ಬುಧವಾರ, ನವೆಂಬರ್ 25, 2020
21 °C

CSK vs RR: ರಾಯಲ್ಸ್ ಜಯದ ರೂವಾರಿ ಬಟ್ಲರ್‌ಗೆ ಜೆರ್ಸಿ ಉಡುಗೊರೆ ನೀಡಿದ ಧೋನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎನಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು, ತಮ್ಮ ಜೆರ್ಸಿಯನ್ನು ರಾಜಸ್ಥಾನ ರಾಯಲ್ಸ್‌ ತಂಡದ ಜಾಸ್‌ ಬಟ್ಲರ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಸೋಮವಾರ ಚೆನ್ನೈ ಮತ್ತು ರಾಜಸ್ಥಾನ ತಂಡಗಳು ಪೈಪೋಟಿ ನಡೆಸಿದ್ದವು. ಈ ಪಂದ್ಯವು ಧೋನಿ ಅವರಿಗೆ 200ನೇ ಐಪಿಎಲ್‌ ಪಂದ್ಯವಾಗಿತ್ತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಕೇವಲ 125 ರನ್‌ ಗಳಿಸಿತ್ತು. ಈ ಗುರಿಯನ್ನು ರಾಜಸ್ಥಾನ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ಮುಟ್ಟಿ ಜಯದ ನಗೆ ಬೀರಿತ್ತು.

ಕೇವಲ 48 ಎಸೆತಗಳಲ್ಲಿ ಅಜೇಯ 70 ರನ್‌ ಗಳಿಸಿದ್ದ ಬಟ್ಲರ್ ರಾಯಲ್ಸ್‌ ಸುಲಭ ಜಯ ಸಾಧಿಸಲು ನೆರವಾಗಿದ್ದರು. ಹೀಗಾಗಿ ಅವರು ಪಂದ್ಯಶ್ರೇಷ್ಠ ಎನಿಸಿದ್ದರು. ಮಾತ್ರವಲ್ಲದೆ, ಧೋನಿ ಅವರು ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು.

ಸ್ವತಃ ಧೋನಿ ಅಭಿಮಾನಿಯಾಗಿರುವ ಬಟ್ಲರ್‌ ಇದರಿಂದ ಮತ್ತಷ್ಟು ಸಂತಸಗೊಂಡಿದ್ದಾರೆ.

 

ಈ ಚಿತ್ರವು ಐಪಿಎಲ್‌ ಟ್ವಿಟರ್‌ ಖಾತೆಯಲ್ಲಿ ಹಂಚಿಕೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು