ಶನಿವಾರ, ಆಗಸ್ಟ್ 13, 2022
26 °C
ಅಭ್ಯಾಸ ಪಂದ್ಯ; ಉತ್ತಮ ಮುನ್ನಡೆ ಗಳಿಸಿದ ಭಾರತ

ಅಭ್ಯಾಸ ಪಂದ್ಯ| ವಿರಾಟ್, ಶ್ರೇಯಸ್ ಅರ್ಧಶತಕ: ಉತ್ತಮ ಮುನ್ನಡೆ ಗಳಿಸಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗ್ರೇಸ್ ರೋಡ್: ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಇಲ್ಲಿ ನಡೆಯುತ್ತಿರುವ ಲೆಸ್ಟರ್‌ಷೈರ್ ಎದುರಿನ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಗಳಿಸಿದರು. ಇದರೊಂದಿಗೆ ಇಬ್ಬರೂ ಲಯಕ್ಕೆ ಮರಳುವ ಭರವಸೆ ಮೂಡಿಸಿದರು. 

ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡವು ಎರಡನೇ ಇನಿಂಗ್ಸ್‌ನಲ್ಲಿ 364 ರನ್ ಗಳಿಸಿದೆ. ಒಟ್ಟು 366 ರನ್‌ಗಳ ಮುನ್ನಡೆ ಸಾಧಿಸಿದೆ. ರವೀಂದ್ರ ಜಡೇಜ (ಬ್ಯಾಟಿಂಗ್ 56) ಮತ್ತು ಮೊಹಮ್ಮದ್ ಸಿರಾಜ್ (ಬ್ಯಾಟಿಂಗ್ 1) ಕ್ರೀಸ್‌ನಲ್ಲಿದ್ದಾರೆ. 

ಇನಿಂಗ್ಸ್ ಆರಂಭಿಸಿದ ಭರತ್ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 62 ರನ್ ಸೇರಿಸಿದರು. ಅಯ್ಯರ್ 89 ಎಸೆತಗಳಲ್ಲಿ 62 ರನ್‌ ಗಳಿಸಿದರು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ವಿರಾಟ್ 98 ಎಸೆತಗಳಲ್ಲಿ 67 ರನ್‌ ಗಳಿಸಿದರು. ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿದರು. ಅವರು ಜಸ್‌ಪ್ರೀತ್ ಬೂಮ್ರಾ ಬೌಲಿಂಗ್‌ನಲ್ಲಿ ಔಟಾದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ: 60.2 ಓವರ್‌ಗಳಲ್ಲಿ 8ಕ್ಕೆ246, ಲೆಸ್ಟರ್‌ಷೈರ್: 57 ಓವರ್‌ಗಳಲ್ಲಿ 244, ಎರಡನೇ ಇನಿಂಗ್ಸ್: ಭಾರತ: 92 ಓವರ್‌ಗಳಲ್ಲಿ 7ಕ್ಕೆ 364 (ಶ್ರೀಕರ್ ಭರತ್ 43, ಶುಭಮನ್ ಗಿಲ್ 38, ಹನುಮವಿಹಾರಿ 20, ಶ್ರೇಯಸ್ ಅಯ್ಯರ್ 62, ರವೀಂದ್ರ ಜಡೇಜ ಬ್ಯಾಟಿಂಗ್ 56, ಶಾರ್ದೂಲ್ ಠಾಕೂರ್ 28, ವಿರಾಟ್ ಕೊಹ್ಲಿ 67, ಚೇತೇಶ್ವರ್ ಪೂಜಾರ 22, ನವದೀಪ್ ಸೈನಿ 55ಕ್ಕೆ3, ಕಮಲೇಶ್ ನಾಗರಕೋಟಿ 48ಕ್ಕೆ2) 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು