ಗುರುವಾರ , ನವೆಂಬರ್ 21, 2019
20 °C

ಟಿ20 ಕ್ರಿಕೆಟ್‌ | ನ್ಯೂಜಿಲೆಂಡ್‌ ಎದುರು ಇಂಗ್ಲೆಂಡ್‌ಗೆ 7 ವಿಕೆಟ್ ಜಯ

Published:
Updated:

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ ತಂಡದೆದುರಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ ತಂಡ 7 ವಿಕೆಟ್‌ಗಳ ಸುಲಭ ಜಯ ದಾಖಲಿಸಿತು.

ಇಲ್ಲಿನ ಹ್ಯಾಗ್ಲೆ ಓವಲ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆತಿಥೇಯ ನ್ಯೂಜಿಲೆಂಡ್‌, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 153ರನ್‌ ಗಳಿಸಿತು. ಇಂಗ್ಲೆಂಡ್‌ ಪಡೆಯ ಬಿಗುವಿನ ಬೌಲಿಂಗ್‌ ಎದುರು ಅನುಭವಿ ಬ್ಯಾಟ್ಸ್‌ಮನ್‌ ರಾಸ್ ಟೇಲರ್‌(44), ಟೀಮ್‌ ಸೇಫರ್ಟ್‌(32) ಹಾಗೂ ಡರೆಲ್‌ ಮಿಚೆಲ್‌(30) ತಂಡದ ಮೊತ್ತ ನೂರೈವತ್ತರ ಗಡಿ ದಾಟಲು ನೆರವಾದರು.

ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌ ಆರಂಭ ಆಟಗಾರ ಜಾನಿ ಬೆಸ್ಟೊ(35), ನಾಯಕ ಇಯಾನ್‌ ಮಾರ್ಗನ್(34) ಹಾಗೂ ಅರ್ಧಶತಕ ಗಳಿಸಿದ ಜೇಮ್ಸ್‌ ವಿನ್ಸ್‌(59) ಬ್ಯಾಟಿಂಗ್ ನೆರವಿನಿಂದ ಕೇವಲ ಮೂರು ವಿಕೆಟ್‌ ಕಳೆದುಕೊಂಡು 18.3 ಓವರ್‌ಗಳಲ್ಲೇ ಗುರಿ ತಲುಪಿತು.

ಪ್ರವಾಸಿ ಪಡೆಯ ಮೂರೂ ವಿಕೆಟ್‌ಗಳು ಸ್ಪಿನ್ನರ್‌ ಮಿಚೆಲ್‌ ಸ್ಯಾಂಟ್ನರ್‌ಗೆ ದಕ್ಕಿದವು.

ಐದು ಪಂದ್ಯಗಳ ಸರಣಿ ಇದಾಗಿದ್ದು ಮುಂದಿನ ಪಂದ್ಯ ನವೆಂಬರ್‌ 03ರಂದು ‌ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.

ಪಂದ್ಯ ಶ್ರೇಷ್ಠ: ಜೇಮ್ಸ್‌ ವಿನ್ಸ್‌

ಪ್ರತಿಕ್ರಿಯಿಸಿ (+)