ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ತಂಡಕ್ಕೆ ಅಮೋಘ ಜಯ- ಸಿದ್ಧಾಂತ್ ನವಲೆ ಶತಕ, 7 ವಿಕೆಟ್ ಪಡೆದ ವಿವೇಕ್

ಸಿದ್ಧಾಂತ್ ನವಲೆ ಶತಕ, 7 ವಿಕೆಟ್ ಪಡೆದ ವಿವೇಕ್
Last Updated 23 ಅಕ್ಟೋಬರ್ 2021, 3:31 IST
ಅಕ್ಷರ ಗಾತ್ರ

ಕಲಬುರಗಿ: ಸಿದ್ಧಾಂತ್ ನವಲೆ ಅವರ ಶತಕ ಮತ್ತು ವಿವೇಕ್ ನಾಯ್ಕ್ ಅವರ ಅಮೋಘ ಬೌಲಿಂಗ್ ನೆರವಿನಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ರಾಯಚೂರು ವಲಯದ 16 ವರ್ಷದೊಳಗಿನವರ ಅಂತರ ಜಿಲ್ಲಾ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಕಲಬುರಗಿ ತಂಡವು ಬಾಗಲಕೋಟೆ ತಂಡದ ವಿರುದ್ಧ ಜಯ ಸಾಧಿಸಿತು.

ನಗರದ ಎನ್.ವಿ.ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕಲಬುರ್ಗಿ ತಂಡವು ಕಲಬುರಗಿ ಬಾಗಲಕೋಟೆ ತಂಡದ ವಿರುದ್ಧ 135 ರನ್‌ಗಳಿಂದ ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕಲಬುರಗಿ ತಂಡವು 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 335 ರನ್ ಗಳಿಸಿತು.

19 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ತಂಡದ ನಾಯಕ ಸುಹಾಸ್ ಮಾಲಿ ಪಾಟೀಲ ಮತ್ತು ಶ್ರೀಧರ್ ಟಿ.ಆರ್‌., ನಾಲ್ಕನೇ ವಿಕೆಟ್‌ಗೆ 73 ರನ್‌ ಸೇರಿಸಿ ಆಸರೆಯಾದರು. ಈ ಹಂತದಲ್ಲಿ 26 ರನ್‌ ಗಳಿಸಿದ್ದ ಶ್ರೀಧರ್ ನಿರ್ಗಮಿಸಿದರು. 74 ಎಸೆತಗಳಲ್ಲಿ 16 ಬೌಂಡರಿ ಸಹಿತ 90 ರನ್ ಗಳಿಸಿದ್ದ ಸುಹಾಸ್ ಮಾಲಿ ಪಾಟೀಲ ಅನೂಪ್‌ಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದ ಸಿದ್ಧಾಂತ ನವಲೆ 73 ಎಸೆತಗಳಲ್ಲಿ 15 ಬೌಂಡರಿ ಸಹಿತ 113 ರನ್ ಬಾರಿಸಿದರು. ಇವರಿಗೆ ಉತ್ತಮ ಸಾತ್ ನೀಡಿದ ಓಂಕಾರ ಮಡಿವಾಳ ಅರ್ಧಶತಕ (75 ರನ್, 96 ಎ) ಗಳಿಸಿದರು.

ಸಕ್ಲೇನ್ ಕಲಾದಗಿ 56 ರನ್ ನೀಡಿ 3 ವಿಕೆಟ್, ಶ್ರೀವರ್ಧಂತ್ ಮತ್ತು ಅನೂಪ್ ತಲಾ 1 ವಿಕೆಟ್ ಪಡೆದರು.

ಬೃಹತ್ ಗುರಿ ಬೆನ್ನತ್ತಿದ ಬಾಗಲಕೋಟೆ ತಂಡವು ವಿವೇಕ್ ನಾಯ್ಕ್ (26ಕ್ಕೆ 7) ಅವರ ದಾಳಿಗೆ ತತ್ತರಿಸಿತು. ತಂಡದ ಮೊತ್ತ 50 ರನ್‌ಗಳಾಗುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಅಭಿಷೇಕ ಚಳಗೇರಿ (50 ರನ್, 12 ಬೌಂಡರಿ) ಅರ್ಧಶತಕ ಗಳಿಸಿ ನೆರವಾದರು. ಬಳಿಕ ತಂಡದ ನಾಯಕ ಶ್ರೀವರ್ಧಂತ್ 80 (85 ಎಸೆತ, 17 ಬೌಂಡರಿ) ರನ್ ಗಳಿಸಿದರೂ ಗೆಲುವು ಒಲಿಯಲಿಲ್ಲ.

ಎಂಟು ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ಗಳಿಸಲಿಲ್ಲ. ಅಂತಿಮವಾಗಿ ತಂಡಕ್ಕೆ 42.3 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 200 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.ವಿವೇಕ್ ನಾಯ್ಕ್ 26ಕ್ಲೆ 7, ಮನೋಜ್ 51ಕ್ಕೆ 2 ವಿಕೆಟ್ ಪಡೆದರು.

ವಿವೇಕ್ ನಾಯ್ಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT