ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್: ಏ.3 ರಿಂದ ಕ್ರಿಕೆಟ್‌ ಹಬ್ಬ ಶುರು

Last Updated 29 ಮಾರ್ಚ್ 2021, 4:51 IST
ಅಕ್ಷರ ಗಾತ್ರ

ಸಿದ್ದಾಪುರ: ಜಿಲ್ಲೆಯ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾಟವಾದ ಕೊಡಗು ಚಾಂಪಿಯನ್ಸ್ ಲೀಗ್ ನ ಐದನೇ ಆವೃತ್ತಿಯ ಪಂದ್ಯಾಟ ಏ.3 ರಿಂದ ಆರಂಭವಾಗಲಿದ್ದು, ಪಂದ್ಯಾವಳಿಯ ಸಿದ್ಧತೆ ಭರದಿಂದ ಸಾಗಿದೆ.

ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯ ವಿವಿಧ ಭಾಗದ ಆಟಗಾರರನ್ನು ಒಗ್ಗೂಡಿಸಿ, ಕೊಡಗು ಚಾಂಪಿಯನ್ಸ್ ಲೀಗ್ ಎಂಬ ಐ.ಪಿ.ಎಲ್ ಮಾದರಿಯ ಪಂದ್ಯಾಟವನ್ನು ನಡೆಸಿಕೊಂಡು ಬರುತ್ತಿದ್ದು, ಜಿಲ್ಲೆಯ ಸುಮಾರು 200 ರಷ್ಟು ಆಟಗಾರರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಗಮನ ಸೆಳೆದ ಬಿಡ್ಡಿಂಗ್ ಕಾರ್ಯಕ್ರಮ: ಕೆ.ಸಿ.ಎಲ್ ಪಂದ್ಯಾವಳಿಗೆ ಜಿಲ್ಲೆಯ ವಿವಿಧ ಭಾಗದಿಂದ 200 ಕ್ಕೂ ಅಧಿಕ ಕ್ರೀಡಾಪಟುಗಳು ಅರ್ಜಿ ಸಲ್ಲಿಸಿದ್ದು, ಐ.ಪಿ.ಎಲ್ ನಂತೆ ಬಿಡ್ಡಿಂಗ್ ನಡೆಯಲಿದೆ. ಜಿಲ್ಲೆಯ ಉತ್ತಮ ಆಟಗಾರರನ್ನು ಐಕಾನ್ ಪಟ್ಟಿಗೆ ಸೇರಿಸಲಾಗುತ್ತದೆ. ಪ್ರತಿ ತಂಡಕ್ಕೂ ಮೂವರು ಐಕಾನ್ ಆಟಗಾರರನ್ನು ಖರೀದಿಸಲು ಅವಕಾಶ ಇದ್ದು, ತಂಡದ ಮಾಲೀಕರು ಹಾಗೂ ಐಕಾನ್ ಆಟಗಾರರು ಉಳಿದ ಆಟಗಾರರನ್ನು ಆಯ್ಕೆ ಮಾಡುತ್ತಾರೆ. ಐ.ಪಿ.ಎಲ್ ಬಿಡ್ಡಿಂಗ್‌ನಂತೆ ಪ್ರತಿ ಆಟಗಾರರ ಬಿಡ್ಡಿಂಗ್ ನಡೆಯುತ್ತದೆ.

ಕೆ.ಸಿ.ಎಲ್ ಗೆ ವಿಶೇಷ ಸ್ಥಾನ : ಕೆ.ಸಿ.ಎಲ್ ಪಂದ್ಯಾಟಕ್ಕಾಗಿ ಕರಡಿಗೋಡುವಿನ 7 ಏಕರೆ ವಿಸ್ತೀರ್ಣದ ಜಾಗದಲ್ಲಿ ಮೈದಾನ ಕಾಮಗಾರಿ ನಡೆಯುತ್ತಿದ್ದು, ವಿಶಾಲ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಚಾಂಪಿಯನ್ ತಂಡಕ್ಕೆ ₹1.10 ಲಕ್ಷ ನಗದು ಹಾಗೂ ಟ್ರೋಫಿ, ರನ್ನರ್‌ ಅಪ್‌ ತಂಡಕ್ಕೆ ₹55 ಸಾವಿರ ನಗದು ದೊರಕಲಿದೆ. ಪ್ರತಿ ಪಂದ್ಯಕ್ಕೂ ಪಂದ್ಯ ಪುರುಷೋತ್ತಮ, ಉತ್ತಮ ಸಿಕ್ಸರ್, ಉತ್ತಮ ಕ್ಯಾಚ್ ಪ್ರಶಸ್ತಿ ಕೂಡ ನೀಡುತ್ತಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನ ಮಾನ್ಯತೆ ಪಡೆದಿರುವ ತೀರ್ಪುಗಾರರು, ಸ್ಕೋರರ್ ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.

