ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ಕ್ರಿಕೆಟ್‌: ಟಾಮ್‌ ಕರನ್‌ ಕೈಚಳಕ, ಇಂಗ್ಲೆಂಡ್‌ಗೆ ರೋಚಕ ಗೆಲುವು

Last Updated 15 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಡರ್ಬನ್‌: ಅಂತಿಮ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ವಿಕೆಟ್‌ ಉರುಳಿಸಿದ ಟಾಮ್‌ ಕರನ್‌, ಇಂಗ್ಲೆಂಡ್‌ ಪಾಳಯದಲ್ಲಿ ಸಂಭ್ರಮ ಉಕ್ಕಿ ಹರಿಯುವಂತೆ ಮಾಡಿದರು.

ಕರನ್‌ ಕೈಚಳಕದಿಂದಾಗಿ ಇಂಗ್ಲೆಂಡ್‌ ತಂಡ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಎರಡು ರನ್‌ಗಳ ರೋಚಕ ಗೆಲುವು ದಾಖಲಿಸಿತು.

ಕಿಂಗ್ಸ್‌ಮೇಡ್‌ ಅಂಗಳದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಎಯೊನ್‌ ಮಾರ್ಗನ್‌ ಪಡೆ ಮೋಯಿನ್‌ ಅಲಿ (39; 11ಎ, 3 ಬೌಂ, 4ಸಿ) ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 204ರನ್‌ ದಾಖಲಿಸಿತು.

ಕ್ವಿಂಟನ್‌ ಡಿ ಕಾಕ್ ಬಳಗದ ಗೆಲುವಿಗೆ ಅಂತಿಮ ಓವರ್‌ನಲ್ಲಿ 15ರನ್‌ಗಳು ಬೇಕಿದ್ದವು. ಕರನ್‌ ಹಾಕಿದ ಎರಡು ಮತ್ತು ಮೂರನೇ ಎಸೆತಗಳನ್ನು ಡ್ವೇನ್‌ ಪ್ರಿಟೋರಿಯಸ್‌ (25; 13ಎ, 2ಬೌಂ, 1ಸಿ) ಕ್ರಮವಾಗಿ ಸಿಕ್ಸರ್‌ ಮತ್ತು ಬೌಂಡರಿಗಟ್ಟಿದಾಗ ಹರಿಣಗಳ ಪಾಳಯದಲ್ಲಿ ಜಯದ ಕನಸು ಚಿಗುರೊಡೆದಿತ್ತು. ಕೊನೆಯ ಎರಡು ಎಸೆತಗಳಲ್ಲಿ ಮೂರು ರನ್‌ಗಳು ಬೇಕಿದ್ದವು. ಐದನೇ ಎಸೆತದಲ್ಲಿ ಪ್ರಿಟೋರಿಯಸ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಕರನ್‌, ನಂತರದ ಎಸೆತದಲ್ಲಿ ಜೋರ್ನ್‌ ಫೋರ್ಟುಯಿನ್‌ಗೆ (0) ಪೆವಿಲಿಯನ್‌ ದಾರಿ ತೋರಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌; 20 ಓವರ್‌ಗಳಲ್ಲಿ 7 ವಿಕೆಟ್‌ಗೆ 204 (ಜೇಸನ್‌ ರಾಯ್‌ 40, ಜಾನಿ ಬೇಸ್ಟೋ 35, ಎಯೊನ್‌ ಮಾರ್ಗನ್‌ 27, ಬೆನ್‌ ಸ್ಟೋಕ್ಸ್‌ ಔಟಾಗದೆ 47, ಮೋಯಿನ್‌ ಅಲಿ 39; ಲುಂಗಿ ಗಿಡಿ 48ಕ್ಕೆ3, ಆ್ಯಂಡಿಲೆ ಪಿಶುವಾಯೊ 47ಕ್ಕೆ2, ತಬ್ರೇಜ್‌ ಶಂಸಿ 30ಕ್ಕೆ1, ಡ್ವೇನ್‌ ಪ್ರಿಟೋರಿಯಸ್‌ 17ಕ್ಕೆ1).

ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 202 (ತೆಂಬಾ ಬವುಮಾ 31, ಕ್ವಿಂಟನ್‌ ಡಿ ಕಾಕ್‌ 65, ಡೇವಿಡ್‌ ಮಿಲ್ಲರ್‌ 21, ವಾನ್‌ ಡರ್‌ ಡುಸೆನ್‌ ಔಟಾಗದೆ 43, ಡ್ವೇನ್‌ ಪ್ರಿಟೋರಿಯಸ್‌ 25; ಟಾಮ್‌ ಕರನ್‌ 45ಕ್ಕೆ2, ಕ್ರಿಸ್‌ ಜೋರ್ಡನ್‌ 31ಕ್ಕೆ2, ಮಾರ್ಕ್‌ ವುಡ್‌ 39ಕ್ಕೆ2, ಬೆನ್‌ ಸ್ಟೋಕ್ಸ್‌ 16ಕ್ಕೆ1).

ಫಲಿತಾಂಶ: ಇಂಗ್ಲೆಂಡ್‌ಗೆ ಎರಡು ರನ್‌ ಗೆಲುವು. 3 ಪಂದ್ಯಗಳ ಸರಣಿ 1–1 ಸಮಬಲ. ಪಂದ್ಯಶ್ರೇಷ್ಠ: ಮೋಯಿನ್‌ ಅಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT