ನವದೆಹಲಿ: ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು. ಫಿನ್ ಅಲೆನ್ ಶತಕ ಹೊಡೆದು ಡೆಲ್ಲಿಯ ಗಾಯಕ್ಕೆ ಉಪ್ಪು ಸವರಿದರು. ಇದರೊಂದಿಗೆ ಕೋಲ್ಕತ್ತ ತಂಡವು ಜಯಭೇರಿ ಬಾರಿಸಿತು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ತಂಡದ ಸ್ಪಿನ್ ತ್ರಿವಳಿಗಳಾದ ಅನುಕೂಲ್ ರಾಯ್ (31ಕ್ಕೆ2), ಸುನಿಲ್ ನಾರಾಯಣ್ (17ಕ್ಕೆ1) ಹಾಗೂ ವರುಣ್ ಚಕ್ರವರ್ತಿ (4-0-28-0) ಅವರ ಪರಿಣಾಮಕಾರಿ ದಾಳಿಯಿಂದಾಗಿ ಡೆಲ್ಲಿ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 142 ರನ್ ಮಾತ್ರ ಗಳಿಸಿತು. ಫಿನ್ ಅಲೆನ್ ಅಜೇಯ ಶತಕ (100; 47ಎ, 4X5, 6X10)ದ ಬಲದಿಂದ ತಂಡವು 14. 2 ಓವರ್ಗಳಲ್ಲಿ 2 ವಿಕೆಟ್ಗಳಿಗೆ 147 ರನ್ ಗಳಿಸಿ ಜಯಿಸಿತು.

ಕೋಲ್ಕತ್ತ ತಂಡದ ವೇಗಿ ಕಾರ್ತಿಕ್ ತ್ಯಾಗಿ (25ಕ್ಕೆ2), ವೈಭವ್ ಅರೋರಾ (29ಕ್ಕೆ1) ಮತ್ತು ಕ್ಯಾಮರಾನ್ ಗ್ರೀನ್ (12ಕ್ಕೆ1) ಕೂಡ ಮಿಂಚಿದರು.

ಆಶುತೋಷ್ ಶರ್ಮಾ ಅವರು 28 ಎಸೆತಗಳಲ್ಲಿ 39 ರನ್ ಸಿಡಿಸದೇ ಹೋಗಿದ್ದರೆ ಡೆಲ್ಲಿ ತಂಡವು ಮೂರಂಕಿ ಮೊತ್ತ ಗಳಿಸುವುದೂ ದುಸ್ತರವಾಗುತ್ತಿತ್ತು. ಶರ್ಮಾ ಅವರು ಮೂರು ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರ್ ಬಾರಿಸಿದರು.

ಟಾಸ್ ಗೆದ್ದ ಕೋಲ್ಕತ್ತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ನಿಸಾಂಕ (50; 29ಎ, 4X5, 6X3) ಮತ್ತು ಕೆ.ಎಲ್. ರಾಹುಲ್ (23; 14ಎ, 4X4) ಅವರು ಉತ್ತಮ ಆರಂಭ ನೀಡಿದರು. ಶ್ರೀಲಂಕಾದ ನಿಸಾಂಕ ಅವರ ಬೀಸಾಟವು ಭರ್ಜರಿಯಾಗಿತ್ತು.
ಇನಿಂಗ್ಸ್ನ ಮೊದಲ ಬೌಂಡರಿ ಮತ್ತು ಸಿಕ್ಸರ್ ದಾಖಲಾಗಿದ್ದು ಅವರ ಬ್ಯಾಟ್ನಿಂದಲೇ.

ಆದರೆ ಕೋಲ್ಕತ್ತ ತಂಡದ ಬೌಲರ್ಗಳು ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಕೆ.ಎಲ್. ರಾಹುಲ್ ವಿಕೆಟ್ ಪಡೆದ ಕಾರ್ತಿಕ್ ತ್ಯಾಗಿ ಪವರ್ಪ್ಲೇ ಹಂತದಲ್ಲಿಯೇ ಆತಿಥೇಯರಿಗೆ ಆಘಾತ ನೀಡಿದರು.

ಇನ್ನೊಂದೆಡೆ ಗ್ರೀನ್ ಅವರು ನಿತೀಶ್ ರಾಣಾ (8 ರನ್) ಅವರನ್ನು ಪೆವಿಲಿಯನ್ಗೆ ಮರಳಿಸಿದರು. ನಂತರ ತಂಡದ ಸ್ಪಿನ್ನರ್ಗಳು ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು.

ವರುಣ್ ಅವರು ವಿಕೆಟ್ ಪಡೆಯದಿದ್ದರೂ ರನ್ಗಳಿಗೆ ಕಡಿವಾಣ ಹಾಕಿದರು. ಇದರಿಂದಾಗಿ ಬ್ಯಾಟರ್ಗಳು ಒತ್ತಡಕ್ಕೊಳಗಾದರು. ಅದರ ಲಾಭ ಸ್ಪಿನ್ ಬೌಲರ್ಗಳಾದ ಸುನಿಲ್ ಮತ್ತು ಅನುಕೂಲ್ ಅವರಿಗಾಯಿತು.

ಉತ್ತಮ ಲಯದಲ್ಲಿರುವ ಸಮೀರ್ ರಿಜ್ವಿ, ನಾಯಕ ಅಕ್ಷರ್ ಪಟೇಲ್, ಟ್ರಿಸ್ಟನ್ ಸ್ಟಬ್ಸ್ ಅವರು ಸೇರಿದಂತೆ ಬಹುತೇಕ ಬ್ಯಾಟರ್ಗಳು ವಿಫಲರಾದರು. ನಿಸಾಂಕ ಮಾತ್ರ ಏಕಾಂಗಿ ಹೋರಾಟ ನಡೆಸಿದರು. ಅನುಕೂಲ್ ರಾಯ್ ಬೌಲಿಂಗ್ನಲ್ಲಿ ರಘುವಂಶಿ ಮಾಡಿದ ಸ್ಟಂಪಿಂಗ್ಗೆ ನಿಸಾಂಕ ಔಟಾದರು. ತಂಡವು 89 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಆಶುತೋಷ್ ಅವರು ಬೀಸಾಟದ ಮೂಲಕ ಒಂದಿಷ್ಟು ಚೇತರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.