ಗುರುವಾರ , ಜೂನ್ 30, 2022
25 °C

ವಿಶ್ವಕಪ್‌ ಕ್ರಿಕೆಟ್‌ -2027: 14 ತಂಡಗಳ ನಡುವೆ ಪೈಪೋಟಿ ಎಂದ ಐಸಿಸಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಲಂಡನ್: ವಿಶ್ವಕಪ್‌ ಕ್ರಿಕೆಟ್‌ 2027 ಮತ್ತು 2031ರಲ್ಲಿ ಮತ್ತೊಮ್ಮೆ 14 ತಂಡಗಳು ಸೆಣಸಾಟ ನಡೆಸಲಿವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಿಳಿಸಿದೆ.

‘ಪುರುಷರ ವಿಶ್ವಕಪ್‌ ಕ್ರಿಕೆಟ್‌ನಲ್ಲಿ 2027 ಮತ್ತು 2031ರಲ್ಲಿ 14 ತಂಡಗಳು ಸ್ಪರ್ಧಿಸಲಿದ್ದು, 54 ಪಂದ್ಯಗಳು ನಡೆಯಲಿವೆ. 2024, 2026, 2028, 2030ರಲ್ಲಿ ನಡೆಯಲಿರುವ ಟಿ–20 ವಿಶ್ವಕಪ್‌ನಲ್ಲಿ 55 ಪಂದ್ಯಗಳು ನಡೆಯಲಿವೆ’ ಎಂದು ಐಸಿಸಿ ತಿಳಿಸಿದೆ.

2019ರಲ್ಲಿ ವಿಶ್ವಕಪ್‌ನಲ್ಲಿ 10 ತಂಡಗಳು ಸ್ಪರ್ಧಿಸಿದ್ದು, ಇಂಗ್ಲೆಂಡ್‌ ತಂಡ ಕಿರೀಟ ಮುಡಿಗೇರಿಸಿಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು