ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ಕ್ರಿಕೆಟ್‌: ನ್ಯೂಜಿಲೆಂಡ್ ವಿರುದ್ಧ ಸರ್ಫರಾಜ್‌ ಅಹ್ಮದ್ ಶತಕ

Last Updated 6 ಜನವರಿ 2023, 15:45 IST
ಅಕ್ಷರ ಗಾತ್ರ

ಕರಾಚಿ: ಅಂತಿಮ ದಿನದಾಟ ರೋಚಕತೆಯಿಂದ ಕೂಡಿದ್ದರೂ, ಪಾಕಿಸ್ತಾನ– ನ್ಯೂಜಿಲೆಂಡ್‌ ತಂಡಗಳ ನಡುವಿನ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ಕರಾಚಿಯಲ್ಲಿ ಶುಕ್ರವಾರ ಕೊನೆಗೊಂಡ ಪಂದ್ಯದಲ್ಲಿ ಪಾಕಿಸ್ತಾನ ತಂಡ 15 ರನ್‌ಗಳಿಂದ ಹಾಗೂ ನ್ಯೂಜಿಲೆಂಡ್‌ ತಂಡ ಕೇವಲ ಒಂದು ವಿಕೆಟ್‌ ಅಂತರದಿಂದ ಗೆಲುವಿನ ಅವಕಾಶ ಕಳೆದುಕೊಂಡಿತು.

ಜಯಕ್ಕೆ 319 ರನ್‌ಗಳ ಗುರಿ ಪಡೆದಿದ್ದ ಆತಿಥೇಯ ತಂಡ ಪಂದ್ಯ ಡ್ರಾದಲ್ಲಿ ಕೊನೆಗೊಂಡಾಗ 9 ವಿಕೆಟ್‌ಗಳಿಗೆ 304 ರನ್‌ ಗಳಿಸಿತ್ತು. ಸರಣಿಯ ಮೊದಲ ಪಂದ್ಯವೂ ಡ್ರಾ ಆಗಿತ್ತು.

ಗುರುವಾರ ರನ್‌ ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್‌ ಕಳೆದುಕೊಂಡಿದ್ದ ಪಾಕಿಸ್ತಾನ, ಶುಕ್ರವಾರ ಕೆಚ್ಚೆದೆಯಿಂದ ಹೋರಾಡಿತು. ಸರ್ಫರಾಜ್ ಅಹ್ಮದ್‌ (118) ಶತಕ ಗಳಿಸಿದರು. 176 ಎಸೆತಗಳನ್ನು ಎದುರಿಸಿದ ಅವರು 9 ಬೌಂಡರಿ ಹಾಗೂ ಒಂದು ಸಿಕ್ಸರ್‌ ಹೊಡೆದರು.

ಶಾನ್‌ ಮಸೂದ್‌, ಸೌದ್‌ ಶಕೀಲ್‌ ಮತ್ತು ಆಘಾ ಸಲ್ಮಾನ್‌ ಕೂಡಾ ಉಪಯುಕ್ತ ಆಟವಾಡಿದರು. ಮೈಕಲ್‌ ಬ್ರೇಸ್‌ವೆಲ್ (75ಕ್ಕೆ 4) ಒಳಗೊಂಡಂತೆ ನ್ಯೂಜಿಲೆಂಡ್‌ ಬೌಲರ್‌ಗಳು ಬಿಗುವಾದ ದಾಳಿ ನಡೆಸಿದರೂ ಗೆಲುವು ಪಡೆಯಲು ಆಗಲಿಲ್ಲ.

ಪಾಕ್‌ ತಂಡ 80 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಟಿಮ್‌ ಸೌಥಿ ಬಳಗಕ್ಕೆ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸುವ ಅವಕಾಶವಿತ್ತು. ಆದರೆ ಸರ್ಫರಾಜ್ ಅವರು ಶಕೀಲ್‌ ಜತೆ ಆರನೇ ವಿಕೆಟ್‌ಗೆ 123 ಹಾಗೂ ಸಲ್ಮಾನ್‌ ಜತೆ ಏಳನೇ ವಿಕೆಟ್‌ಗೆ 70 ರನ್‌ ಸೇರಿಸಿ ನ್ಯೂಜಿಲೆಂಡ್‌ ಗೆಲುವಿನ ಕನಸಿಗೆ ಅಡ್ಡಿಯಾದರು.

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್
ನ್ಯೂಜಿಲೆಂಡ್‌:
449, ಪಾಕಿಸ್ತಾನ: 408

ಎರಡನೇ ಇನಿಂಗ್ಸ್‌
ನ್ಯೂಜಿಲೆಂಡ್‌
5 ವಿಕೆಟ್‌ಗಳಿಗೆ 277 ಡಿಕ್ಲೇರ್ಡ್‌
ಪಾಕಿಸ್ತಾನ 90 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 304 (ಶಾನ್‌ ಮಸೂದ್‌ 35, ಬಾಬರ್‌ ಅಜಂ 27, ಸರ್ಫರಾಜ್‌ ಅಹ್ಮದ್‌ 118, ಸೌದ್‌ ಶಕೀಲ್‌ 32, ಆಘಾ ಸಲ್ಮಾನ್‌ 30, ಮೈಕಲ್‌ ಬ್ರೇಸ್‌ವೆಲ್‌ 75ಕ್ಕೆ 4, ಟಿಮ್‌ ಸೌಥಿ 43ಕ್ಕೆ 2, ಇಶ್‌ ಸೋಧಿ 59ಕ್ಕೆ 2)

ಫಲಿತಾಂಶ: ಪಂದ್ಯ ಡ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT