ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀನ್ ಎಲ್ಗರ್ ಅಮೋಘ ಬ್ಯಾಟಿಂಗ್: ಲಂಕಾಗೆ ತಿರುಗೇಟು

Last Updated 27 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಸೆಂಚುರಿಯನ್: ಭರ್ಜರಿ ಆರಂಭ ನೀಡಿದ ಡೀನ್ ಎಲ್ಗರ್ (95 ರನ್) ಮತ್ತು ಏಡನ್ ಮರ್ಕರಂ (68ರನ್) ಅವರ ಶತಕದ ಜೊತೆಯಾಟದ ಬಲದಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಇಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ಶ್ರೀಲಂಕಾಕ್ಕೆ ತಿರುಗೇಟು ನೀಡಿದೆ.

ಲಂಕಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 396 ರನ್ ಗಳಿಸಿತು. ಅದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡವು ದಿನದಾಟದ ಕೊನೆಗೆ 72 ಓವರ್‌ಗಳಲ್ಲಿ 4ಕ್ಕೆ 317 ರನ್ ಗಳಿಸಿದೆ. ಅರ್ಧಶತಕ ಗಳಿಸಿರುವ ಫಾಫ್ ಡುಪ್ಲೆಸಿ (ಬ್ಯಾಟಿಂಗ್ 55) ಮತ್ತು ತೆಂಬಾ ಬವುಮಾ (ಬ್ಯಾಟಿಂಗ್ 41) ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಶ್ರೀಲಂಕಾ: 96 ಓವರ್‌ಗಳಲ್ಲಿ 396 (ದಸುನ್ ಶನಕ ಔಟಾಗದೆ 66, ವಾಣಿಂದು ಹಸರಂಗಾ 18, ಲುಥೊ ಸಿಪಾಮ್ಲಾ 76ಕ್ಕೆ4, ವಿಯಾನ್ ಮುಕ್ದರ್ 69ಕ್ಕೆ3) ದಕ್ಷಿಣ ಆಫ್ರಿಕಾ: 72 ಓವರ್‌ಗಳಲ್ಲಿ 4ಕ್ಕೆ317 (ಡೀನ್ ಎಲ್ಗರ್ 95, ಏಡನ್ ಮರ್ಕರಂ 68, ಫಾಫ್ ಡುಪ್ಲೆಸಿ ಔಟಾಗದೆ 55, ತೆಂಬಾ ಬವುಮಾ ಔಟಾಗದೆ 41)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT