ಗುರುವಾರ , ಮೇ 28, 2020
27 °C

ಕ್ರಿಕೆಟ್‌: ಸರಣಿ ‘ಕ್ಲೀನ್‌ ಸ್ವೀಪ್‌’ ಮಾಡಿದ ಭಾರತ ‘ಎ’

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಮೌಂಟ್‌ ಮಾಂಗಾನುಯಿ: ಅನಮೋಲ್‌ಪ್ರೀತ್‌ ಸಿಂಗ್‌ (71; 80ಎ, 8ಬೌಂ, 1ಸಿ) ಅವರ ಅರ್ಧಶತಕ ಮತ್ತು ಸಿದ್ದಾರ್ಥ್‌ ಕೌಲ್‌ (37ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಭಾರತ ‘ಎ’ ತಂಡ ಮೂರನೇ ಏಕದಿನ ಪಂದ್ಯದಲ್ಲಿ 75ರನ್‌ಗಳಿಂದ ನ್ಯೂಜಿಲೆಂಡ್‌ ‘ಎ’ ತಂಡವನ್ನು ಸೋಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿದೆ.

ಬೇ ಓವಲ್‌ ಮೈದಾನದಲ್ಲಿ ಮಂಗಳ ವಾರ ಮೊದಲು ಬ್ಯಾಟ್‌ ಮಾಡಿದ ಮನೀಷ್‌ ಪಾಂಡೆ ಸಾರಥ್ಯದ ಭಾರತ ‘ಎ’ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 275ರನ್‌ ದಾಖಲಿಸಿತು. ಗುರಿ ಬೆನ್ನಟ್ಟಿದ ಡಗ್‌ ಬ್ರೇಸ್‌ವೆಲ್‌ ಮುಂದಾಳತ್ವದ ನ್ಯೂಜಿಲೆಂಡ್‌ 44.2 ಓವರ್‌ಗಳಲ್ಲಿ 200ರನ್‌ಗಳಿಗೆ ಹೋರಾಟ ಮುಗಿಸಿತು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 275 (ಇಶಾನ್‌ ಕಿಶನ್‌ 39, ಅನಮೋಲ್‌ಪ್ರೀತ್‌ ಸಿಂಗ್‌ 71, ಶ್ರೇಯಸ್‌ ಅಯ್ಯರ್‌ 23, ಅಂಕಿತ್‌ ಬಾವ್ನೆ 48, ವಿಜಯ್‌ ಶಂಕರ್‌ 42, ಅಕ್ಷರ್‌ ಪಟೇಲ್‌ 31; ಹ್ಯಾಮಿಷ್‌ ಬೆನೆಟ್‌ 42ಕ್ಕೆ1, ಸೇತ್‌ ರ‍್ಯಾನ್ಸ್‌ 49ಕ್ಕೆ3, ಡಗ್‌ ಬ್ರೇಸ್‌ವೆಲ್‌ 32ಕ್ಕೆ1, ಲೂಕಿ ಫರ್ಗ್ಯೂಸನ್‌ 20ಕ್ಕೆ2, ಡೆರಿಲ್‌ ಮಿಷೆಲ್‌ 23ಕ್ಕೆ1).

 ನ್ಯೂಜಿಲೆಂಡ್‌ ‘ಎ’: 44.2 ಓವರ್‌ಗಳಲ್ಲಿ 200 (ಹ್ಯಾಮಿಷ್‌ ರುದರ್‌ಫೋರ್ಡ್‌ 27, ರಚಿನ್‌ ರವೀಂದ್ರ 21, ಡೆರಿಲ್‌ ಮಿಷೆಲ್‌ 30, ಟಿಮ್‌ ಸೀಫರ್ಟ್‌ 55, ಕೋಲ್‌ ಮೆಕೊಂಚೀ 13, ಡಗ್‌ ಬ್ರೇಸ್‌ವೆಲ್‌ 11, ಲೂಕಿ ಫರ್ಗ್ಯೂಸನ್‌ 12; ಕೆ.ಗೌತಮ್‌ 40ಕ್ಕೆ2, ಕೆ.ಖಲೀಲ್‌ ಅಹ್ಮದ್‌ 33ಕ್ಕೆ1, ಸಿದ್ದಾರ್ಥ್‌ ಕೌಲ್‌ 37ಕ್ಕೆ4, ಅಕ್ಷರ್‌ ಪಟೇಲ್‌ 45ಕ್ಕೆ1, ಕೃಣಾಲ್ ಪಾಂಡ್ಯ 28ಕ್ಕೆ1, ವಿಜಯ್‌ ಶಂಕರ್‌ 12ಕ್ಕೆ1).

ಫಲಿತಾಂಶ: ಭಾರತ ‘ಎ’ ತಂಡಕ್ಕೆ 75ರನ್‌ ಗೆಲುವು. 3–0ರಿಂದ ಸರಣಿ ಕೈವಶ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.