ಬೆಂಗಳೂರು: ರಾಜ್ಯ ಜೂನಿಯರ್ ತಂಡದಲ್ಲಿ ಆಡಿದ್ದ ಕ್ರಿಕೆಟ್ ಆಟಗಾರ, ಐಟಿ ತಂತ್ರಜ್ಞ ವಿನಯ್ ಎಸ್.ಬಾದಾಮಿ (56) ಅವರು ಹೃದಯಾಘಾತದಿಂದ ಸೋಮವಾರ ನಗರದ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಬಿ.ಸತ್ಯಾಜಿ ರಾವ್ ಮತ್ತು ಹಿರಿಯ ಪತ್ರಕರ್ತೆ ನಾಗಮಣಿ ಎಸ್.ರಾವ್ ಅವರ ಪುತ್ರ. ಅವರು 17, 19 ಮತ್ತು 21 ವರ್ಷದೊಳಗಿನವರ ರಾಜ್ಯ ತಂಡದಲ್ಲಿ ಆಡಿದ್ದರು. ವಿಕೆಟ್ ಕೀಪರ್– ಬ್ಯಾಟರ್ ಆಗಿದ್ದ ಅವರು ಅನಿಲ್ ಕುಂಬ್ಳೆ ಮತ್ತು ವೆಂಕಟೇಶ ಪ್ರಸಾದ್ ಮೊದಲಾದ ಆಟಗಾರರ ಜೊತೆ ಆಡಿದ್ದರು.

ನೆಟ್ಸ್ಕೇಪ್, ಮೈಕ್ರೊಸಾಫ್ಟ್ ಮತ್ತು ಗೂಗಲ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅವರಿಗೆ ಪತ್ನಿ, ಪುತ್ರ ಇದ್ದಾರೆ.

ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.