ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ತಂಡದಲ್ಲಿರುವುದೇ ಅದೃಷ್ಟ: ವಿರಾಟ್‌ ಕೊಹ್ಲಿ ಅನಿಸಿಕೆ

ಭಾರತ ತಂಡದ ನಾಯಕ
Last Updated 19 ಏಪ್ರಿಲ್ 2019, 19:12 IST
ಅಕ್ಷರ ಗಾತ್ರ

ಮುಂಬೈ: ‘ದೀರ್ಘ ಕಾಲ ವಿಕೆಟ್‌ಕೀಪರ್‌ ಹಾಗೂ ಬ್ಯಾಟ್ಸ್‌ ಮನ್‌ ಆಗಿ ಉತ್ತಮ ಅನುಭವ ಹಾಗೂ ಸಾಮರ್ಥ್ಯ ಹೊಂದಿರುವ ಮಹೇಂದ್ರ ಸಿಂಗ್‌ ಧೋನಿ ನಮ್ಮ ತಂಡದಲ್ಲಿರುವುದೇ ಅದೃಷ್ಟ’ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

341 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಧೋನಿ ಅವರು 51 ರನ್‌ಗಳ ಸರಾಸರಿಯಲ್ಲಿ 10,500 ರನ್‌ ಗಳಿಸಿದ್ದಾರೆ. ವಿಶ್ವಕಪ್‌ ವೇಳೆಗೆ ಧೋನಿ ಅವರು 38ನೇ ವರ್ಷಕ್ಕೆ ಕಾಲಿಡಲಿದ್ದು,ಭಾರತ ತಂಡದ ಗೆಲುವಿನಲ್ಲಿ ಮಹಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

2011ರಲ್ಲಿ ಭಾರತ ತಂಡ ವಿಶ್ವಕಪ್‌ ಗೆದ್ದಿದ್ದ ವೇಳೆ ತಂಡದ ನಾಯಕನ ಸ್ಥಾನ ವಹಿಸಿದ್ದ ಧೋನಿ, ಈ ವರ್ಷ ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್‌ ಕಾಯ್ದುಕೊಂಡಿದ್ದಾರೆ. ಒಂಬತ್ತು ಏಕದಿನ ಪಂದ್ಯಗಳಲ್ಲಿ 300 ರನ್‌ ಗಳಿಸಿದ್ದು, ನಾಲ್ಕು ಅರ್ಧಶತಕ ದಾಖಲಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾ ಸದಲ್ಲಿ ಸತತ ಮೂರು ಅರ್ಧಶತಕ ದಾಖಲಿಸಿದ್ದಾರೆ.

‘ಪ್ರತಿ ಪಂದ್ಯದ ಬಗ್ಗೆ ಧೋನಿ ಸಂಪೂರ್ಣ ಅರಿವು ಹೊಂದಿದ್ದಾರೆ. ಮೊದಲ ಎಸೆತದಿಂದ ಹಿಡಿದು, 300ನೇ ಎಸೆತದವರೆಗೂ ಕೂಲಂಕುಷವಾಗಿ ಅರ್ಥಮಾಡಿಕೊಳ್ಳುತ್ತಾರೆ. ಅವರನ್ನು ಹೊಂದಿರುವುದು ತಂಡಕ್ಕೆ ಲಗ್ಸುರಿ ಎಂದು ಭಾವಿಸಲಾರೆ, ವಿಕೆಟ್‌ ಹಿಂದುಗಡೆ ಅವರಂತಹ ವ್ಯಕ್ತಿಯನ್ನು ಪಡೆದಿರುವುದೇ ನಮ್ಮ ಅದೃಷ್ಟ’ ಎಂದು ಕೊಹ್ಲಿ ಬಣ್ಣಿಸಿದರು.

ಕಳಪೆ ಫಾರ್ಮ್‌ ಹೊಂದಿದ್ದ ವೇಳೆ ಧೋನಿ ಅವರನ್ನು ತಂಡದಿಂದ ಕೈಬಿಡಬೇಕು ಎಂಬ ಒತ್ತಾಯಗಳು ಕೇಳಿಬಂದಿದ್ದವು. ಈ ವೇಳೆ ಕೊಹ್ಲಿ ಅವರು ಧೋನಿಯನ್ನು ಬೆಂಬಲಿಸಿದ್ದರು. ಇದಾದ ನಂತರದಲ್ಲಿ ಧೋನಿ ಮತ್ತೆ ಫಾರ್ಮ್‌ ಕಾಯ್ದುಕೊಳ್ಳುವ ಮೂಲಕ ಟೀಕಾಕಾರರ ಬಾಯಿಮುಚ್ಚಿಸಿದ್ದಾರೆ.

ಈ ವಿಷಯವನ್ನೇ ಮತ್ತೆ ಪ್ರಸ್ತಾಪಿಸಿರುವ ಕೊಹ್ಲಿ, ‘ಧೋನಿ ಅವರಿಗೆ ಅವರದ್ದೇ ಆದ ಜಾಗ ನೀಡಬೇಕು. ಆ ಸಂದರ್ಭದಲ್ಲಿ ಜನರಿಗೂ ತಾಳ್ಮೆಯಿರಲಿಲ್ಲ. 12 ತಿಂಗಳ ನಂತರ, ಜನರಿಗೂ ಅರಿವಾಗಿದೆ. ವಿಶ್ವಕಪ್‌ನಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದರು.

ವಿಶ್ವಕಪ್‌ ತಂಡದಲ್ಲಿ ಅಗ್ರ ಕ್ರಮಾಂ ಕದ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್‌.ರಾಹುಲ್‌, ದಿನೇಶ್‌ ಕಾರ್ತಿಕ್‌ ಹಾಗೂ ಆಲ್‌ ರೌಂಡರ್‌ ವಿಜಯ್‌ಶಂಕರ್‌ಗೆ ಸ್ಥಾನ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೊಹ್ಲಿ, ಈ ಸಲ ಹಲವು ಪ್ರಯೋಗಗಳನ್ನು ಮಾಡಲಾಗಿದೆ. ವಿಜಯ್‌ ಅವರು ಬೌಲಿಂಗ್‌, ಅತ್ಯುತ್ತಮ ಫೀಲ್ಡರ್‌ ಆಗಿದ್ದು, ಉತ್ತಮ ಬ್ಯಾಟ್ಸ್‌ಮನ್‌ ಕೂಡ ಆಗಿದ್ದಾರೆ. ಅವರು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT