ಕ್ರಿಕೆಟ್‌: ಅನೀಶ್‌ ಆಲ್‌ರೌಂಡ್‌ ಆಟ

7

ಕ್ರಿಕೆಟ್‌: ಅನೀಶ್‌ ಆಲ್‌ರೌಂಡ್‌ ಆಟ

Published:
Updated:

ನೋಯಿಡಾ: ಅನೀಶ್‌ (29ರನ್ ಮತ್ತು 5ಕ್ಕೆ2) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಕರ್ನಾಟಕ ತಂಡ ಸ್ಕೂಲ್‌ ಸ್ಪೋರ್ಟ್ಸ್‌ ಪ್ರೊಮೋಷನ್‌ ಬೋರ್ಡ್‌ ರಾಷ್ಟ್ರೀಯ 16 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಮಹಾರಾಷ್ಟ್ರ ತಂಡವನ್ನು ಮಣಿಸಿದೆ.

ಮೊದಲು ಬ್ಯಾಟ್‌ ಮಾಡಿದ ಮಹಾರಾಷ್ಟ್ರ 85ರನ್‌ಗಳಿಗೆ ಆಲೌಟ್‌ ಆಯಿತು. ಸುಲಭ ಗುರಿಯನ್ನು ಕರ್ನಾಟಕ 2 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಸಂಕ್ಷಿಪ್ತ ಸ್ಕೋರ್‌: ಮಹಾರಾಷ್ಟ್ರ: 85 (ಮಂಥನ್‌ 26, ಸಿದ್ಧಾಂತ್‌ 17ಕ್ಕೆ2, ಅನೀಶ್‌ 5ಕ್ಕೆ2, ಶುಭಂ ಬಿಸ್ವಾಲ್‌ 6ಕ್ಕೆ2, ರೋಷನ್‌ 2ಕ್ಕೆ2). ಕರ್ನಾಟಕ: 2 ವಿಕೆಟ್‌ಗೆ 86 (ಅನೀಶ್‌ 29, ಶುಭಂ 33). ಫಲಿತಾಂಶ: ಕರ್ನಾಟಕ ತಂಡಕ್ಕೆ 8 ವಿಕೆಟ್‌ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !