ಸೋಮವಾರ, ಮಾರ್ಚ್ 20, 2023
25 °C

Pakistan vs New Zealand | ಪಾಕ್–ನ್ಯೂಜಿಲೆಂಡ್ ಪಂದ್ಯ ಡ್ರಾ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

 ಕರಾಚಿ (ರಾಯಿಟರ್ಸ್‌): ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಇಲ್ಲಿ ನಡೆದ ಮೊದಲ ಟೆಸ್ಟ್ ಕ್ರಿಕೆಟ್‌ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.

ಕರಾಚಿ ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಕೊನೆಯ ದಿನವಾದ ಶುಕ್ರವಾರ ನ್ಯೂಜಿಲೆಂಡ್‌ ತಂಡವು ಗೆಲುವಿಗೆ 15 ಓವರ್‌ಗಳಲ್ಲಿ 138 ರನ್‌ ಗುರಿ ಪಡೆದಿತ್ತು. ಎರಡನೇ ಇನಿಂಗ್ಸ್‌ನಲ್ಲಿ 1 ವಿಕೆಟ್‌ ಕಳೆದುಕೊಂಡು 61 ರನ್‌ ಗಳಿಸಿದಾಗ ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ಮೊದಲ ಇನಿಂಗ್ಸ್‌ನಲ್ಲಿ 174 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ್ದ ಬಾಬರ್‌ ಅಜಂ ನಾಯಕತ್ವದ ಪಾಕಿಸ್ತಾನ 8 ವಿಕೆಟ್‌ಗೆ 311 ರನ್ ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿತ್ತು. ಇಮಾಮ್‌ ಉಲ್ ಹಕ್‌ (96) ಶತಕ ವಂಚಿತರಾದರೆ, ಸರ್ಫರಾಜ್ ಅಹಮದ್ (53) ಮತ್ತು ಸೌದ್‌ ಶಕೀಲ್‌ (55) ಅರ್ಧಶತಕಗಳ ಕಾಣಿಕೆ ನೀಡಿದರು. ಕಿವೀಸ್‌ನ ಇಶ್ ಸೋಧಿ (86ಕ್ಕೆ 6) ಬೌಲಿಂಗ್‌ನಲ್ಲಿ ಮಿಂಚಿದರು.

ಎರಡನೇ ಟೆಸ್ಟ್ ಸೋಮವಾರ ಇದೇ ಅಂಗಣದಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್: ಪಾಕಿಸ್ತಾನ 130.5 ಓವರ್‌ಗಳಲ್ಲಿ 438. ನ್ಯೂಜಿಲೆಂಡ್‌ 194.5 ಓವರ್‌ಗಳಲ್ಲಿ 9 ವಿಕೆಟ್‌ಗೆ 612 ಡಿ‌ಕ್ಲೇರ್ಡ್‌. ಎರಡನೇ ಇನಿಂಗ್ಸ್‌: ಪಾಕಿಸ್ತಾನ 104 ಓವರ್‌ಗಳಲ್ಲಿ 8ಕ್ಕೆ 311 ಡಿಕ್ಲೇರ್ಡ್‌ (ಇಮಾಮ್ ಉಲ್ ಹಕ್‌ 96, ಸರ್ಫರಾಜ್ ಅಹಮದ್‌ 53, ಸೌದ್‌ ಶಕೀಲ್‌ ಔಟಾಗದೆ 55, ಮೊಹಮ್ಮದ್ ವಾಸೀಂ 43; ಮೈಕೆಲ್ ಬ್ರೇಸವೆಲ್‌ 82ಕ್ಕೆ 2, ಇಶ್ ಸೋಧಿ 86ಕ್ಕೆ 6). ನ್ಯೂಜಿಲೆಂಡ್‌ 7.3 ಓವರ್‌ಗಳಲ್ಲಿ 1ಕ್ಕೆ 61 ( ಡೆವೊನ್ ಕಾನ್ವೆ ಔಟಾಗದೆ 18, ಟಾಮ್ ಲಥಾಮ್‌ ಔಟಾಗದೆ 35; ಅಬ್ರಾರ್ ಅಹಮದ್‌ 23ಕ್ಕೆ 1).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು