ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ 2019: ಆರ್‌ಆರ್‌ ಪರ ಸ್ಮಿತ್‌, ಹೈದರಾಬಾದ್ ಪರ ವಾರ್ನರ್ ಕಣಕ್ಕೆ

Last Updated 18 ಮಾರ್ಚ್ 2019, 5:53 IST
ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್‌ ವಾರ್ನರ್‌ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ರಲ್ಲಿ ಆಡಲು ಭಾರತಕ್ಕೆ ಬಂದಿಳಿದ್ದಾರೆ.

ಹೋದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಚೆಂಡು ವಿರೂಪಗೊಳಿಸಿದ್ದ ಪ್ರಕರಣದಲ್ಲಿ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ಮೇಲೆ ಐಸಿಸಿಯು ಒಂದು ವರ್ಷ ನಿಷೇಧ ಹೇರಿತ್ತು. ಇನ್ನು ಕೆಲವೇ ದಿನಗಳಲ್ಲಿ ಅವರ ಶಿಕ್ಷೆ ಪೂರ್ಣಗೊಳ್ಳಲಿದೆ. ಅವರು ಮೇ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಬಳಗದಲ್ಲಿ ಆಡಲು ಉತ್ಸುಕರಾಗಿದ್ದಾರೆ. ಅದಕ್ಕೂ ಮುನ್ನ ಐಪಿಎಲ್‌ನಲ್ಲಿ ಮಿಂಚುವ ಇರಾದೆಯಲ್ಲಿದ್ದಾರೆ.

‘ಸ್ಮಿತ್‌ಗೆ ಉತ್ತಮ ಆಡಬೇಕು ಎನ್ನುವ ಹಸಿವು ಇದೆ. ತಮ್ಮ ಆಟದ ವೈಭವವನ್ನು ಮತ್ತೊಮ್ಮೆ ತೋರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದರಿಂದ ತಂಡಕ್ಕೆ ಉತ್ತಮವಾಗಲಿದೆ’ ಎಂದು ರಾಯಲ್ಸ್ ತಂಡದ ಪ್ರಚಾರ ರಾಯಭಾರಿ ಡೇವಿಡ್ ವಾರ್ನರ್ ಹೇಳಿದ್ದಾರೆ.

ಸ್ಮಿತ್ ಅವರು ಭಾರತಕ್ಕೆ ಬರುವ ಮುನ್ನ ದುಬೈಗೆ ತೆರಳಿದ್ದರು. ಅವರೊಂದಿಗೆ ಡೇವಿಡ್ ವಾರ್ನರ್ ಕೂಡ ಇದ್ದರು. ಅಲ್ಲಿ ಪಾಕ್ ವಿರುದ್ಧ ಸರಣಿ ಆಡಲಿರುವ ಆಸ್ಟ್ರೇಲಿಯಾ ತಂಡದೊಂದಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದರು.

‘ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಅವರ ಆಹ್ವಾನದ ಮೇರೆಗೆ ಅಲ್ಲಿಗೆ ತೆರಳಿದ್ದೆವು. ಬಹಳ ವರ್ಷಗಳ ನಂತರ ತವರುಮನೆಯ ಪ್ರೀತಿಯಲ್ಲಿ ಮಿಂದೆದ್ದ ಅನುಭವ ಸಿಕ್ಕಿತು’ ಎಂದು ಸ್ಮಿತ್ ತಿಳಿಸಿದ್ದಾರೆ.

ಐಪಿಎಲ್‌ನ ಮೊದಲ ಮೂರು ಪಂದ್ಯಗಳಲ್ಲಿ ರಾಯಲ್ಸ್‌ ತಂಡಕ್ಕೆ ಆ್ಯಷ್ಟನ್ ಟರ್ನರ್ ಅಲಭ್ಯರಾಗಿದ್ದಾರೆ. ಈಚೆಗೆ ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ಟರ್ನರ್ ಮಿಂಚಿನ ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯಾದ ಗೆಲುವಿಗೆ ಕಾರಣರಾಗಿದ್ದರು.

ಡೇವಿಡ್ ವಾರ್ನರ್ ಕೂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಮರಳಿದ್ದಾರೆ. ಹೋದ ವರ್ಷದ ಆವೃತ್ತಿಯಲ್ಲಿ ಅವರು ಆಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT