ರಾಯಪುರ (ಪಿಟಿಐ): ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಅಂಗಕ್ರಿಷ್ ರಘುವಂಶಿ ಚೆಂದದ ಅರ್ಧಶತಕ ಗಳಿಸಿದರು.

ಶಹೀದ್ ವೀರ್ ನಾರಾಯಣ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರಘುವಂಶಿ (71; 46ಎ, 4x7, 6x3) ಅವರ ಆಟದ ಬಲದಿಂದ ಕೋಲ್ಕತ್ತ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 20 ಓವರ್ಗಳ ಅಂತ್ಯಕ್ಕೆ 4 ವಿಕೆಟ್ಗಳಿಗೆ 192 ರನ್ ಗಳಿಸಿತು. ರಘುವಂಶಿ ಅವರೊಂದಿಗೆ ರಿಂಕು ಸಿಂಗ್ (ಔಟಾಗದೇ 49; 29ಎ, 4x3, 6x2) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 76 (46ಎ) ರನ್ ಕಲೆಹಾಕಿದರು.

ಸಂಜೆ ಮಳೆ ಸುರಿದ ಕಾರಣ ಕ್ರೀಡಾಂಗಣದ ಔಟ್ಫೀಲ್ಡ್ ಒದ್ದೆಯಾಗಿತ್ತು. ಆದ್ದರಿಂದ ಪಂದ್ಯವು ಸುಮಾರು ಒಂದು ಗಂಟೆ ವಿಳಂಬವಾಗಿ ಆರಂಭವಾಯಿತು. ಆದರೂ, ಯಾವುದೇ ಓವರ್ ಕಡಿತವಾಗಲಿಲ್ಲ. ಟಾಸ್ ಗೆದ್ದ ಆರ್ಸಿಬಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಇನಿಂಗ್ಸ್ನ ಮೂರನೇ ಓವರ್ನಲ್ಲಿ ವೇಗಿ ಭುವನೇಶ್ವರ್ ಕುಮಾರ್ ಪ್ರಯೋಗಿಸಿದ ಲೆಂಗ್ತ್ ಎಸೆತವನ್ನು ನೇರವಾಗಿ ಆಡಲು ಯತ್ನಿಸಿದ ಫಿನ್ ಅಲೆನ್ (18; 8ಎ, 4X3, 6X1) ಯೋಜನೆ ವಿಫಲವಾಯಿತು. ಬ್ಯಾಟ್ ಅಂಚು ಸವರಿದ್ದ ಚೆಂಡು ವಿಕೆಟ್ಕೀಪರ್ ಜಿತೇಶ್ ಶರ್ಮಾ ಅವರ ಕೈಗವಸುಗಳಲ್ಲಿ ಬಂಧಿಯಾಯಿತು. ಕಳೆದ ಪಂದ್ಯದಲ್ಲಿ ಫಿನ್ ಅವರು ಶತಕ ಬಾರಿಸಿದ್ದರು. ಅವರ ವಿಕೆಟ್ ಪಡೆಯುವ ಮೂಲಕ ಭುವಿ ತಾವು ಪವರ್ಪ್ಲೇನಲ್ಲಿ ಪ್ರಭಾವಿ ಎಂಬುದನ್ನು ಮತ್ತೊಮ್ಮೆ ತೋರಿಸಿದರು. ಇನ್ನೊಂದೆಡೆ ನಾಯಕ ಅಜಿಂಕ್ಯ ರಹಾನೆ (19; 13) ಅವರು ರಘುವಂಶಿಯೊಂದಿಗೆ ದೊಡ್ಡ ಜೊತೆಯಾಟಕ್ಕೆ ಸಜ್ಜಾದಂತೆ ಕಂಡರು. ಆದರೆ; ಆಸ್ಟ್ರೇಲಿಯಾ ವೇಗಿ ಜೋಶ್ ಹೇಝಲ್ವುಡ್ ತಮ್ಮದೇ ಎಸೆತದಲ್ಲಿ ಅಜಿಂಕ್ಯ ಅವರ ಕ್ಯಾಚ್ ಪಡೆದರು.

ಈ ಹಂತದಲ್ಲಿ ರಘುವಂಶಿ ಅವರೊಂದಿಗೆ ಜೊತೆಗೂಡಿದ ಕ್ಯಾಮೆರಾನ್ ಗ್ರೀನ್ (32; 24ಎ) ಮೂರನೇ ವಿಕೆಟ್ ಜೊತೆಯಾಟದಲ್ಲಿ 68 (46ಎಸೆತ) ರನ್ ಗಳಿಸಿದರು. ಇದರಿಂದಾಗಿ ತಂಡದ ಮೊತ್ತವು ಗಣನೀಯವಾಗಿ ಹೆಚ್ಚಿತು.

13ನೇ ಓವರ್ನಲ್ಲಿ ಈ ಜೊತೆಯಾಟಕ್ಕೆ ರಸಿಕ್ ಸಲಾಮ್ ದಾರ್ ಅವರು ತಡೆಯೊಡ್ಡಿದರು. ಗ್ರೀನ್ ಅವರನ್ನು ಕ್ಲೀನ್ಬೌಲ್ಡ್ ಮಾಡುವಲ್ಲಿ ರಸಿಕ್ ಯಶಸ್ವಿಯಾದರು. ಆದರೆ ಆರ್ಸಿಬಿಯ ಸಂಭ್ರಮ ಹೆಚ್ಚು ಹೊತ್ತು ಉಳಿಯಲು ರಘುವಂಶಿ ಮತ್ತು ರಿಂಕು ಸಿಂಗ್ ಬಿಡಲಿಲ್ಲ. ಉತ್ತಮ ಜೊತೆಯಾಟ ಬೆಳೆಸಿದರು. ಇನಿಂಗ್ಸ್ನ ಕೊನೆಯ ಎಸೆತದಲ್ಲಿ ರನ್ ಗಳಿಸುವ ಯತ್ನದಲ್ಲಿ ರಘುವಂಶಿ ರನ್ಔಟ್ ಆದರು. ರಿಂಕು ಅಜೇಯರಾಗುಳಿದರು.

ಈ ಪಂದ್ಯದಲ್ಲಿ ಆರ್ಸಿಬಿಯು ರೊಮಾರಿಯೊ ಶೆಫರ್ಡ್ ಬದಲಿಗೆ ವೇಗಿ ಜೇಕಬ್ ಡಫಿಗೆ ಅವಕಾಶ ನೀಡಿತು. ಆದರೆ ಅವರೂ ಕೂಡ 48 ರನ್ ಕೊಟ್ಟು ದುಬಾರಿಯಾದರು.

ಸಂಕ್ಷಿಪ್ತ ಸ್ಕೋರು: ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್ಗಳಲ್ಲಿ 4ವಿಕೆಟ್ಗಳಿಗೆ 192 (ಅಜಿಂಕ್ಯ ರಹಾನೆ 19, ಫಿನ್ ಅಲೆನ್ 18, ಕ್ಯಾಮರಾನ್ ಗ್ರೀನ್ 32, ಅಂಗಕ್ರಿಷ್ ರಘುವಂಶಿ 71, ರಿಂಕು ಸಿಂಗ್ ಔಟಾಗದೇ 49, ಭುವನೇಶ್ವರ್ ಕುಮಾರ್ 12ಕ್ಕೆ1, ಜೋಶ್ ಹೇಝಲ್ವುಡ್ 25ಕ್ಕೆ1, ರಸಿಕ್ ಸಲಾಮ್ 28ಕ್ಕೆ1)

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-51-859363109

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.