ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟರ್‌ ಅಕ್ಷರ್‌ ಪಟೇಲ್‌ಗೆ ಕೋವಿಡ್‌–19

Last Updated 3 ಏಪ್ರಿಲ್ 2021, 12:47 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರಲ್ಲಿ ಕೋವಿಡ್–19 ಇರುವುದು ದೃಢಪಟ್ಟಿದ್ದು, ಸದ್ಯ ಪ್ರತ್ಯೇಕವಾಸದಲ್ಲಿದ್ದಾರೆ ಎಂದು ಅವರು ಪ್ರತಿನಿಧಿಸುವ ಐಪಿಎಲ್ ಫ್ರಾಂಚೈಸ್‌ ಡೆಲ್ಲಿ ಕ್ಯಾಪಿಟಲ್ಸ್ ತಿಳಿಸಿದೆ.

ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಎಡಗೈ ಬ್ಯಾಟ್ಸ್‌ಮನ್‌ ನಿತೀಶ್ ರಾಣಾ ಅವರಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಎರಡನೇ ಬಾರಿಯ ಪರೀಕ್ಷೆಯಲ್ಲಿ ಅವರ ವರದಿ ‘ನೆಗೆಟಿವ್‌’ ಬಂದಿದೆ.

‘ನಮ್ಮ ತಂಡದ ಅಕ್ಷರ್ ಪಟೇಲ್ ಅವರಲ್ಲಿ ಕೋವಿಡ್‌ ಖಚಿತಪಟ್ಟಿದೆ. ಮಾರ್ಚ್‌ 28ರಂದುಅವರು ಮುಂಬೈನಲ್ಲಿ ತಂಡದ ಆಟಗಾರರು ತಂಗಿರುವ ಹೊಟೇಲ್‌ ಸೇರಿಕೊಂಡಿದ್ದರು. ಆಗ ಅವರಿಗೆ ಸೋಂಕು ಇರಲಿಲ್ಲ. ಎರಡನೇ ಬಾರಿಯ ಪರೀಕ್ಷೆಯಲ್ಲಿ ಕೋವಿಡ್‌ ದೃಢಪಟ್ಟಿದೆ‘ ಎಂದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸ್ ಹೇಳಿದೆ.

‘ಅಕ್ಷರ್ ಅವರು ಸದ್ಯ ಪ್ರತ್ಯೇಕವಾಸದಲ್ಲಿದ್ದಾರೆ. ನಮ್ಮ ವೈದ್ಯಕೀಯ ತಂಡ ಅವರ ಜೊತೆ ನಿರಂತರ ಸಂಪರ್ಕದಲ್ಲಿದೆ. ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ‘ ಎಂದು ಫ್ರಾಂಚೈಸ್ ಹೇಳಿದೆ.

ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅಕ್ಷರ್‌, ಮೂರು ಪಂದ್ಯಗಳಲ್ಲಿ 27 ವಿಕೆಟ್‌ ಉರುಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT