗಳಿದ್ದವು. ಸಾಂದರ್ಭಿಕ ಆಫ್ ಸ್ಪಿನ್ನರ್ ಆಗಿ ಅವರು 36 ವಿಕೆಟ್ಗಳನ್ನು ಪಡೆದಿದ್ದರು.

ಸ್ಟ್ರೋಕ್ ಪ್ಲೇ ಜೊತೆಗೆ ಎಚ್ಚರಿಕೆ – ಎರಡೂ ಶೈಲಿಯ ಆಟಕ್ಕೆ ಕೌಪರ್ ಹೆಸರಾಗಿದ್ದರು. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ 1966ರ ಫೆಬ್ರುವರಿಯಲ್ಲಿ ಅವರು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವೊಂದರಲ್ಲಿ 12 ಗಂಟೆ ಆಡಿ 307 (589 ಎಸೆತ) ಗಳಿಸಿದ್ದು ಪ್ರಸಿದ್ಧಿ ಪಡೆದಿತ್ತು.

ಆ ಶತಕ ಎಂಸಿಜಿಯಲ್ಲಿ 20ನೇ ಶತಮಾನದಲ್ಲಿ ದಾಖಲಾದ ಏಕೈಕ ಟೆಸ್ಟ್ ತ್ರಿಶತಕ. ಆ ಕಾಲದಲ್ಲಿ ಟೆಸ್ಟ್ ಇತಿಹಾಸದ ಹತ್ತನೇ ತ್ರಿಶತಕ ಎನಿಸಿತ್ತು. ಆ ಟೆಸ್ಟ್ಗೆ ಮೊದಲು ಆಡಿಲೇಡ್ನಲ್ಲಿ ಅವರು 12ನೇ ಆಟಗಾರನಾಗಿದ್ದರು. ಮೆಲ್ಬರ್ನ್ ಅವರ ತವರು ಮೈದಾನವಾಗಿತ್ತು.

ಮೆಲ್ಬರ್ನ್ ಅವರ ಅಚ್ಚುಮೆಚ್ಚಿನ ತಾಣವಾಗಿದ್ದು ಇಲ್ಲಿ 75.78ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಇದು ಡಾನ್ ಬ್ರಾಡ್ಮನ್ ಅವರ ನಂತರ ಅತ್ಯಧಿಕ ಸರಾಸರಿ ಎನಿಸಿದೆ. 1968ರಲ್ಲಿ ನಿವೃತ್ತರಾದ ನಂತರ ಅವರು ಸ್ಟಾಕ್ಬ್ರೋಕರ್ (ಷೇರು ವ್ಯವಹಾರ) ಆದರು. ನಂತರ ಅವರು ಮ್ಯಾಚ್ ರೆಫ್ರಿ ಸಹ ಆದರು.

ಕ್ರಿಕೆಟ್ನಲ್ಲಿ ಸಲ್ಲಿಸಿದ ಸೇವೆಗಾಗಿ 2023ರಲ್ಲಿ ಅವರಿಗೆ ಮೆಡಲ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ ಗೌರವ ಸಂದಿತ್ತು.ಕಛೌಪ್್

ಕೌಪರ್ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.