ಗುವಾಹಟಿ (ಪಿಟಿಐ): ಅಫ್ಗಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಗೆ ಮಂಗಳವಾರ ಭಾರತ ತಂಡಗಳನ್ನು ಪ್ರಕಟಿಸಲಾಗುತ್ತಿದ್ದು, ಅಗ್ರಗಣ್ಯ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರ ಕಾರ್ಯಭಾರ ನಿರ್ವಹಣೆ ಮತ್ತು ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.

ಈ ಅಲ್ಪಾವಧಿಯ ಪ್ರವಾಸ ನವ ಚಂಡೀಗಢದ ಮುಲ್ಲನಪುರದಲ್ಲಿ ಜೂನ್ 6ರಿಂದ ಟೆಸ್ಟ್ ಪಂದ್ಯದೊಡನೆ ಆರಂಭವಾಗಲಿದೆ. ಏಕದಿನ ಪಂದ್ಯಗಳು ಜೂನ್ 14, 17 ಮತ್ತು 20ರಂದು ಕ್ರಮವಾಗಿ ಧರ್ಮಶಾಲಾ, ಲಖನೌ ಮತ್ತು ಚೆನ್ನೈನಲ್ಲಿ ನಿಗದಿಯಾಗಿವೆ.

ಬೂಮ್ರಾ ಅವರು ಎರಡೂ ತಂಡಗಳಲ್ಲಿ ಅವಕಾಶ ಪಡೆಯುವ ಸಾಧ್ಯತೆ ಯಿಲ್ಲ. ಏಕದಿನ ವಿಶ್ವಕಪ್ ಬಹಳ ದೂರ (2027ರ ಅಕ್ಟೋಬರ್– ನವೆಂಬರ್) ಇರುವ ಕಾರಣ ಅವರಿಗೆ ತಕ್ಷಣಕ್ಕೆ ಈ ಮಾದರಿಯಲ್ಲಿ ಆಡುವ ಜರೂರು ಕಾಣುತ್ತಿಲ್ಲ.

ಹ್ಯಾಮ್ಸ್ಟ್ರಿಂಗ್ (ಅಸ್ಥಿ ರಜ್ಜು) ನೋವಿನಿಂದಾಗಿ ರೋಹಿತ್ ಅವರು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೆಲವು ಪಂದ್ಯಗಳನ್ನು ಕಳೆದು ಕೊಂಡಿದ್ದರು. ಪಂಜಾಬ್ ಕಿಂಗ್ಸ್ ಪರ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾತ್ರ ಮಾಡಿದ್ದರು. ಅವರು ಶೇ 100ರಷ್ಟು ಫಿಟ್ ಆಗಿದ್ದಲ್ಲಿ ಮಾತ್ರ ಆಯ್ಕೆಗಾರರು ಏಕದಿನ ತಂಡಕ್ಕೆ ಆಯ್ಕೆಗೆ ಪರಿಗಣಿಸಬಹುದು. ಇನ್ನೊಬ್ಬ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅಮೋಘ ಲಯದಲ್ಲಿದ್ದು, ಏಕದಿನ ಸರಣಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ಏಕೈಕ ಟೆಸ್ಟ್ಗೆ ಹೆಚ್ಚಿನ ಮಹತ್ವವಿದೆ. ಏಕೆಂದರೆ ತವರಿನಲ್ಲಿ ಭಾರತ ಈ ಮಾದರಿಯಲ್ಲಿ ಸತತವಾಗಿ ಹಿನ್ನಡೆ ಕಾಣುತ್ತಿದೆ. ಸ್ಪಿನ್ಸ್ನೇಹಿ ಅಂಗಣಗಳಲ್ಲಿ ಬ್ಯಾಟರ್ಗಳು ಪರದಾಡುತ್ತಿದ್ದಾರೆ. ಹೋದ ನವೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೀನಾಯವಾಗಿ ಸರಣಿ ಸೋತಿತ್ತು.

ಚೇತೇಶ್ವರ ಪೂಜಾರ ಅವರು ತಂಡದಿಂದ ಹೊರಬಿದ್ದ ನಂತರ ಮೂರನೇ ಕ್ರಮಾಂಕದಲ್ಲಿ ಭಾರತ ತಂಡವು ಯೋಗ್ಯ ಆಟಗಾರನನ್ನು ಕಂಡುಕೊಳ್ಳಲು ವಿಫಲವಾಗಿದೆ. ಸಾಯಿ ಸುದರ್ಶನ್ ಅವಕಾಶ ಪಡೆದರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ದೇಶಿ ಕ್ರಿಕೆಟ್ನಲ್ಲಿ ಯಶಸ್ಸು ಕಾಣುತ್ತಿರುವ ದೇವದತ್ತ ಪಡಿಕ್ಕಲ್ ಅವರಿಗೆ ಅವಕಾಶ ಒಲಿಯುವ ಸಾಧ್ಯತೆಯಿದೆ.

ರಣಜಿ ಋತುವಿನಲ್ಲಿ ಅಮೋಘ ಬೌಲಿಂಗ್ ಮಾಡಿ 60 ವಿಕೆಟ್ಗಳನ್ನು ಪಡೆದಿದ್ದ ಜಮ್ಮು ಮತ್ತು ಕಾಶ್ಮೀರದ ವೇಗಿ ಅಕಿಬ್ ನಬಿ ಅವರನ್ನು ಆಯ್ಕೆಗಾರರು ಪರಿಗಣಿಸಬಹುದು.

ಏಕದಿನಕ್ಕೆ ಪ್ರಿನ್ಸ್ ಯಾದವ್?: ಹಾಲಿ ಐಪಿಎಲ್ನಲ್ಲಿ ತಮ್ಮ ವೇಗ ಮತ್ತು ನಿಖರ ಬೌಲಿಂಗ್ನಿಂದಾಗಿ ಗಮನ ಸೆಳೆದಿರುವ ಪ್ರಿನ್ಸ್ ಯಾದವ್ ಅವರನ್ನು ಏಕದಿನ ಸರಣಿಗೆ ಪರಿಗಣಿಸಿದರೆ ಅಚ್ಚರಿಯಿಲ್ಲ. ಬೂಮ್ರಾ ಈ ಸರಣಿಯ ಭಾಗವಾಗದಿದ್ದರೆ ಮೊಹಮ್ಮದ್ ಸಿರಾಜ್ ದಾಳಿಯ ನೇತೃತ್ವ ವಹಿಸಬಹುದು. ಪ್ರಸಿದ್ಧ ಕೃಷ್ಣ ಕೂಡ ಒಳಗೊಳ್ಳಬಹುದು.

ರೋಹಿತ್ ಅವರಂತೆ ಪಾಂಡ್ಯ ಅವರಿಗೂ ಫಿಟ್ನೆಸ್ ಸಮಸ್ಯೆ ಕಾಡಿದೆ. ಬೆನ್ನುನೋವಿನಿಂದಾಗಿ ಕೆಲವು ಪಂದ್ಯ ಕಳೆದುಕೊಂಡಿರುವ ಅವರು ಏಕದಿನ ತಂಡದಲ್ಲಿರುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-51-374663032

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.