ನವದೆಹಲಿ: ಐಪಿಎಲ್ 2026ರ ಇಂದಿನ (ಏಪ್ರಿಲ್ 25) ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯಕ್ಕೂ ಮುನ್ನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಯಾನಕ ಘಟನೆಯೊಂದು ವರದಿಯಾಗಿದೆ. ಪಂದ್ಯಾವಳಿಯ ಮುನ್ನಾ ದಿನ ಅಭ್ಯಾಸ ನಡೆಸುತ್ತಿರುವಾಗ ಡೆಲ್ಲಿ ತಂಡದ ನೆಟ್ ಬೌಲರ್ ಒಬ್ಬರಿಗೆ ಚೆಂಡು ಬಡಿದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದ ಪ್ರಕಾರ, ಅಭ್ಯಾಸದ ವೇಳೆ ನೆಟ್ ಬೌಲರ್ ತಲೆಗೆ ಚೆಂಡು ಬಲವಾಗಿ ಬಡಿದಿದೆ. ಪರಿಣಾಮ ಆಟಗಾರ ಕುಸಿದು ಬಿದ್ದಿದ್ದಾನೆ. ಮೈದಾನದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಅವರಿಗೆ ಚಿಕಿತ್ಸೆ ನೀಡಿದರೂ ಅವರು ಚೇತರಿಸಿಕೊಳ್ಳದಿರುವುದರಿಂದ, ಆಂಬ್ಯುಲೆನ್ಸ್ ಅನ್ನು ನೇರವಾಗಿ ಕ್ರೀಡಾಂಗಣಕ್ಕೆ ಕರೆಸಿಕೊಂಡು ಆಟಗಾರನನ್ನು ಸ್ಟೆಚರ್ ಮೇಲೆ ಇರಿಸಿ, ಆಸ್ಪತ್ರೆಗೆ ರವಾನಿಸಲಾಗಿದೆ.

ನೆಟ್ ಬೌಲರ್ ಹೆಸರು ಸೇರಿದಂತೆ ಗಾಯಗೊಂಡಿರುವ ಆಟಗಾರನ ಯಾವುದೇ ಮಾಹಿತಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ನೀಡಿಲ್ಲ. ಆಟಗಾರನ ಆರೋಗ್ಯದ ಮಾಹಿತಿ ಇನ್ನೂ ದೊರಕಿಲ್ಲ.

ಸದ್ಯ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿರುವ 6 ಪಂದ್ಯಗಳಿಂದ 3 ಗೆಲುವು ಮತ್ತು 3 ಸೋಲುಗಳೊಂದಿಗೆ 6 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಶನಿವಾರದಂದು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಪಂಜಾಬ್ ಕಿಂಗ್ಸ್ ತಂಡವು ಇದುವರೆಗೆ ಆಡಿರುವ 6 ಪಂದ್ಯಗಳಿಂದ 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಂಡವು ಇದುವರೆಗೆ ಸೋಲು ಕಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.