ಚೆನ್ನೈ: ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಸೋತ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇಆಫ್ ಓಟದಿಂದ ಬಹುತೇಕ ಹೊರಬಿದ್ದಿದೆ. ಈ ನಡುವೆ ತಂಡದ ನಾಯಕ ಋತುರಾಜ್ ಗಾಯಕವಾಡ್ ಅವರು ನಾಯಕನಾಗಿ ಇನ್ನೂ ಪ್ರಗತಿ ಹೊಂದಬೇಕು ಎಂಬುದನ್ನು ತಂಡದ ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಒಪ್ಪಿಕೊಂಡಿದ್ದಾರೆ.

‘ಋತುರಾಜ್ ಗಾಯಕವಾಡ್ ಅವರು ನಾಯಕನಾಗಿ ಕಲಿಕೆ ಹಂತದಲ್ಲಿದ್ದಾರೆ. ಅವರು ಇನ್ನಷ್ಟು ಪ್ರಗತಿ ಹೊಂದುತ್ತಿದ್ದಾರೆ. ಅವರು ಕ್ರಿಕೆಟ್ನಲ್ಲಿ ಅತ್ಯುತ್ತಮ ನಾಯಕ ಎನಿಸಿಕೊಂಡ ಎಂ.ಎಸ್. ಧೋನಿ ಅವರು ಧೀರ್ಘಕಾಲ ಮುನ್ನಡೆಸಿದ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೊಂದು ದೊಡ್ಡ ಪರಿವರ್ತನೆಯಾಗಿದೆ’ ಎಂದು ಫ್ಲೆಮಿಂಗ್ ಹೇಳಿದ್ದಾರೆ.

‘ಯುವಕರಾಗಿರುವುದರಿಂದ ಅವರು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಅವರು ಉತ್ತಮವಾಗಿ ಕಾರ್ಯತಂತ್ರ ರೂಪಿಸುತ್ತಾರೆ. ತಂಡದ ಇತರೆ ಆಟಗಾರರ ಮೇಲೆ ಅವರಿಗೆ ಅಪಾರ ಗೌರವವಿದೆ. ಅವರು ತಂಡದ ಸಹ ಆಟಗಾರರಿಂದಲೂ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮಾತ್ರವಲ್ಲ, ನಾಯಕತ್ವದ ಜವಾಬ್ದಾರಿ ಏನೆಂಬುದನ್ನು ಇತರರಿಂದ ಕಲಿಯುತ್ತಿದ್ದಾರೆ’ ಎಂದಿದ್ದಾರೆ.

‘ಮುಂದಿನ ದಿನಗಳಲ್ಲಿ ಅವರು ಈ ಫ್ರಾಂಚೈಸಿಗೆ ಉತ್ತಮ ನಾಯಕನಾಗುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಫ್ಲೇಮಿಂಗ್ ಅವರು ತಿಳಿಸಿದ್ದಾರೆ.

ಈ ಋತುವಿನಲ್ಲಿ ಗಾಯಕವಾಡ್ ಅವರು ಕೇವಲ 29ರ ಬ್ಯಾಟಿಂಗ್ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಅವರು ಆಡಿರುವ 13 ಪಂದ್ಯಗಳಿಂದ ಕೇವಲ 2 ಅರ್ಧಶತಕಗಳನ್ನು ಮಾತ್ರ ಕಲೆಹಾಕಿದ್ದಾರೆ. ‘ಈ ಋತುವು ನಮಗೆ ಸವಾಲಿನದ್ದಾಗಿತ್ತು. ಕಳೆದ ವರ್ಷ ಮಾಡಲಾದ ಕೆಲವು ಬದಲಾವಣೆಗಳಿಂದಾಗಿ ತಂಡವು ಇತರೆ ತಂಡಗಳಿಗಿಂತ ಒಂದು ಹೆಜ್ಜೆ ಹಿಂದಿದೆ’ ಎಂದು ಒಪ್ಪಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.