ಚೆನ್ನೈ: ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಇಂದು (ಮೇ 18) ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟೂರ್ನಿಯ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಸನ್ರೈಸರ್ಸ್ ಹೈದರಾಬಾದ್ ಅನ್ನು ಎದುರಿಸಲಿದೆ. ಎಂ.ಎ. ಚಿದಂಬರಂ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸಿಎಸ್ಕೆ ಗೆದ್ದರೆ, ಆರ್ಸಿಬಿ ತಂಡವು ಲೀಗ್ ಅನ್ನು ಅಗ್ರ ಎರಡು ಸ್ಥಾನಗಳಲ್ಲಿ ಮುಗಿಸುವುದು ಖಚಿತವಾಗಲಿದೆ.

ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವು ದಾಖಲಿಸಿದರೆ, 18 ಅಂಕ ಸಂಪಾದಿಸಲು ಅವಕಾಶ ಇರುವ ಸನ್ರೈಸರ್ಸ್ ಹೈದರಾಬಾದ್ ತಂಡವು ಮುಂದಿನ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಗೆದ್ದರೂ 16 ಅಂಕಗಳಿಗೆ ಸೀಮಿತವಾಗುತ್ತದೆ. ಆಗ, ಆರ್ಸಿಬಿ ಸುಲಭವಾಗಿ ಅಗ್ರ–2ರಲ್ಲಿ ಸ್ಥಾನ ಪಡೆಯಲಿದೆ.

ಪ್ಲೇ ಆಫ್ಗೆ ಪೈಪೋಟಿ ನಡೆಸುತ್ತಿರುವ ತಂಡಗಳ ಪೈಕಿ, ಎಸ್ಆರ್ಎಚ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳಿಗೆ ಮಾತ್ರ 18 ಅಂಕ ಗಳಿಸುವ ಅವಕಾಶ ಇದೆ. ಒಂದುವೇಳೆ ಸಿಎಸ್ಕೆ ವಿರುದ್ಧ ಎಸ್ಆರ್ಎಚ್ ಇಂದು ಗೆಲುವು ದಾಖಲಿಸಿ, ಮುಂದಿನ ಪಂದ್ಯದಲ್ಲೂ ಆರ್ಸಿಬಿ ವಿರುದ್ಧ ಗೆದ್ದರೆ 18 ಅಂಕಗಳಿಗೆ ತಲುಪಲಿದೆ. ಮಾತ್ರವಲ್ಲ, ಗುಜರಾತ್ ಟೈಟನ್ಸ್ ತಂಡ ಬಾಕಿ ಉಳಿದಿರುವ ಪಂದ್ಯವನ್ನು ಗೆದ್ದರೆ, ಅಗ್ರ ಸ್ಥಾನಕ್ಕೆ ಪೈಪೋಟಿ ಎದುರಾಗಲಿದೆ. ಆಗ 18 ಅಂಕಗಳೊಂದಿಗೆ ಉತ್ತಮ ರನ್ರೇಟ್ ಹೊಂದಿರುವ ಎರಡು ತಂಡಗಳು ಟಾಪ್–2 ಸ್ಥಾನ ಪಡೆಯಲಿವೆ.

ಆರ್ಸಿಬಿಯಿಂದ ಅಮೋಘ ಪ್ರದರ್ಶನ

ಟೂರ್ನಿಯುದ್ಧಕ್ಕೂ ಉತ್ತಮ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಆರ್ಸಿಬಿ ತಂಡವು 9 ಗೆಲುವು, 4 ಸೋಲುಗಳೊಂದಿಗೆ 18 ಅಂಕಗಳ ಸಹಿತ ಪ್ಲೇ ಆಫ್ ಪ್ರವೇಶಿಸಿದೆ. ಬಾಕಿ ಉಳಿದಿರುವ ಪಂದ್ಯದಲ್ಲಿ ಮೇ 22ರಂದು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಸಿಎಸ್ಕೆಗೆ ಇಂದಿನ ಪಂದ್ಯ ಮಹತ್ವ

ಮೇ 17 (ಭಾನುವಾರ) ಮುಕ್ತಾಯಗೊಂಡ ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೋಲು ಅನುಭವಿಸಿದ ಬಳಿಕ ಚೆನ್ನೈ ತಂಡಕ್ಕೆ ಪ್ಲೇ ಆಫ್ ತಲುಪುವ ಅವಕಾಶ ಹೆಚ್ಚಾಗಿದೆ. ಆದರೆ, ಇಂದಿನ ಪಂದ್ಯದಲ್ಲಿ ಎಸ್ಆರ್ಎಚ್ ತಂಡವನ್ನು ಮತ್ತು ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.