ಲಂಡನ್: ಇಂಗ್ಲೆಂಡ್ ಮಹಿಳಾ ತಂಡವು ಸೋಮವಾರ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ದಾಖಲೆಯ 275 ರನ್‌ಗಳಿಂದ ಗೆಲುವು ಸಾಧಿಸಿತು.
ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆ ಇಂಗ್ಲೆಂಡ್ ತಂಡವು 2–0ಯಿಂದ ವಶ ಮಾಡಿಕೊಂಡಿದೆ. ಮೊದಲ ಪಂದ್ಯವನ್ನು ಆಂಗ್ಲ ಪಡೆ ನಾಲ್ಕು ವಿಕೆಟ್‌ಗಳಿಂದ ಗೆದ್ದಿತ್ತು.
ಆರಂಭಿಕ ಆಟಗಾರ್ತಿ ಟಾಮಿ ಬ್ಯೂಮಾಂಟ್ ಅವರ ಅಜೇಯ 150 ರನ್‌ಗಳ ಬಲದಿಂದ ಇಂಗ್ಲೆಂಡ್ 50 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 320 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆತಿಥೇಯ ಐರ್ಲೆಂಡ್ ತಂಡವು 45 ರನ್‌ಗೆ ಕುಸಿಯಿತು. ಇಂಗ್ಲೆಂಡ್ ತಂಡದ ನಾಯಕಿ ಕೇಟ್ ಕ್ರಾಸ್ ಮತ್ತು ಲಾರೆನ್ ಫೈಲರ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 50 ಓವರ್‌ಗಳಲ್ಲಿ 8ಕ್ಕೆ 320 (ಟಾಮಿ ಬ್ಯೂಮಾಂಟ್ ಔಟಾಗದೇ 150, ಫ್ರೇಯಾ ಕೆಂಪ್ 65; ಅರ್ಲೀನ್ ಕೆಲ್ಲಿ 61ಕ್ಕೆ 2, ಫ್ರೇಯಾ ಸಾರ್ಜೆಂಟ್ 60ಕ್ಕೆ 2). ಐರ್ಲೆಂಡ್: 16.5 ಓವರ್‌ಗಳಲ್ಲಿ 45 (ಉನಾ ರೇಮಂಡ್-ಹೋಯ್ 22; ಕೇಟ್ ಕ್ರಾಸ್ 8ಕ್ಕೆ 3, ಲಾರೆನ್ ಫೈಲರ್ 10ಕ್ಕೆ 3). ಪಂದ್ಯದ ಆಟಗಾರ್ತಿ: ಟಾಮಿ ಬ್ಯೂಮಾಂಟ್