ಸೋಮವಾರ, ಸೆಪ್ಟೆಂಬರ್ 27, 2021
28 °C

ಲಾರ್ಡ್ಸ್‌ನಲ್ಲಿ ಗಂಟೆ ಮೊಳಗಿಸಿದ ದೀಪ್ತಿ ಶರ್ಮಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಭಾರತ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್‌ ದೀಪ್ತಿ ಶರ್ಮಾ ಅವರಿಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದ ಆರಂಭದಲ್ಲಿ ಗಂಟೆ ಮೊಳಗಿಸುವ ಗೌರವ ಭಾನುವಾರ ಲಭಿಸಿತು.

‘ಐದು ನಿಮಿಷಗಳ ಗಂಟೆ ಮೊಳಗಿಸಲು ದೀಪ್ತಿ ಶರ್ಮಾ ಅವರನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ’ ಎಂದು ಲಾರ್ಡ್ಸ್‌ ಕ್ರಿಕೆಟ್ ಮೈದಾನದ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ. ದಿನದಾಟದ ಆರಂಭಕ್ಕೂ ಮೊದಲು ಗಂಟೆ ಮೊಳಗಿಸುವ ಪರಿಪಾಠವನ್ನು ಎಂಸಿಸಿ 2007ರಲ್ಲಿ ಆರಂಭಿಸಿತ್ತು.

ಎಡಗೈ ಬ್ಯಾಟರ್‌ ಮತ್ತು ಆಫ್‌ಬ್ರೇಕ್ ಬೌಲರ್‌ ಆಗಿರುವ 23 ವರ್ಷದ ದೀಪ್ತಿ ಶರ್ಮಾ ಮೂರೂ ಮಾದರಿಗಳಲ್ಲಿ ಒಟ್ಟು 116 ಪಂದ್ಯಗಳನ್ನು ಆಡಿದ್ದಾರೆ. ಆಗ್ರಾದಲ್ಲಿ ಜನಿಸಿದ ಈ ಆಟಗಾರ್ತಿ ಸದ್ಯ ‘ದಿ ಹಂಡ್ರೆಡ್‌’ ಟೂರ್ನಿಯ ಮೊದಲ ಆವೃತ್ತಿಯಲ್ಲಿ ಆಡಲು ಇಂಗ್ಲೆಂಡ್‌ಗೆ ತೆರಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು