ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಿಲ್‌ಗೆ 8 ವಿಕೆಟ್‌; ಲಯನ್ಸ್‌ಗೆ ಜಯ

Last Updated 21 ನವೆಂಬರ್ 2018, 19:49 IST
ಅಕ್ಷರ ಗಾತ್ರ

ಬೆಂಗಳೂರು: ಎಂಟು ವಿಕೆಟ್‌ ಉರು ಳಿಸಿದ ಸುನಿಲ್‌ ಕುಮಾರ್ ಅವರ ಪ್ರಭಾವಿ ದಾಳಿಯಿಂದ ಲಯನ್ಸ್ ಕ್ರಿಕೆಟ್‌ ಕ್ಲಬ್‌ ತಂಡ ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು ಒಂದು, ಐದನೇ ಡಿವಿಷನ್‌ ಕ್ರಿಕೆಟ್ ಲೀಗ್‌ನಲ್ಲಿ ಸುಲಭ ಜಯ ಸಾಧಿಸಿತು.

ಬುಧವಾರ ನಡೆದ ಪಂದ್ಯದಲ್ಲಿ ಲಯನ್ಸ್ ಕ್ಲಬ್‌ ತಂಡ ಯುವ ಸಂಘ ಕ್ರಿಕೆಟ್‌ ಕ್ಲಬ್‌ ಅನ್ನು 152 ರನ್‌ಗಳಿಂದ ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಲಯನ್ಸ್‌ 226 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಎದುರಾಳಿ ತಂಡ 114 ರನ್‌ಗಳಿಗೆ ಪತನಗೊಂಡಿತು.

ಸಂಕ್ಷಿಪ್ತ ಸ್ಕೋರು: ಲಯನ್ಸ್ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 9ಕ್ಕೆ 266 (ಇಬ್ರಾಹಿಂ 30, ಚೇತನ್ ಕೆ.ಎಲ್‌ 56, ದಿಲೀಪ್ ಕುಮಾರ್‌ 53, ವೆಂಕಟೇಶ್‌ 65; ಗಿರೀಶ್‌ ಕೆ.ಎಲ್‌ 41ಕ್ಕೆ2, ವಿವೇಕಾನಂದ 37ಕ್ಕೆ3); ಯುವ ಸಂಘ ಕ್ರಿಕೆಟ್ ಕ್ಲಬ್‌: 27.4 ಓವರ್‌ಗಳಲ್ಲಿ 114 (ಸುನಿಲ್ ಕುಮಾರ್‌ 26ಕ್ಕೆ8). ಫಲಿತಾಂಶ: ಲಯನ್ಸ್ ಕ್ರಿಕೆಟ್ ಕ್ಲಬ್‌ಗೆ 152 ರನ್‌ಗಳ ಜಯ. ದೂರವಾಣಿ ಕ್ರಿಕೆಟರ್ಸ್‌: 50 ಓವರ್‌ಗಳಲ್ಲಿ 6ಕ್ಕೆ 322 (ಶಾಂತಪ್ಪ 64, ಮಯಂಕ್ ಜೈನ್‌ 40, ವರುಣ್ ಅನ್ನದಾನಿ 82, ಲಿಖಿತ್ ಮಹೇಂದ್ರ 50; ವಿಕಾಸ್‌ 48ಕ್ಕೆ2); ಯಂಗ್‌ ಕ್ರಿಕೆಟರ್ಸ್‌ (2): 24.2 ಓವರ್‌ಗಳಲ್ಲಿ 91 (ರೋಹಿತ್‌ ಎ.ಕೆ 18ಕ್ಕೆ2, ಮಹೇಶ್‌ 42ಕ್ಕೆ5, ಹರ್ಷ 1ಕ್ಕೆ2). ಫಲಿತಾಂಶ: ದೂರವಾಣಿ ಕ್ರಿಕೆಟರ್ಸ್‌ಗೆ 231 ರನ್‌ಗಳ ಗೆಲುವು. ಯಂಗ್ ಬಾಯ್ಸ್ ಕ್ರಿಕೆಟ್ ಅಸೋಸಿಯೇಷನ್‌: 35.3 ಓವರ್‌ಗಳಲ್ಲಿ 203 (ಸುಶಾಂತ್‌ 36, ನಂದು ಸತೀಶ್‌ 56; ಹರ್ಷ ವೈ 27ಕ್ಕೆ3); ಬೌಲರ್ಸ್‌ ಕ್ರಿಕೆಟ್ ಕ್ಲಬ್‌: 28.5 ಓವರ್‌ಗಳಲ್ಲಿ 6ಕ್ಕೆ207 (ವಿನಾಯಕ್‌ 41, ಸಂದೇಶ್‌ ನಾಯಕ್‌ 44, ನಂದು ಸತೀಶ್‌ 42ಕ್ಕೆ3). ಫಲಿತಾಂಶ: ಬೌಲರ್ಸ್‌ ಕ್ರಿಕೆಟ್ ಕ್ಲಬ್‌ಗೆ ನಾಲ್ಕು ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT