ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಲ್ಲಿ ಹಾಫ್‌ ಮ್ಯಾರಥಾನ್‌: ಜಾಂಟಿ ರೋಡ್ಸ್‌ ಭಾಗಿ

Last Updated 20 ಅಕ್ಟೋಬರ್ 2018, 13:46 IST
ಅಕ್ಷರ ಗಾತ್ರ

ನವದೆಹಲಿ: ದಕ್ಷಿಣ ಆಫ್ರಿಕಾದ ಹಿರಿಯ ಕ್ರಿಕೆಟಿಗ ಜಾಂಟಿ ರೋಡ್ಸ್‌, ಭಾನುವಾರ ನಡೆಯುವ ಡೆಲ್ಲಿ ಹಾಫ್‌ ಮ್ಯಾರಥಾನ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಜಾಂಟಿ ಅವರು ‘ಗ್ರೇಟ್‌ ಡೆಲ್ಲಿ ರನ್‌’ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಹಾಫ್‌ ಮ್ಯಾರಥಾನ್‌, ಓಪನ್‌ 10ಕೆ ರನ್‌, ಗ್ರೇಟ್‌ ಡೆಲ್ಲಿ ರನ್‌, ಸೀನಿಯರ್‌ ಸಿಟಿಜನ್ಸ್‌ ರನ್‌ ಮತ್ತು ಚಾಂಪಿಯನ್ಸ್‌ ವಿಥ್‌ ಡಿಸಬಿಲಿಟಿ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು ಒಟ್ಟು 34,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

49 ವರ್ಷ ವಯಸ್ಸಿನ ಜಾಂಟಿ, 2003ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರು 52 ಟೆಸ್ಟ್‌ ಮತ್ತು 245 ಏಕದಿನ ಪಂದ್ಯಗಳಲ್ಲಿ ಹರಿಣಗಳ ನಾಡಿನ ತಂಡದ ಪರ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT