ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಗೂ ಕೊರೊನಾ ಕಾಟ

Last Updated 22 ಜೂನ್ 2020, 17:08 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್: ಕೊರೊನಾ ವೈರಾಣು ‘ಕ್ರಿಕೆಟ್ ದಕ್ಷಿಣ ಆಫ್ರಿಕಾ’ವನ್ನೂ ಕಾಡಿದೆ. ಸಿಎಸ್‌ಎಯ ಏಳು ಮಂದಿಗೆ ಕೋವಿಡ್–19 ಇರುವುದ ದೃಢಪಟ್ಟಿದೆ ಎಂದು ಆಡಳಿತ ಸಮಿತಿ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಜಾಕ್ಸ್ ಫಾಲ್ ಸೋಮವಾರ ತಿಳಿಸಿದ್ದಾರೆ. ಇದು, ಸಹಜಸ್ಥಿತಿಗೆ ಮರಳುತ್ತಿರುವ ಕ್ರೀಡಾಕ್ಷೇತ್ರವನ್ನು ಆತಂಕದಲ್ಲಿ ಕೆಡವಿದೆ.

ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ಸಂಸ್ಥೆಯ ಒಟ್ಟು 100 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಂಕಿತರ ಹೆಸರು ಮತ್ತು ವಿವರಗಳನ್ನು ಬಹಿರಂಗಪಡಿಸಲು ಸರ್ಕಾರದ ವೈದ್ಯಕೀಯ ನೀತಿ ಪ್ರಕಾರ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಮಾರ್ಚ್‌ನಲ್ಲಿ ಲಾಕ್‌ಡೌನ್ ಆದ ನಂತರ ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಚಟುವಟಿಕೆ ನಡೆಯಲಿಲ್ಲ. 24 ಪ್ರಮುಖ ಆಟಗಾರರನ್ನು ಒಳಗೊಂಡ ಮೂರು ತಂಡಗಳ ವಿಶಿಷ್ಟ ಪಂದ್ಯವೊಂದನ್ನು ಆಯೋಜಿಸಲು ಕ್ರಿಕೆಟ್ ದಕ್ಷಿಣ ಆಫ್ರಿಕಾ ನಿರ್ಧರಿಸಿತ್ತು. ಲಾಕ್‌ಡೌನ್ ಮುಗಿದ ನಂತರ ಇಲ್ಲಿ ನಡೆಯಲಿರುವ ಮೊದಲ ಪ್ರಮುಖ ಕ್ರೀಡಾ ಚಟುವಟಿಕೆ ಇದಾಗಿತ್ತು. ಆದರೆ ಸರ್ಕಾರದಿಂದ ಅನುಮತಿ ಸಿಗದ ಕಾರಣ ಇದನ್ನು ಮುಂದೂಡಲಾಗಿದೆ ಎಂದು ಕಳೆದ ಶನಿವಾರ ತಿಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT