ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ ಯುವ ಕ್ರೀಡಾಕೂಟ: ದಾನೇಶ್ವರಿಗೆ ‘ಡಬಲ್‌’ ಚಿನ್ನ

ತಮಿಳುನಾಡಿನ ನಿತಿನ್‌ ಬಾಲಕೃಷ್ಣನ್‌ಗೆ ಸಂಭ್ರಮ
Last Updated 14 ಜನವರಿ 2019, 17:20 IST
ಅಕ್ಷರ ಗಾತ್ರ

ಪುಣೆ: ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದ ಬೆಳಗಾವಿಯ ದಾನೇಶ್ವರಿ ಠಕ್ಕನವರ ಮತ್ತು ತಮಿಳುನಾಡಿನ ನಿತಿನ್‌ ಬಾಲಕೃಷ್ಣ ಅವರು ಖೇಲೊ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ‘ಡಬಲ್‌’ ಚಿನ್ನದ ಸಾಧನೆ ಮಾಡಿದರು. 21 ವರ್ಷದೊಳಗಿನವರ ವಿಭಾಗದಲ್ಲಿ ಕಣಕ್ಕೆ ಇಳಿದ ಇವರಿಬ್ಬರು 100 ಮತ್ತು 200 ಮೀಟರ್ಸ್ ಓಟದಲ್ಲಿ ಮೊದಲಿಗರಾದರು.

ಪುರುಷರ 17 ವರ್ಷದೊಳಗಿನವರ ವಿಭಾಗದ ಜಾವೆಲಿನ್‌ ಥ್ರೋದಲ್ಲಿ ಕನ್ವರ್ ಅಜಯ್‌ ರಾಜ್‌ ಸಿಂಗ್ ರಾಣ 75.40 ಮೀಟರ್ಸ್ ಸಾಧನೆಯೊಂದಿಗೆ ಚಿನ್ನ ಗಳಿಸಿದರು. ಗುಜರಾತ್‌ನ ಅಜಿತ್ ಕುಮಾರ್ ಯಾದವ್ ಮತ್ತು ಉತ್ತರಾಖಂಡದ ಅಂಕಿತಾ ಧ್ಯಾನಿ ದೂರ ಅಂತರ ಮತ್ತು ಮಧ್ಯಮ ದೂರದ ಓಟದಲ್ಲಿ ಚಿನ್ನ ಗೆದ್ದರು.

ಮಹಾರಾಷ್ಟ್ರ ಪಾರಮ್ಯ: ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಮಹಾರಾಷ್ಟ್ರದ ಕ್ರೀಡಾಪಟುಗಳು ಪಾರಮ್ಯ ಮೆರೆದರು. ಆದೇಶ್‌ ಗಾರ್ಸ 400 ಮೀಟರ್ಸ್‌ನಲ್ಲಿ ಚಿನ್ನ ಗೆದ್ದರೆ, ದಿನೇಶ್‌ ಸಿಂಗ್‌ 1500 ಮೀಟರ್ಸ್‌ನ ಚಿನ್ನ ತಮ್ಮದಾಗಿಸಿಕೊಂಡರು. ಆಲ್ದನ್‌ ನೊರೊನ್ಹಾ 110 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಮೊದಲಿಗರಾದರು. ದುರ್ಗಾ ದೇವ್ರ, ಪೂನಮ್‌ ಸೋನುನೆ, ಸೌರಭ್‌ ರಾವತ್‌, ಸುದೇಶ್ನ ಶಿವಕುಮಾರ್‌ ಹಾಗೂ ಅವಂತಿಕಾ ನರಳೆ ರಾಜ್ಯಕ್ಕೆ ಚಿನ್ನದ ಪದಕಗಳನ್ನು ಗಳಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT