ಸೋಮವಾರ, ಆಗಸ್ಟ್ 2, 2021
28 °C

ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್‌ ಕಲರವ

ಪಿಟಿಐ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌: ಆಸ್ಟ್ರೇಲಿಯಾದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ ಆರಂಭಕ್ಕೆ ವೇದಿಕೆ ಸಿದ್ಧಗೊಂಡಿದೆ.

ಡಾರ್ವಿನ್‌ನಲ್ಲಿ ಇದೇ ತಿಂಗಳ 6ರಿಂದ 8ರವರೆಗೆ ಸಿಡಿಯು ಟಾಪ್‌ ಎಂಡ್‌ ಟಿ–20 ಟೂರ್ನಿ ನಡೆಯಲಿದೆ. ಡಾರ್ವಿನ್‌ ಸುತ್ತಮುತ್ತ ಮೇ 21ರ ನಂತರ ಒಂದೂ ಕೋವಿಡ್‌ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಾಗಿ ಪಂದ್ಯಗಳ ವೇಳೆ 500 ಮಂದಿ ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶ ನೀಡಲು ಆಯೋಜಕರು ನಿರ್ಧರಿಸಿದ್ದಾರೆ.

ಮೂರು ದಿನಗಳ ಕಾಲ ಒಟ್ಟು 15 ಪಂದ್ಯಗಳು ಜರುಗಲಿದ್ದು ಎಂಟು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

‘ಕೊರೊನಾ ಬಿಕ್ಕಟ್ಟಿನ ಕಾರಣ ಎಲ್ಲಾ ರಾಷ್ಟ್ರಗಳಲ್ಲೂ ಕ್ರಿಕೆಟ್‌ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು. ಡಾರ್ವಿನ್‌ನ ಕ್ರಿಕೆಟ್‌ ಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸುವ ಉದ್ದೇಶದಿಂದ ನಾವು ಟಿ–20 ಲೀಗ್‌ ಆಯೋಜಿಸಿದ್ದೇವೆ’ ಎಂದು ನಾರ್ಥರ್ನ್‌ ಟೆರಿಟರಿ ಕ್ರಿಕೆಟ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜೋಯೆಲ್‌ ಮೊರಿಸನ್‌ ತಿಳಿಸಿದ್ದಾರೆ.

ಮರಾರಾ, ಗಾರ್ಡನ್ಸ್‌ ಓವಲ್‌ ಹಾಗೂ ಕ್ಯಾಜಲಿಸ್‌ ಓವಲ್‌ ಮೈದಾನಗಳಲ್ಲಿ ಪಂದ್ಯಗಳು ಆಯೋಜನೆಯಾಗಿವೆ. ಸೆಮಿಫೈನಲ್‌ ಹಾಗೂ ಫೈನಲ್‌ ಸೇರಿದಂತೆ ಒಟ್ಟು ಆರು ಪಂದ್ಯಗಳನ್ನು ‘ಮೈ ಕ್ರಿಕೆಟ್’‌ ಫೇಸ್‌ಬುಕ್‌ ಪುಟದಲ್ಲಿ ನೇರ ಪ್ರಸಾರ ಮಾಡಲು ಆಯೋಜಕರು ನಿರ್ಧರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು