ಅಹಮದಾಬಾದ್: ಟೆಸ್ಟ್ ಪಂದ್ಯಗಳ ವೇಳೆ ಮಂದಬೆಳಕಿನಿಂದಾಗಿ ಆಟಕ್ಕೆ ಅಡ್ಡಿಯಾದಲ್ಲಿ ನಸುಗೆಂಪು (ಪಿಂಕ್) ಬಣ್ಣದ ಚೆಂಡನ್ನು ಪ್ರಾಯೋಗಿಕ ನೆಲೆಯಲ್ಲಿ ಬಳಸಲು ಐಸಿಸಿ ಸಮ್ಮತಿ ನೀಡಿದೆ. ಡ್ರಿಂಕ್ಸ್ (ಪಾನೀಯ ವಿರಾಮದ) ವೇಳೆ ಹೆಡ್ ಕೋಚ್ಗಳಿಗೆ ಮಧ್ಯಾಹ್ನ ಪ್ರವೇಶಿಸಲು ಅವಕಾಶ ನೀಡಿರುವುದು ಆಟದ ನಿಯಮಗಳಲ್ಲಿ ತಂದಿರುವ ಇನ್ನೊಂದು ಪ್ರಮುಖ ಬದಲಾವಣೆಯಾಗಿದೆ.

ಭಾನುವಾರ ಇಲ್ಲಿ ಮುಕ್ತಾಯಗೊಂಡ ಐಸಿಸಿ ನಿರ್ದೇಶಕ ಮಂಡಳಿಯ ಎರಡು ದಿನಗಳ ಸಭೆಯಲ್ಲಿ ಈ ಪ್ರಮುಖ ನಿರ್ಧಾರ ಗಳನ್ನು ಕೈಗೊಳ್ಳಲಾಗಿದೆ. ಭ್ರಷ್ಟಾಚಾರ, ಅಕ್ರಮಗಳ ಆರೋಪಗಳನ್ನು ಎದುರಿಸುತ್ತಿರುವ ಕ್ರಿಕೆಟ್ ಕೆನಡಾವನ್ನು ಅಮಾನತುಗೊಳಿಸಲೂ ನಿರ್ಧರಿಸಲಾಯಿತು.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಚುನಾವಣೆಯ ಮೇಲ್ವಿಚಾರಣೆಗೆ ಐಸಿಸಿಯ ಹಿರಿಯ ಪ್ರತಿನಿಧಿಗಳ ನಿಯೋಗವನ್ನು ಕಳುಹಿಸಲೂ ತೀರ್ಮಾನಿಸಲಾಗಿದೆ.

‘ಟೆಸ್ಟ್ ಪಂದ್ಯಗಳಲ್ಲಿ ಮಂದ ಬೆಳಕಿನ ಸಾಧ್ಯತೆಯಿದ್ದಲ್ಲಿ, ಗರಿಷ್ಠ ಓವರುಗಳ ಆಟ ಸಾಧ್ಯವಾಗಲು ಅನುಕೂಲವಾಗುವಂತೆ ಉಭಯ ತಂಡಗಳ ಪೂರ್ವಾನುಮತಿಯ ಮೇರೆಗೆ ನಸುಗೆಂಪು ಬಣ್ಣದ ಚೆಂಡನ್ನು ಬಳಸಲು ಪ್ರಾಯೋಗಿಕವಾಗಿ ಅವಕಾಶ ನೀಡಲಾಗಿದೆ’ ಎಂದು ಐಸಿಸಿ ತಿಳಿಸಿದೆ.

ಪಂದ್ಯದಲ್ಲಿ ಕೆಂಪು ಚೆಂಡನ್ನೇ ಬಳಸಲಾಗುವುದು. ಆದರೆ ನಿಗದಿತ ಓವರುಗಳನ್ನು ಪೂರೈಸುವುದಕ್ಕೆ ಹೊನಲು ಬೆಳಕಿನ ನೆರವು ಪಡೆದಾಗ ನಸುಗೆಂಪು ಬಣ್ಣದ ಚೆಂಡನ್ನು ಬಳಸಲಾಗುವುದು ಎಂದು ಈ ನಿಯಮವನ್ನು ಅರ್ಥೈಸಲಾಗಿದೆ.

ಟಿ20 ಪಂದ್ಯಗಳ ‘ಸ್ಟ್ರೆಟೆಜಿಕ್ ಟೈಮ್ ಔಟ್’ ಸಮಯದಲ್ಲಿ ಕೋಚ್ ಮತ್ತು ನೆರವು ಸಿಬ್ಬಂದಿಗೆ ಅಂಗಣ (ಫೀಲ್ಡ್ ಆಫ್ ಪ್ಲೇ) ಪ್ರವೇಶಿಸಲು ಅವಕಾಶ ಇರುವಂತೆ ಟೆಸ್ಟ್ ಪಂದ್ಯಗಳಲ್ಲೂ ಡ್ರಿಂಕ್ಸ್ ವೇಳೆಗೆ ಕೋಚ್ಗೆ ಕ್ರೀಡಾಂಗಣದೊಳಗೆ ಬರಲು ಅವಕಾಶ ಕಲ್ಪಿಸಲಾಗುತ್ತದೆ.

ನಿಯಮಬಾಹಿರ ಬೌಲಿಂಗ್ ಶೈಲಿಗೆ ಕಡಿವಾಣ ಹಾಕಲು ಆನ್ಫೀಲ್ಡ್ ಅಂಪೈರ್ಗಳಿಗೆ ಹಾಕ್ಐ ಡೇಟಾ ಲಭ್ಯವಾಗುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ಬೌಲರ್ ಒಬ್ಬರು ‘ಥ್ರೊ’ ಮಾಡುತ್ತಾರೆಯೇ ಎಂದು ನಿರ್ಧರಿಸಿ ಮ್ಯಾಚ್ ರೆಫ್ರಿಗೆ ವರದಿ ಮಾಡುವ ಮುನ್ನ ಹಾಕ್ಐ ಡೇಟಾ ಪರಿಶೀಲಿಸಲು ಅಂಪೈರ್ಗಳಿಗೆ ಅವಕಾಶವಾಗಲಿದೆ.

ಈ ವರ್ಷದ ಅ. 1 ರಿಂದ ಈ ಬದ ಲಾವಣೆಗಳನ್ನು ಜಾರಿಗೆ ತರಲಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-43-1525408997

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.