ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮ್ಯಾಡಿ ಶತಕ; ಆಸ್ಟ್ರೇಲಿಯಾಕ್ಕೆ ‘ಎ’ ಮಹಿಳೆಯರಿಗೆ ಜಯ

Published : 16 ಆಗಸ್ಟ್ 2024, 23:30 IST
Last Updated : 16 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಮ್ಯಾಕೆ: ಆರಂಭ ಆಟಗಾರ್ತಿ ಮ್ಯಾಡಿ ಡಾರ್ಕ್ ಅವರ ಅಜೇಯ ಶತಕದ ನೆರವಿನಿಂದ ಆಸ್ಟ್ರೇಲಿಯಾ ‘ಎ’ ತಂಡ ಮಹಿಳೆಯರ ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯವನ್ನು ಶುಕ್ರವಾರ ಎಂಟು ವಿಕೆಟ್‌ಗಳಿಂದ ಸುಲಭವಾಗಿ ಗೆದ್ದುಕೊಂಡಿತು.

ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2–0 ಗೆಲುವಿನ ಮುನ್ನಡೆ ಪಡೆದಿದೆ.

ಗೆಲುವಿಗೆ 219 ರನ್ ಗಳಿಸಬೇಕಾಗಿದ್ದ ಆಸ್ಟ್ರೇಲಿಯಾ 40.3 ಓವರುಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ 221 ರನ್ ಹೊಡೆಯಿತು. ಮ್ಯಾಡಿ 115 ಎಸೆತಗಳಲ್ಲಿ 7 ಬೌಂಡರಿಗಳಿದ್ದ ಅಜೇಯ 106 ರನ್ ಬಾರಿಸಿದರು. ಮೊದಲ ವಿಕೆಟ್‌ಗೆ ಕೇಟಿ ಮ್ಯಾಕ್‌ (68, 78ಎ) ಜೊತೆ 131 ರನ್ ಸೇರಿಸಿದ್ದರು.

ಇದಕ್ಕೆ ಮೊದಲು ಭಾರತದ ಕಡೆ ತೇಜಲ್‌ ಹಸಬ್ನಿಸ್‌ (63, 86ಎ) ಮತ್ತು ರಾಘವಿ ಬಿಷ್ಟ್‌ (70, 93ಎ) ಮತ್ತೊಮ್ಮೆ ಉತ್ತಮ ಆಟವಾಡಿದ್ದರು. ನಾಲ್ಕನೇ ವಿಕೆಟ್‌ಗೆ ಇವರಿಬ್ಬರು 124 ರನ್ ಸೇರಿಸಿದ್ದರು.

ಸ್ಕೋರುಗಳು: ಭಾರತ ‘ಎ’ ಮಹಿಳೆಯರ ತಂಡ: 48 ಓವರುಗಳಲ್ಲಿ 218 (ಶುಭಾ ಸತೀಶ್‌ 24, ತೇಜಲ್ ಹಸಬ್ನಿಸ್‌ 63, ರಾಘವಿ ಬಿಷ್ಟ್‌ 70; ಮೈತ್ಲಾನ್ ಬ್ರೌನ್ 36ಕ್ಕೆ2, ನಿಕೋಲಾ ಹನ್ಕಾಕ್‌ 27ಕ್ಕೆ2, ಚಾರ್ಲಿ ನಾಟ್‌ 49ಕ್ಕೆ2); ಆಸ್ಟ್ರೇಲಿಯಾ ‘ಎ’ ಮಹಿಳೆಯರ ತಂಡ: 40.2 ಓವರುಗಳಲ್ಲಿ 2 ವಿಕೆಟ್‌ಗೆ 221 (ಕೇಟಿ ಮ್ಯಾಕ್‌ 68, ಮ್ಯಾಡಿ ಡಾರ್ಕ್‌ ಔಟಾಗದೇ 106, ತಹ್ಲಿಯಾ ಮೆಕ್‌ಗ್ರಾತ್ ಔಟಾಗದೇ 32).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT