ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 5ರಂದು ನಡೆದ ಐಪಿಎಲ್ 2026ರ ಸಿಎಸ್ಕೆ ಹಾಗೂ ಆರ್ಸಿಬಿ ತಂಡಗಳ ನಡುವಿನ ಪಂದ್ಯಕ್ಕೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಔಪಚಾರಿಕ ದೂರು ನೀಡಿದೆ.

ಸಿಎಸ್ಕೆ ನೀಡಿರುವ ದೂರಿನಲ್ಲಿ ಕ್ರೀಡಾಂಗಣದಲ್ಲಿನ ಅತಿರೇಕದ ಮನರಂಜನೆಯಿಂದ ಹಿಡಿದು ಸಿಎಸ್ಕೆ ಬೆಂಬಲಿಗರ ಮೇಲಿನ ಕಿರುಕುಳದವರೆಗೆ ಹಲವು ಅಂಶಗಳನ್ನು ಉಲ್ಲೇಖಿಸಿದೆ. ಐಪಿಎಲ್ನ ಅತಿ ದೊಡ್ಡ ಕಾಳಗ ಅಂದರೆ ಅದು ಸಿಎಸ್ಕೆ ಹಾಗೂ ಆರ್ಸಿಬಿ ತಂಡಗಳ ನಡುವಿನ ಪಂದ್ಯ. ಸದ್ಯ, ಈ ಪಂದ್ಯದಲ್ಲಿ ನಡೆದಿರುವ ಅನುಚಿತ ವರ್ತನೆಗೆ ಸಂಬಂಧಿಸಿದಂತೆ ಸಿಎಸ್ಕೆ ದೂರು ನೀಡಿದೆ.

ವರದಿ ಪ್ರಕಾರ, ಪಂದ್ಯದ ಸಮಯದಲ್ಲಿ ‘ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ...’ ಹಾಡನ್ನು ತಂಡವೊಂದರ ಮನಸ್ಥಿತಿಯನ್ನು ಕುಗ್ಗಿಸುವ ಸಲುವಾಗಿ ಬಳಕೆ ಮಾಡಲಾಗಿದೆ. ಮಾತ್ರವಲ್ಲ, ತಮಿಳುನಾಡಿನ ಗುರುತನ್ನು ಅಣಕಿಸುವುದಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.

‘ಸಾಮಾನ್ಯವಾಗಿ ಡಿಜೆಗಳು ತವರಿನ ತಂಡವನ್ನು ಬೆಂಬಲಿಸುತ್ತವೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಎಲ್ಲವೂ ವಿಭಿನ್ನವಾಗಿತ್ತು. ನಮ್ಮ ಆಟಗಾರರ ವಿರುದ್ಧ ಟೀಕೆ ಮಾಡಲಾಯಿತು. ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದಾರೆ. ಹಾಗಾಗಿ, ಅದನ್ನು ಪರಿಶೀಲಿಸುವಂತೆ ಬಿಸಿಸಿಐಗೆ ಪತ್ರ ಬರೆದಿದ್ದೇವೆ’ ಎಂದು ಸಿಎಸ್ಕೆ ವ್ಯವಸ್ಥಾಪಕ ನಿರ್ದೇಶಕ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ.

ಕಳೆದ ವರ್ಷ ಆರ್ಸಿಬಿಯ ವಿಕೆಟ್ ಕೀಪರ್, ಬ್ಯಾಟರ್ ಆಗಿರುವ ಜಿತೇಶ್ ಶರ್ಮಾ ಅವರು ಸಿಎಸ್ಕೆ ತಂಡವನ್ನು ಗುರಿಯಾಗಿಸಿಕೊಂಡು ‘ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ...’ ಡಿಜೆ ಹಾಡು ಹಾಡಿದ್ದರು. ಈ ವಿಡಿಯೊಗೆ ಸಿಎಸ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಬಳಿಕ ಸಿಎಸ್ಕೆ ಆಡಳಿತ ಮಂಡಳಿ ಮದ್ಯಪ್ರವೇಶಿಸಿ, ಎದುರಾಳಿ ಆಟಗಾರರು ಅಥವಾ ಅಭಿಮಾನಿಗಳನ್ನು ಗುರಿಯಾಗಿಸಿಕೊಳ್ಳುವ ಯಾವುದೇ ಹೇಳಿಕೆಗಳನ್ನು ಅಥವಾ ವರ್ತನೆ ತೋರಬಾರದು ಎಂದು ಸೂಚನೆ ನೀಡಿತ್ತು. ಆ ಘಟನೆಯ ಬಳಿಕ ಅಂತಹ ಯಾವುದೇ ಹೇಳಿಕೆಗಳು ಪುನರಾವರ್ತನೆಯಾಗಿರಲಿಲ್ಲ. ಡಿಜೆ ಮೂಲಕ ಎದುರಾಳಿ ಆಟಗಾರರ ಮನೋಬಲ ಕುಗ್ಗಿಸಬಾರದು ಎಂದು ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.