ಐದನೇ ಆವೃತ್ತಿಯ ತಂಡಗಳು: ಶಮೀರ್, ಇರ್ಷಾದ್ ಮಾಲೀಕತ್ವದ ಕ್ರಿಯೇಟಿವ್ ಕ್ರಿಕೆಟರ್ಸ್ ಮಡಿಕೇರಿ, ನೌಶಾದ್, ಸರಫು ಮಾಲೀಕತ್ವದ ರಾಯಲ್ಸ್ ವಿರಾಜಪೇಟೆ, ಸುದೀಶ್, ಸತ್ತಾರ್ ಮಾಲೀಕತ್ವದ ಟೀಂ ಕೊಂಬನ್ ಸಿದ್ದಾಪುರ, ಥೋಮಸ್, ವಾಸೀಂ ಮಾಲೀಕತ್ವದ ಟೀಂ ಕೂಲ್ ಸಿದ್ದಾಪುರ, ಸಾಬು ವರ್ಗೀಸ್ ಮಾಲೀಕತ್ವದ ರಾಂಬೋ ಕ್ರಿಕೆಟರ್ಸ್ ನೆಲ್ಯಹುದಿಕೇರಿ, ಅನ್ಸಾಫ್ ಮಾಲೀಕತ್ವದ ಸ್ಫೋರ್ಟ್ಸ್ ವೋಲ್ಡ್ ಮಡಿಕೇರಿ, ಜಂಶೀದ್, ಸಿಮಾಕ್ ಮಾಲೀಕತ್ವದ ಡಾಟ್ ಡೊಮಿನೇಟರ್ಸ್ ದುಬಾರೆ, ಆಶಿಶ್, ಉಬೈದ್ ಮಾಲೀಕತ್ವದ ರೆಡ್ ಬ್ಯಾಕ್ ಸ್ಪೈಡರ್ಸ್ ಮಡಿಕೇರಿ, ರೆಹಮಾನ್, ಮುನೀರ್ ಮಾಲೀಕತ್ವದ ಎಕೆ ಫ್ರೆಂಡ್ಸ್ ಹುಂಡಿ , ಜಂಶೀರ್, ರಹೀಂ ಮಾಲೀಕತ್ವದ ವೈ.ಬಿ.ಸಿ ನೆಲ್ಯಹುದಿಕೇರಿ, ನ್ಯೂ ಕೂರ್ಗ್ ಸ್ಟಾರ್ ನಲ್ವತ್ತೇಕ್ರೆ, ಶುಹೈಬ್, ಆಬಿದ್ ಮಾಲೀಕತ್ವದ ಫ್ರೆಂಡ್ಸ್ ಕ್ರಿಕೆಟರ್ಸ್ ನೆಲ್ಯಹುದಿಕೇರಿ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದೆ.

ಸಮಾಜ ಸೇವೆಯಲ್ಲೂ ಸಿಟಿ ಬಾಯ್ಸ್: ಸಿಟಿ ಬಾಯ್ಸ್ ಯುವಕ ಸಂಘದ ಸದಸ್ಯರು ಕ್ರೀಡೆ ಮಾತ್ರವಲ್ಲದೆ ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಕ್ತದಾನ, ಬರ ರೋಗಿಗಳಿಗೆ ಸಹಾಯ, ಬಡ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡುತ್ತಿದ್ದಾರೆ. ಲಾಕ್ ಡೌನ್ ವೇಳಿ ಬೀದಿ ನಾಯಿಗಳಿಗೆ ಆಹಾರ ವಿತರಿಸಿ ಶ್ಲಾಘನೆಗೆ ಪಾತ್ರವಾಗಿತ್ತು. ನಾಲ್ಕನೇ ಆವೃತ್ತಿಯ ಪಂದ್ಯಾವಳಿಯ ವೇಳೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಯೊಬ್ವರಿಗೆ ರಕ್ತದ ಅಗತ್ಯವಿದ್ದ ಸಂದರ್ಭ ಮೈದಾನದಲ್ಲಿ ಆಟವಾಡುತ್ತಿದ್ದ ಕ್ರೀಡಾಪಟು, ಆಟವನ್ನು ಕೈಬಿಟ್ಟು ಮಡಿಕೇರಿಗೆ ತೆರಳಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT