ದ.ಆಫ್ರಿಕಾ ಬಳಗಕ್ಕೆ ಆರಂಭಿಕ ಆಘಾತ ನೀಡಿದ ಸಿರಾಜ್: ಭಾರತದ ಹಿಡಿತದಲ್ಲಿ ಪಂದ್ಯ

7
ಕ್ರಿಕೆಟ್: ಭರತ್, ಹನುಮವಿಹಾರಿ ಅರ್ಧಶತಕ, ಭಾರತ ‘ಎ’ ತಂಡ

ದ.ಆಫ್ರಿಕಾ ಬಳಗಕ್ಕೆ ಆರಂಭಿಕ ಆಘಾತ ನೀಡಿದ ಸಿರಾಜ್: ಭಾರತದ ಹಿಡಿತದಲ್ಲಿ ಪಂದ್ಯ

Published:
Updated:

ಬೆಂಗಳೂರು: ‘ಹೈದರಾಬಾದ್ ಹುಡುಗ’ ಮೊಹಮ್ಮದ್ ಸಿರಾಜ್ ತಮ್ಮ ಶಿಸ್ತಿನ ಬೌಲಿಂಗ್ ಮೂಲಕ ದಕ್ಷಿಣ ಆಫ್ರಿಕಾ ‘ಎ’ ತಂಡಕ್ಕೆ ಮತ್ತೆ ತಲೆನೋವಾದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಟೆಸ್ಟ್’ನ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಗಳಿಸಿದ್ದ ಅವರು ಎರಡನೇ ಇನಿಂಗ್ಸ್‌ನಲ್ಲಿಯೂ ನಾಲ್ಕು ವಿಕೆಟ್‌ ಕಬಳಿಸಿದ್ದಾರೆ. ಇದರಿಂದಾಗಿ ದಕ್ಷಿಣ ಆಫ್ರಿಕಾ ‘ಎ’ ತಂಡವು ಸೋಲಿನ ಭೀತಿಯಲ್ಲಿದೆ.

ಮೂರನೇ ದಿನವಾದ ಸೋಮವಾರ ಮೊದಲ ಇನಿಂಗ್ಸ್‌ನಲ್ಲಿ 338 ರನ್‌ಗಳ ಮುನ್ನಡೆ ಗಳಿಸಿದ  ಆತಿಥೇಯ ತಂಡವು ಡಿಕ್ಲೇರ್ ಮಾಡಿಕೊಂಡಿತು. ಎರಡನೇ ಇನಿಂಗ್ಸ್‌ ಆರಂಭಿಸಿದ ಖಯಾಯ ಜೊಂಡೊ ನಾಯಕತ್ವದ ಬಳಗವು 40 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 99 ರನ್‌ ಗಳಿಸಿದೆ. ಎಲ್ಲ ವಿಕೆಟ್‌ಗಳನ್ನೂ ಸಿರಾಜ್ ಕಬಳಿಸಿದ್ದಾರೆ. ಪ್ರವಾಸಿ ತಂಡವು ಸೋಲಿನಿಂದ ಪಾರಾಗಬೇಕಾದರೆ ಕೊನೆಯ ದಿನವಾದ ಮಂಗಳವಾರ ಇಡೀ ದಿನ ಬ್ಯಾಟಿಂಗ್ ಮಾಡಬೇಕು. ವಿಕೆಟ್‌ ಪತನವಾಗದಂತೆ ಆಡುವ ಸವಾಲು ತಂಡದ ಮುಂದಿದೆ.

ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ’ಎ’ ತಂಡವು 246 ರನ್‌ ಗಳಿಸಿತ್ತು. ಅದಕ್ಕುತ್ತರವಾಗಿ ಭಾರತ ತಂಡವು 129.4 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 584 ರನ್ ಗಳಿಸಿತು.

