ದೀಪಕ್‌ ಚಾಹರ್ ದಾಖಲೆ

ಶನಿವಾರ, ಏಪ್ರಿಲ್ 20, 2019
25 °C
ಐಪಿಎಲ್‌ನ ಒಂದೇ ಪಂದ್ಯದಲ್ಲಿ ಅತಿಹೆಚ್ಚು ಡಾಟ್ ಬಾಲ್‌

ದೀಪಕ್‌ ಚಾಹರ್ ದಾಖಲೆ

Published:
Updated:
Prajavani

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್‌ನ ಮಧ್ಯಮ ವೇಗಿ ದೀಪಕ್ ಚಾಹರ್ ಐಪಿಎಲ್‌ ಟೂರ್ನಿಯ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಹಾಕಿದ ಬೌಲರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

ಕೋಲ್ಕತ್ತ ನೈಟ್‌ ರೈಡರ್ಸ್ ಎದುರಿನ ಪಂದ್ಯದಲ್ಲಿ ಅವರು 20 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಇದರಲ್ಲಿ 20 ಡಾಟ್ ಬಾಲ್‌ಗಳು ಇದ್ದವು. ಸನ್‌ರೈಸರ್ಸ್ ಹೈದರಾಬಾದ್ ತಂಡದ ರಶೀದ್ ಖಾನ್‌ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಅಂಕಿತ್ ರಜಪೂತ್‌ ತಲಾ 18 ಡಾಟ್‌ಬಾಲ್ ಹಾಕಿದ್ದು ಈ ಹಿಂದಿನ ದಾಖಲೆಯಾಗಿತ್ತು.

26 ವರ್ಷದ ಚಾಹರ್‌ ಪರಿಣಾಮಕಾರಿ ದಾಳಿಯ ಮೂಲಕ ನೈಟ್‌ ರೈಡರ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದರು. ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್ ಲಿನ್‌ ಅವರನ್ನು ಮೊದಲ ಓವರ್‌ನಲ್ಲೇ ಎಲ್‌ಬಿಡಬ್ಲ್ಯು ಬಲೆಯಲ್ಲಿ ಕೆಡವಿದ್ದರು. ಇನಿಂಗ್ಸ್‌ನ ಮೂರು ಮತ್ತು ಐದನೇ ಓವರ್‌ಗಳಲ್ಲಿ ಕ್ರಮವಾಗಿ ನಿತೀಶ್ ರಾಣಾ ಮತ್ತು ರಾಬಿನ್ ಉತ್ತಪ್ಪ ಅವರನ್ನು ಔಟ್‌ ಮಾಡಿದ್ದರು. 19ನೇ ಓವರ್‌ನಲ್ಲಿ ಐದು ಡಾಟ್ ಬಾಲ್ ಹಾಕಿ ಮಿಂಚಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !