ಶನಿವಾರ, ಸೆಪ್ಟೆಂಬರ್ 26, 2020
26 °C

ಸೂಪರ್ ಕಿಂಗ್ಸ್‌ಗೆ ಎರಡನೇ ಪರೀಕ್ಷೆ: ಶುಕ್ರವಾರದಿಂದ ಶಿಬಿರ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ: ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಕೋವಿಡ್ –19 ಸೋಂಕಿತ ಇಬ್ಬರು ಆಟಗಾರರನ್ನು ಹೊರತುಪಡಿಸಿ ಉಳಿದೆಲ್ಲರಿಗೂ  ಎರಡನೇ ಪರೀಕ್ಷೆಯನ್ನು ಗುರುವಾರ ನಡೆಸಲಾಯಿತು.

ಒಂದೊಮ್ಮೆ ಎಲ್ಲರ ವರದಿಗಳೂ ನೆಗೆಟಿವ್ ಬಂದರೆ ಶುಕ್ರವಾರದಿಂದ ಅಭ್ಯಾಸ ಆರಂಭಿಸುವ ಸಾಧ್ಯತೆ ಇದೆ.

ಮಧ್ಯಮವೇಗಿ ದೀಪಕ್ ಚಾಹಲ್ ಮತ್ತು ಇನ್ನೊಬ್ಬ ಆಟಗಾರ ಸೋಂಕಿಗೊಳಗಾಗಿದ್ದಾರೆ. ಅವರನ್ನು ಪ್ರತ್ಯೇಕವಾಸದಲ್ಲಿಡಲಾಗಿದೆ. ತಂಡದ ನೆರವು ಸಿಬ್ಬಂದಿ ಸೇರಿಂದತೆ ಒಟ್ಟು 13 ಮಂದಿಗೆ ಸೋಂಕು ತಗುಲಿದೆ.

‘ಇವತ್ತು (ಗುರುವಾರ) ಪರೀಕ್ಷೆ ಆಗಿದೆ. ರಾತ್ರಿ ಅಥವಾ ಶುಕ್ರವಾರ ಬೆಳಿಗ್ಗೆ ಫಲಿತಾಂಶದ ವರದಿ ಬರಬಹುದು. ನಂತರ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಸಿಎಸ್‌ಕೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು