ಬೆಂಗಳೂರು: ‘ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ನಿರ್ಮಾಣವಾಗಿರುವುದು ವೈಜ್ಞಾನಿಕ ಆಧಾರದ ಮೇಲೆ. ಇಡೀ ದೇಶದಲ್ಲಿ ವೈಜ್ಞಾನಿಕ ರೀತಿಯಲ್ಲಿ ಪಿಚ್ ನಿರ್ಮಾಣ ಮಾಡುವುದನ್ನು ಮೊದಲಿಗೆ ಆರಂಭಿಸಿದ್ದು ಕರ್ನಾಟಕದ ಹೆಗ್ಗಳಿಕೆ. 25 ವರ್ಷಗಳ ಹಿಂದೆ ಇಲ್ಲಿ ಮಂಡ್ಯದ ಮಣ್ಣು ಬಳಸಿ ಪಿಚ್ ಮಾಡಲು ಶುರು ಮಾಡಿದ್ದರಿಂದ ಇಲ್ಲಿಯವರೆಗೆ ಉತ್ತಮ ಫಲಿತಾಂಶಗಳು ಬಂದಿವೆ‘–

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಮಾಜಿ ಪಿಚ್ ಕ್ಯೂರೇಟರ್ ಎಸ್. ನಾರಾಯಣರಾಜು ಅವರ ಹೆಮ್ಮೆಯ ನುಡಿಗಳು ಇವು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಟೂರ್ನಿಯ 19ನೇ ಆವೃತ್ತಿಯ ಉದ್ಘಾಟನೆ ಪಂದ್ಯದಲ್ಲಿ ಪಿಚ್ ಬ್ಯಾಟರ್ ಮತ್ತು ಬೌಲರ್ಗಳಿಬ್ಬರಿಗೂ ಸಮಾನ ಅವಕಾಶವನ್ನು ನೀಡಿತು. ಅದರಿಂದಾಗಿ ಈ ಪಂದ್ಯದಲ್ಲಿ ಒಟ್ಟು 404 ರನ್ಗಳು ದಾಖಲಾದವು. 13 ವಿಕೆಟ್ಗಳೂ ಉರುಳಿದವು. ವೇಗ, ಸ್ಪಿನ್ ಬೌಲಿಂಗ್ಗಳೆರಡಕ್ಕೂ ನೆರವು ನೀಡುವ ಪಿಚ್ ಇದಾಗಿದೆ. ಈ ಅಂಕಣದಲ್ಲಿ ಇಂತಹ ಗುಣ ಹೇಗೆ ಬಂದಿತು ಎಂಬುದರ ಬಗ್ಗೆ ನಾರಾಯಣರಾಜು ‘ಪ್ರಜಾವಾಣಿ’ಗೆ ವಿವರಿಸಿದ್ದಾರೆ.

‘ಚೆನ್ನಾಗಿ ನಿರ್ವಹಣೆ ಮಾಡಿದರೆ ನೂರು ವರ್ಷ ಕೂಡ ಬಾಳಿಕೆ ಬರುತ್ತದೆ. ಅಂತಹ ಶಕ್ತಿ ಮಂಡ್ಯದಲ್ಲಿ ಸಿಗುವ ಮಣ್ಣಿಗೆ ಇದೆ. 2001ರಲ್ಲಿ ಪದಾಧಿಕಾರಿಯಾಗಿದ್ದ ಬ್ರಿಜೇಶ್ ಅವರು ನನ್ನನ್ನು ಕ್ಯೂರೇಟರ್ ಆಗಿ ನೇಮಕ ಮಾಡಿದರು. ಆಗೆಲ್ಲ ಈಗಿರುವಷ್ಟು ತಂತ್ರಜ್ಞಾನದ ಅನುಕೂಲತೆಗಳು ಇರಲಿಲ್ಲ. ಆಧುನಿಕ ಕ್ರಿಕೆಟ್ಗೆ ತಕ್ಕಂತೆ ಪಿಚ್ ಸಿದ್ಧಪಡಿಸಲು ನಾನು ಬಹಳಷ್ಟು ದಾಖಲೆಗಳನ್ನು ಅಧ್ಯಯನ ಮಾಡಬೇಕಾಯಿತು. ಮಣ್ಣಿನ ಮಹತ್ವ ಅರಿತುಕೊಂಡೆ. ಅದೇ ಸಂದರ್ಭದಲ್ಲಿ ಸಿಂಗಪುರದಲ್ಲಿ ಟೂರ್ನಿಯೊಂದಕ್ಕೆ ರಾಜ್ಯ ಹೋದಾಗ ಅಲ್ಲಿದ್ದ ಪಿಚ್ ಗಮನಿಸಿದೆ. ಚೆಂಡು ತುಂಬಾ ಚೆನ್ನಾಗಿ ಪುಟಿಯುತ್ತಿತ್ತು. ಆ ಅಂಕಣಕ್ಕೆ ಮೆಲ್ಬರ್ನ್ನಿಂದ ತಂದ ಮಣ್ಣು ಹಾಕಿದ್ದರು. ಅದರ ಮಾದರಿಯನ್ನು ಭಾರತಕ್ಕೆ ತೆಗೆದುಕೊಂಡು ಬಂದೆ. ಇಲ್ಲಿಯ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದಲ್ಲಿ ಪರೀಕ್ಷೆ ಮಾಡಿಸಲಾಯಿತು. ದಕ್ಷಿಣ ಭಾರತದಲ್ಲಿ ಈ ತರಹದ ಮಣ್ಣು ಎಲ್ಲಿ ಸಿಗಬಹುದು ಎಂಬ ಮಾಹಿತಿ ಪಡೆದುಕೊಂಡೆವು. ನಂತರ ಎಲ್ಲ ಕಡೆ ಓಡಾಡಿ 40 ಮಾದರಿಗಳನ್ನು ತೆಗೆದುಕೊಂಡು ಬಂದೆ. ಅದರಲ್ಲಿ ರಾಯಚೂರು ಜಿಲ್ಲೆಯ ಸಾವಂತಗೇರಿಯಿಂದ ತಂದ ಮಣ್ಣು ಚೆನ್ನಾಗಿತ್ತು. ಅದನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಬಿ ಮೈದಾನದಲ್ಲಿ ಪಿಚ್ ಮಾಡಲು ಬಳಸಲಾಯಿತು. ಅಭ್ಯಾಸಕ್ಕಾಗಿ ಅದು ಉತ್ತಮವಾಗಿ ರೂಪುಗೊಂಡಿತು’ ಎಂದು ಹೇಳಿದರು.

‘ಮುಖ್ಯ ಮೈದಾನದಲ್ಲಿ ಚೆಂಡಿನ ಪುಟಿತ ಕಡಿಮೆಯಾಗಿತ್ತು. ಅದರಿಂದಾಗಿ ಪಿಚ್ ನವೀಕರಣ ಮಾಡಲು ನಿರ್ಧರಿಸಲಾಯಿತು. ಅದಕ್ಕಾಗಿ ಉತ್ತಮ ಮಣ್ಣನ್ನು ಹುಡುಕಲು ಆರಂಭಿಸಿದೆವು. ನ್ಯೂಜಿಲೆಂಡ್ನ ಸ್ಪೋರ್ಟ್ಸ್ ಟರ್ಫ್ ಸಂಸ್ಥೆಯ ಬ್ಲೇರ್ ಕ್ರಿಸ್ಟಿಯಾನ್ಸೆನ್ ಅವರನ್ನು ಕರೆಸಿ ಬ್ರಿಜೇಶ್ ಪಟೇಲ್ ಅವರು ಅಭಿಪ್ರಾಯ ಪಡೆದರು. ಅದೊಂದು ಬಾರಿ ಬ್ರಿಜೇಶ್, ಬ್ಲೇರ್ ಮತ್ತು ನಾನು ಮೈಸೂರಿಗೆ ಹೋಗಿದ್ದೆವು. ಮರಳಿ ಬರುವಾಗ ಮಂಡ್ಯದ ಹತ್ತಿರ ಊಟ ಮಾಡಿದೆವು. ಅಲ್ಲಿಯೇ ಸಮೀಪದಲ್ಲಿದ್ದ ಹೊಳಲು ಎಂಬ ಕೆರೆಯ ಬಳಿ ಇರುವ ಮಣ್ಣು ನೋಡಿದೆ. ಅದನ್ನು ಪರೀಕ್ಷೆಗಾಗಿ ತೆಗೆದುಕೊಂಡು ಬಂದೆವು. ಅಲ್ಲಿಯ ಶಾಸಕರೊಬ್ಬರು ನಮಗೆ ಸಹಾಯ ಮಾಡಿದರು. ಉತ್ತಮ ಜಿಗುಟುತನ, ನೀರಿನ ಧಾರಣೆಯ ಸಾಮರ್ಥ್ಯ ಆ ಮಣ್ಣಿಗಿತ್ತು. ಅದನ್ನು ಬಳಸಲು ಬ್ಲೇರ್ ಕೂಡ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲಿಂದ ಇದೇ ಮಣ್ಣನ್ನು ಪಿಚ್ಗೆ ಹಾಕಲಾಯಿತು’ ಎಂದರು.

'ಈ ಪಿಚ್ನಲ್ಲಿ ಆಡಿರುವ ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ತಂಡದ ಆಟಗಾರರು ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2011ರ ವಿಶ್ವಕಪ್ ಪಂದ್ಯಗಳು ತುಂಬಾ ಯಶಸ್ವಿಯಾಗಿ ನಡೆದವು. ಮ್ಯಾಚ್ ರೆಫರಿಯಾಗಿದ್ದ ರೋಷನ್ ಮಹಾನಾಮ ಅವರು ಮೆಚ್ಚುಗೆಯ ಪತ್ರ ಕೊಟ್ಟರು. ಐಪಿಎಲ್ ಟೂರ್ನಿಗಳಲ್ಲಿ ಸತತವಾಗಿ ಶ್ರೇಷ್ಠ ಪಿಚ್ ಎಂಬ ಗೌರವ ಪಡೆದಿದ್ದು ನನ್ನ ವೃತ್ತಿಜೀವನದ ಅವಿಸ್ಮರಣೀಯ ಸಾಧನೆಗಳಾಗಿವೆ. ಕ್ರಿಕೆಟ್ ಕ್ಷೇತ್ರಕ್ಕೆ ಪಿಚ್ ಸಿದ್ಧತೆಯ ವೈಜ್ಞಾನಿಕ ಪದ್ಧತಿ ಪರಿಚಯಿಸಿದ ತೃಪ್ತಿ ನನಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.