ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ, ತಮಿಳುನಾಡು ತಂಡಗಳಿಗೆ ಜಯ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ –20 ಕ್ರಿಕೆಟ್ ಟೂರ್ನಿ:
Last Updated 27 ನವೆಂಬರ್ 2019, 20:18 IST
ಅಕ್ಷರ ಗಾತ್ರ

ಸೂರತ್: ಆಲ್‌ರೌಂಡರ್ ದೀಪಕ್ ಚಾಹರ್ ಅಜೇಯ ಅರ್ಧಶತಕ ಮತ್ತು ಅಜಿತ್ ಗುಪ್ತಾ (12ಕ್ಕೆ3) ಅವರಿಬ್ಬರ ಆಟದ ಬಲದಿಂದ ರಾಜಸ್ಥಾನ ತಂಡವು ಬುಧವಾರ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯ ಎ ಗುಂಪಿನ ಸೂಪರ್‌ ಲೀಗ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿತು. ‌

ಸಿ.ಬಿ. ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ದೀಪಕ್ (ಔಟಾಗದೆ 55; 42ಎಸೆತ, 7ಬೌಂಡರಿ) ಅವರ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 133 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ದೆಹಲಿ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 131 ರನ್‌ ಗಳಿಸಿತು. ರಿಷಭ್ ಪಂತ್ (30) ಮತ್ತು ಲಲಿತ್ ಯಾದವ್ (30 ) ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ರಾಜಸ್ಥಾನದ ಅಜಿತ್ ಗುಪ್ತಾ ಮೂರು, ಎಡಗೈ ಮಧ್ಯಮವೇಗಿ ಖಲೀಲ್ ಅಹಮದ್ (20ಕ್ಕೆ2) ಮತ್ತು ರಾಹುಲ್ ಚಾಹರ್ (26ಕ್ಕೆ2) ಅವರು ದೆಹಲಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು. ಇದರೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ರಾಜಸ್ಥಾನ ತಂಡವು ಸೆಮಿಫೈನಲ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿತು.

ಹರಿಯಾಣಕ್ಕೆ ಸೋಲು: ಸೂಪರ್ ಲೀಗ್ ಹಂತದಲ್ಲಿ ಹರಿಯಾಣ ತಂಡವು ಮೊದಲ ಸೋಲು ಅನುಭವಿಸಿತು. ಲಾಲ್‌ಭಾಯಿ ಕಾಟ್ರ್ಯಾಕ್ಟರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹರಿಯಾಣ ತಂಡದ ಎದುರು ಮಹಾರಾಷ್ಟ್ರ ಎರಡು ರನ್‌ಗಳ ರೋಚಕ ಜಯ ಗಳಿಸಿತು.

ಆದರೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡ ಹರಿಯಾಣ ತಂಡವು ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿತು.

ಸಂಕ್ಷಿಪ್ತ ಸ್ಕೋರು:

ರಾಜಸ್ಥಾನ: 20 ಓವರ್‌ಗಳಲ್ಲಿ 7ಕ್ಕೆ 133 (ರಾಜೇಶ್ ಬಿಷ್ಣೋಯಿ 36, ಸಲ್ಮಾನ್ ಖಾನ್ 23, ದೀಪಕ್ ಚಾಹರ್ ಔಟಾಗದೆ 55, ಸುಬೋಧ್ ಬಾಟಿ 20ಕ್ಕೆ2, ನಿತೀಶ್ ರಾಣಾ 25ಕ್ಕೆ2), ದೆಹಲಿ: 20 ಓವರ್‌ಗಳಲ್ಲಿ 9ಕ್ಕೆ131 (ರಿಷಭ್ ಪಂತ್ 30, ಲಲಿತ್ ಯಾದವ್ 30, ವರುಣ್ ಸೂದ್ 24, ಅನಿಕೇತ್ ಚೌಧರಿ 35ಕ್ಕೆ2, ಖಲೀಲ್ ಅಹಮದ್ 20ಕ್ಕೆ2, ಅಜಿತ್ ಗುಪ್ತಾ 12ಕ್ಕೆ3, ರಾಹುಲ್ ಚಾಹರ್ 26ಕ್ಕೆ2), ಫಲಿತಾಂಶ: ರಾಜಸ್ಥಾನ ತಂಡಕ್ಕೆ 2 ರನ್‌ ಜಯ.

ಮಹಾರಾಷ್ಟ್ರ: 20 ಓವರ್‌ಗಳಲ್ಲಿ 5ಕ್ಕೆ 167 (ಋತುರಾಜ್ ಗಾಯಕವಾಡ್ 27, ವಿಜಯ್ ಜೋಲ್ 38, ರಾಹುಲ್ ತ್ರಿಪಾಠಿ 61, ಸುಮಿತ್ ಕುಮಾರ್ 32ಕ್ಕೆ3), ಹರಿಯಾಣ: 20 ಓವರ್‌ಗಳಲ್ಲಿ 7ಕ್ಕೆ165 (ಹರ್ಷಲ್ ಪಟೇಲ್ 22, ಶಿವಂ ಚೌಹಾಣ್ 33, ಹಿಮಾಂಶು ರಾಣಾ 28, ರಾಹುಲ್ ತೆವಾಟಿಯಾ 28, ಅಜೀಂ ಖಾಜಿ 41ಕ್ಕೆ2) ಫಲಿತಾಂಶ: ಮಹಾರಾಷ್ಟ್ರ ತಂಡಕ್ಕೆ 2 ರನ್‌ಗಳ ಜಯ.

ಜಾರ್ಖಂಡ್: 18.1 ಓವರ್‌ಗಳಲ್ಲಿ 85 (ಸೌರಭ್ ತಿವಾರಿ 24, ಸುಮಿತ್ ಕುಮಾರ್ 19, ವಾಷಿಂಗ್ಟನ್ ಸುಂದರ್ 10ಕ್ಕೆ3, ಸಿದ್ಧಾರ್ಥ ಮಣಿಮಾರನ್ 18ಕ್ಕೆ4), ತಮಿಳುನಾಡು: 13.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 86 (ಶಾರೂಕ್ ಖಾನ್ 24, ವಾಷಿಂಗ್ಟನ್ ಸುಂದರ್ ಔಟಾಗದೆ 38, ದಿನೇಶ್ ಕಾರ್ತಿಕ್ ಔಟಾಗದೆ 13, ಉತ್ಕರ್ಷ್ ಸಿಂಗ್ 21ಕ್ಕೆ1, ಸೋನು ಸಿಂಗ್ 22ಕ್ಕೆ1) ಫಲಿತಾಂಶ: ತಮಿಳುನಾಡು ತಂಡಕ್ಕೆ 8 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT