ಹೈದರಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿಯ ಐಪಿಎಲ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಅದರ ಜೊತೆಗೆ ತಂಡದ ಆಟಗಾರರಿಗೆ ಗಾಯದ ಸಮಸ್ಯೆ ಕೂಡ ಕಾಡುತ್ತಿದೆ. ಈಗ ಆ ಸಾಲಿಗೆ 18 ವರ್ಷದ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಸೇರ್ಪಡೆಯಾಗಿದ್ದಾರೆ.

ಟೂರ್ನಿಗೆ ಆರಂಭಕ್ಕೆ ಮೊದಲು ಎಂ.ಎಸ್. ಧೋನಿ, ನಾಥನ್ ಎಲ್ಲಿಸ್ ಗಾಯಗೊಂಡು ತಂಡದಿಂದ ದೂರ ಉಳಿದಿದ್ದಾರೆ. ಇದರ ಜೊತೆಗೆ ಪಂದ್ಯಾವಳಿಯ ನಡುವೆ ವೇಗಿ ಖಲೀಲ್ ಅಹಮದ್ ಕೂಡ ತಂಡದಿಂದ ಹೊರಬಿದ್ದಿದ್ದಾರೆ. ಧೋನಿ ತಂಡಕ್ಕೆ ಯಾವಾಗ ಲಭ್ಯರಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ಈ ನಡುವೆ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಕೂಡ ಗಾಯದಿಂದಾಗಿ ಟೂರ್ನಿಯಿಂದ ಮೂರು ವಾರಗಳ ಕಾಲ ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಶನಿವಾರ ಮುಕ್ತಾಯಗೊಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕವಾಗಿ ಬ್ಯಾಟಿಂಗ್ ಆಡುತ್ತಿದ್ದ ಮ್ಹಾತ್ರೆ, ಪಂದ್ಯದ ನಡುವೆ ಎಡ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. ಸದ್ಯ, ಸಿಎಸ್ಕೆ ಪರ ಲಯದಲ್ಲಿರುವ ಕೆಲವೇ ಆಟಗಾರರ ಪೈಕಿ ಆಯುಷ್ ಕೂಡ ಒಬ್ಬರಾಗಿದ್ದರು. ಅವರು ಸೋಮವಾರ ಮುಂಬೈನಲ್ಲಿ ಸ್ಕ್ಯಾನಿಂಗ್ಗೆ ಒಳಗಾಗಲಿದ್ದಾರೆ. ಅದಾದ ಬಳಿಕ ಅವರ ಆರೋಗ್ಯದ ಕುರಿತು ಸಂಪೂರ್ಣ ಮಾಹಿತಿ ಹೊರಬೀಳಲಿದೆ. ಚೆನ್ನೈ ತಂಡ ಗುರುವಾರ ತನ್ನ ಮುಂದಿನ ಪಂದ್ಯ ಆಡಲಿದೆ.

ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಗುರಿ ಬೆನ್ನಟ್ಟುವಾಗ ಇಂಪ್ಯಾಕ್ಟ್ ಆಟಗಾರನಾಗಿ ಬಂದ ಮ್ಹಾತ್ರೆ, ಕೇವಲ 12 ಎಸೆತಗಳಲ್ಲಿ 30 ರನ್ ಗಳಿಸಿದ್ದರು. ಈ ವೇಳೆ ಎರಡು ರನ್ ಗಳಿಸಲು ಓಡುವಾಗ ಮಂಡಿರಜ್ಜು ಗಾಯಕ್ಕೆ ಒಳದರು. ಬಳಿಕ ಅವರಿಗೆ ಮೈದಾನದಲ್ಲೇ ತುರ್ತು ಚಿಕಿತ್ಸೆ ನೀಡಲಾಯಿತು. ಆದರೂ ಅವರು ಚೇತರಿಸಿಕೊಳ್ಳಲಿಲ್ಲ. ಆ ಘಟನೆಯಾದ ನಂತರದ ಎಸೆತದಲ್ಲಿ ಹೆನ್ರಿ ಕ್ಲಾಸೆನ್ ಅವರಿಗೆ ಕ್ಯಾಚ್ ಕೊಟ್ಟು ಔಟ್ ಆದರು.

ಸಿಎಸ್ಕೆ ತಂಡದ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಮ್ಹಾತ್ರೆ ಗಾಯದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ‘ಅವರು ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದಾರೆ. ಗಾಯದ ಪ್ರಮಾಣ ಎಷ್ಟಿದೆ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿಲ್ಲ. ಸೋಮವಾರ ಅವರನ್ನು ಸ್ಕ್ಯಾನ್ಗೆ ಒಳಪಡಿಸಲಾಗುತ್ತದೆ. ಅದಾದ ಬಳಿಕ ಅವರ ಗಾಯದ ಗುರಿತು ಪೂರ್ಣ ಮಾಹಿತಿ ದೊರೆಯಲಿದೆ’ ಎಂದಿದ್ದಾರೆ.

‘ದುರದೃಷ್ಟವಶಾತ್ ಮ್ಹಾತ್ರೆಯವರ ಗಾಯದ ಪ್ರಮಾಣ ದೊಡ್ಡದಾಗಿರುವಂತೆ ಕಾಣುತ್ತಿದೆ. ಅವರು ತಂಡದ ಪ್ರಮುಖ ಆಟಗಾರನಾಗಿದ್ದರಿಂದ, ತಂಡಕ್ಕೆ ದೊಡ್ಡ ನಷ್ಟವಾಗಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.