ಒಂದೂ ರನ್ ಗಳಿಸದ ಮಯಂಕ್: ಭಾನುವಾರ ದಿನದಾಟದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್ (220 ರನ್) ದ್ವಿಶತಕ ಹೊಡೆದು ಕ್ರೀಸ್‌ನಲ್ಲಿದ್ದರು. ಆದರೆ ಮೂರನೇ ದಿನವಾದ ಸೋಮವಾರ ಬೆಳಿಗ್ಗೆ ಒಂದೂ ರನ್ ಗಳಿಸದೇ ಔಟಾದರು. ಅವರು ದಿನದ ಮೊದಲ ಓವರ್‌ನಲ್ಲಿಯೇ ಬೇರನ್ ಹೆನ್ರಿಕ್ಸ್‌ ಎಸೆತದಲ್ಲಿ ಎಲ್‌ಬಿಡಬ್ಯು ಬಲೆಗೆ ಬಿದ್ದರು. ನಂತರ  ಕ್ರೀಸ್‌ಗೆ ಬಂದ ಹನುಮವಿಹಾರಿ ನಿಧಾನಗತಿಯಲ್ಲಿ ಆಡಿದರು.

ನಾಯಕ ಶ್ರೇಯಸ್ ಅಯ್ಯರ್ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ಸಫಲರಾಗಲಿಲ್ಲ. 98ನೇ ಓವರ್‌ನಲ್ಲಿ ಹೆನ್ರಿಕ್ಸ್‌ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ವಿಕೆಟ್‌ಕೀಪರ್‌ ರೂಡಿ ಸೆಕೆಂಡ್‌ಗೆ ಕ್ಯಾಚಿತ್ತ ಶ್ರೇಯಸ್ ನಿರ್ಗಮಿಸಿದರು. ಕ್ರೀಸ್‌ಗೆ ಬಂದ ಕೆ.ಎನ್. ಭರತ್ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡಿದರು. 77 ಎಸೆತಗಳಲ್ಲಿ 64 ರನ್ ಗಳಿಸಿದರು. ಅವರ ನಂತರ ಹನುಮವಿಹಾರಿ ಅವರು ಅರ್ಧಶತಕ (54; 102 ಎಸೆತ) ಗಳಿಸಿದರು.

ಮಳೆಯಿಂದಾಗಿ ಅಡ್ಡಿ: ಚಹಾ ವಿರಾಮದ ನಂತರ ಸುಮಾರು ಸುರಿದ ಮಳೆಯಿಂದಾಗಿ 45 ನಿಮಿಷಕ್ಕೂ ಹೆಚ್ಚು ಸಮಯ ಆಟವನ್ನು ಸ್ಥಗಿತಗೊಳಿಸಲಾಯಿತು.

ಸಂಕ್ಷಿಪ್ತ ಸ್ಕೋರ್:

ಮೊದಲ ಇನಿಂಗ್ಸ್‌:  
ದಕ್ಷಿಣ ಆಫ್ರಿಕಾ ‘ಎ’: 246,
ಭಾರತ ‘ಎ’: 129.4 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 584 ಡಿಕ್ಲೆರ್ಡ್: (ಮಯಂಕ್ ಅಗರವಾಲ್ 220, ಶ್ರೇಯಸ್ ಅಯ್ಯರ್ 24, ಜಿ. ಹನುಮವಿಹಾರಿ 54, ಕೆ.ಎಸ್. ಭರತ್ 64, ಅಕ್ಷರ್ ಪಟೇಲ್ ಔಟಾಗದೆ 33, ಬೆರನ್ ಹೆನ್ರಿಕ್ಸ್ 98ಕ್ಕೆ3, ಡನ್ ಒಲಿವಿಯರ್ 88ಕ್ಕೆ2, ಡೇನ್ ಪೀಡ್ತ್  92ಕ್ಕೆ2),

ಎರಡನೇ ಇನಿಂಗ್ಸ್:
ದಕ್ಷಿಣ ಆಫ್ರಿಕಾ ‘ಎ’: 40 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 99 (ಸೆರೆಲ್ ಎರ್ವಿ 3, ಜುಬೇರ್ ಹಮ್ಜಾ 46, ಸೆನುರನ್ ಮುತುಸಾಮಿ 41, ರೂಡಿ ಸೆಕೆಂಡ್ ಬ್ಯಾಟಿಂಗ್ 4, ಮೊಹಮ್ಮದ್ ಸಿರಾಜ್ 18ಕ್ಕೆ4) 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !