ಬುಧವಾರ, ನವೆಂಬರ್ 20, 2019
21 °C

ಅಂತರ್‌ ಕಾಲೇಜು ಕ್ರಿಕೆಟ್‌: ಸಿನರ್ಜಿ ಕಾಲೇಜಿಗೆ ಗೆಲುವು

Published:
Updated:
Prajavani

ರಾಯಚೂರು: ಪಿ. ಅಶೋಕಕುಮಾರ್‌ ಅವರ ಸ್ಮರಣಾರ್ಥ ‘ಸಿಟಿ XI ಕ್ರಿಕೆಟ್‌ ಕ್ಲಬ್‌’ನಿಂದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಂತರ್‌ಕಾಲೇಜು ಕ್ರಿಕೆಟ್‌ ಟೂರ್ನಮೆಂಟ್‌ನಲ್ಲಿ ಸಿನರ್ಜಿ ಕಾಲೇಜಿನ ತಂಡವು ಪ್ರಥಮ ಸ್ಥಾನ ಪಡೆಯಿತು.

ಎಲ್‌ವಿಡಿ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆಯಿತು. ಅಕ್ಟೋಬರ್‌ 6 ರಿಂದ ಆರಂಭವಾಗಿದ್ದ ಟೂರ್ನಮೆಂಟ್‌ ಭಾನುವಾರ ಸಮಾರೋಪಗೊಂಡಿತು.

ನಗರಸಭೆ ಸದಸ್ಯ ಸಾಜೀದ್‌ ಸಮೀರ್‌, ಕೆಪಿಟಿಸಿಎಲ್‌ ಸಂಘದ ಸಂಘಟನಾ ಕಾರ್ಯದರ್ಶಿ ಜೆ.ಎಲ್‌.ಗೋಪಿ, ಪಿ.ಬಸವರಾಜ, ಸಿಟಿ XI ಕ್ರಿಕೆಟ್‌ ಕ್ಲಬ್‌ ಅಧ್ಯಕ್ಷ ಕೆ.ಶರಣರೆಡ್ಡಿ ಅವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕೆ.ಭೀಮಾಚಾರಿ ಹೊಸಮನಿ ನಿರ್ಣಾಯಕರಾಗಿದ್ದರು. ಮುಖ್ಯ ತರಬೇತುದಾರ ವೆಂಕಟರೆಡ್ಡಿ, ರವಿ ಬಿ.ಆರ್‌., ಭರತ ಇದ್ದರು. ಮಹಿಳಾ ಕ್ರಿಕೆಟ್‌ ತಂಡದವರು ಭಾಗವಹಿಸಿ ಪ್ರೋತ್ಸಾಹಿಸಿದರು. ದೇವನಪಲ್ಲಿ ಶ್ರೀನಿವಾಸ ನಿರೂಪಿಸಿ, ವಂದಿಸಿದರು. 

ಪ್ರತಿಕ್ರಿಯಿಸಿ (+)