ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ: ಸುವೇದ್ ಶತಕ, ಮುಂಬೈಗೆ ಉತ್ತಮ ಆರಂಭ

Last Updated 6 ಜೂನ್ 2022, 19:21 IST
ಅಕ್ಷರ ಗಾತ್ರ

ಬೆಂಗಳೂರು: ಪದಾರ್ಪಣೆ ಪಂದ್ಯದಲ್ಲಿಯೇ ಶತಕ ದಾಖಲಿಸಿದ ಸುವೇದ್ ಪಾರ್ಕರ್‌ (ಬ್ಯಾಟಿಂಗ್ 104) ಬ್ಯಾಟಿಂಗ್‌ನಿಂದಾಗಿ ಮುಂಬೈ ತಂಡವು ಉತ್ತರಾಖಂಡ ಎದುರಿನ ರಣಜಿ ಕ್ವಾರ್ಟರ್‌ಫೈನಲ್‌ನ ಮೊದಲ ದಿನವೇ ದೊಡ್ಡ ಮೊತ್ತ ಪೇರಿಸಿದೆ.

ಸೋಮವಾರ ದಿನದಾಟದ ಕೊನೆಗೆ ಮುಂಬೈ ತಂಡವು 86 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 304 ರನ್ ಗಳಿಸಿದೆ.

ಇನ್ನೊಂದು ಪಂದ್ಯದಲ್ಲಿ; ಪಂಜಾಬ್ ತಂಡವು ಮಧ್ಯಪ್ರದೇಶ ಎದುರು ಮೊದಲ ಇನಿಂಗ್ಸ್‌ನಲ್ಲಿ 219 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಶುಭಮನ್ ಗಿಲ್ ಕೇವಲ 9 ರನ್ ಗಳಿಸಿ ಔಟಾದರು.

ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಸುದೀಪ್ ಕುಮಾರ್ ಗರಮಿ (ಬ್ಯಾಟಿಂಗ್ 106) ಶತಕದ ಬಲದಿಂದ ಬಂಗಾಳ ತಂಡವು 89 ಓವರ್‌ಗಳಲ್ಲಿ 1 ವಿಕೆಟ್‌ಗೆ 310 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರು: ಆಲೂರುಕ್ರೀಡಾಂಗಣ: ಮೊದಲ ಇನಿಂಗ್ಸ್– ಮುಂಬೈ: 86 ಓವರ್‌ಗಳಲ್ಲಿ 3ಕ್ಕೆ304 (ಪೃಥ್ವಿ ಶಾ 21, ಯಶಸ್ವಿ ಜೈಸ್ವಾಲ್ 35, ಅರ್ಮಾನ್ ಜಾಫರ್ 60, ಸುವೇದ್ ಪಾರ್ಕರ್ ಬ್ಯಾಟಿಂಗ್ 104, ಸರ್ಫರಾಜ್ ಖಾನ್ ಬ್ಯಾಟಿಂಗ್ 69, ದೀಪಕ್ ದಪೊಲಾ 53ಕ್ಕೆ3) ವಿರುದ್ಧ ಉತ್ತರಾಖಂಡ.

ಪಂಜಾಬ್: 71.3 ಓವರ್‌ಗಳಲ್ಲಿ 219 (ಅಭಿಷೇಕ್ ಶರ್ಮಾ 47, ಅನ್ಮೋಲ್‌ಪ್ರೀತ್ ಸಿಂಗ್ 47, ಅನ್ಮೋಲ್ ಮಲ್ಹೋತ್ರಾ 27, ಸನ್ವೀರ್ ಸಿಂಗ್ 41, ಪುನೀತ್ ದಾತೆ 48ಕ್ಕೆ3, ಅನುಭವ್ ಅಗರವಾಲ್ 40ಕ್ಕೆ3, ಸರ್ನೀಶ್ ಜೈನ್ 45ಕ್ಕೆ2) ವಿರುದ್ಧ ಮಧ್ಯಪ್ರದೇಶ.

ಜಸ್ಟ್ ಕ್ರಿಕೆಟ್ ಮೈದಾನ: ಬಂಗಾಳ: 89 ಓವರ್‌ಗಳಲ್ಲಿ 1 ವಿಕೆಟ್‌ಗೆ 310 (ಅಭಿಷೇಕ್ ರಾಮನ್ ಗಾಯಗೊಂಡು ನಿವೃತ್ತಿ 41, ಅಭಿಮನ್ಯು ಈಶ್ವರನ್ 65, ಸುದೀಪ್ ಕುಮಾರ್ ಗರಮಿ ಬ್ಯಾಟಿಂಗ್ 106, ಅನುಸ್ತೂಪ್ ಮಜುಂದಾರ್ ಬ್ಯಾಟಿಂಗ್ 85) ವಿರುದ್ಧ ಜಾರ್ಖಂಡ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT