ಶುಕ್ರವಾರ, ಆಗಸ್ಟ್ 12, 2022
23 °C
ಮಿಂಚಿದ ಅಥರ್ವ, ಕಾರ್ತಿಕ್‌ ತ್ಯಾಗಿ

ಯುವ ವಿಶ್ವಕಪ್‌: ಸೆಮಿಫೈನಲ್‌ಗೆ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ಪೋರ್ಟ್‌ಚೆಫ್‌ಸ್ಟ್ರೂಮ್‌, ದಕ್ಷಿಣ ಆಫ್ರಿಕಾ: ಅಥರ್ವ ಅಂಕೋಲೇಕರ್‌ ಕೆಳಕ್ರಮಾಂಕದಲ್ಲಿ ಬಿರುಸಿನ ಅರ್ಧ ಶತಕ ಬಾರಿಸಿದ ನಂತರ ಮಧ್ಯಮ ವೇಗಿ ಕಾರ್ತಿಕ್‌ ತ್ಯಾಗಿ ಆಸ್ಟ್ರೇಲಿಯಾದ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು. ಇವರಿಬ್ಬರ ನೆರವಿನಿಂದ ಭಾರತ ತಂಡ ಮಂಗಳವಾರ ನಡೆದ 19 ವರ್ಷದೊಳಗಿನವರ ವಿಶ್ವ ಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೇಲೆ 74 ರನ್‌ಗಳಿಂದ ಗೆದ್ದು ಸೆಮಿಫೈನಲ್‌ಗೆ ದಾಪುಗಾಲಿಟ್ಟಿತು.

ಮಂಗಳವಾರ ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರುಗಳಲ್ಲಿ 9 ವಿಕೆಟ್‌ಗೆ 233 ರನ್‌ಗಳ ಹೋರಾಟದ ಮೊತ್ತ ಗಳಿಸಿತು. ಆಸ್ಟ್ರೇಲಿಯಾ ಸ್ವಲ್ಪ ಚೇತರಿಸಿಕೊಂಡರೂ ಅಂತಿಮವಾಗಿ 6.3 ಓವರುಗಳಿದ್ದಾಗ 159 ರನ್‌ಗಳಿಗೆ ಕುಸಿಯಿತು.  ಭಾರತದ ಆರಂಭ ಉತ್ತಮವಾಗಿರಲಿಲ್ಲ.

ಒಂದು ಕಡೆ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್‌ (62, 82 ಎಸೆತ) ಉಪ‍ಯುಕ್ತ ಆಟವಾಡಿದ್ದರೂ, ನಾಯಕ ಪ್ರಿಯಂ ಗರ್ಗ್‌ (5) ಸೇರಿ ಮಧ್ಯಮ ಕ್ರಮಾಂಕದ ಆಟಗಾರರು ವಿಫಲರಾದರು. ಒಂದು ಹಂತದಲ್ಲಿ 144 ರನ್‌ಗಳಾಗುವಷ್ಟರಲ್ಲಿ ಆರು ವಿಕೆಟ್‌ ಕಳೆದುಕೊಂಡಿತ್ತು. ಈ ಹಂತದಲ್ಲಿ ಅಥರ್ವ (55, 54 ಎಸೆತ, 1 ಸಿ, 5 ಬೌಂ) ಮತ್ತು ರವಿ ಬಿಷ್ಣೋಯಿ (30, 31 ಎಸೆತ) ಏಳನೇ ವಿಕೆಟ್‌ಗೆ ಅತ್ಯುಪಯುಕ್ತ 61 ರನ್‌ ಸೇರಿಸಿದ್ದರು. ಆಸ್ಟ್ರೇಲಿಯಾ ಕೂಡ ಆರಂಭಿಕ ಕುಸಿತ ಕಂಡು 17 ರನ್‌ಗಳಾಗುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡಿತ್ತು. ಕಾರ್ತಿಕ್‌ (24ಕ್ಕೆ4) ಆರಂಭದ ಸ್ಪೆಲ್‌ನಲ್ಲೇ ಮಿಂಚಿ ನಾಲ್ಕು ವಿಕೆಟ್‌ ಪಡೆದರು. 

ಸ್ಕೋರುಗಳು: ಭಾರತ: 50 ಓವರುಗಳಲ್ಲಿ 9 ವಿಕೆಟ್‌ಗೆ 233 (ಯಶಸ್ವಿ ಜೈಸ್ವಾಲ್‌ 62, ಸಿದ್ದೇಶ್‌ ವೀರ್‌ 25, ಅಥರ್ವ ಅಂಕೋಲೇಕರ್‌ 55, ರವಿ ಬಿಷ್ಣೋಯಿ 30; ಕೋರೆ ಕೆಲ್ಲಿ 45ಕ್ಕೆ2, ಟಾಡ್‌ ಮರ್ಫಿ 40ಕ್ಕೆ2); ಆಸ್ಟ್ರೇಲಿಯಾ: 43.3 ಓವರುಗಳಲ್ಲಿ 159 (ಸ್ಯಾಮ್‌ ಫ್ಯಾನಿಂಗ್‌ 75, ಲಿಯಾಮ್‌ ಸ್ಕಾಟ್‌ 35; ಕಾರ್ತಿಕ್‌ ತ್ಯಾಗಿ 24ಕ್ಕೆ4, ಆಕಾಶ್‌ ಸಿಂಗ್‌ 30ಕ್ಕೆ3).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು