ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯ

Last Updated 20 ಏಪ್ರಿಲ್ 2019, 20:10 IST
ಅಕ್ಷರ ಗಾತ್ರ

ನವದೆಹಲಿ: ಶಿಖರ್‌ ಧವನ್‌ (56; 41ಎ, 7ಬೌಂ, 1ಸಿ) ಮತ್ತು ನಾಯಕ ಶ್ರೇಯಸ್‌ ಅಯ್ಯರ್‌ (ಔಟಾಗದೆ 58; 49ಎ, 5ಬೌಂ, 1ಸಿ) ಶನಿವಾರ ತವರಿನ ಅಂಗಳದಲ್ಲಿ ಅಬ್ಬರಿಸಿದರು.

ಇವರು ಗಳಿಸಿದ ಅರ್ಧಶತಕಗಳ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕಿಂಗ್ಸ್‌ ಇಲೆವನ್‌ ಪಂಜಾಬ್‌ ಎದುರಿನ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಗೆದ್ದಿತು.

ಕ್ರಿಸ್ ಗೇಲ್ (69, 37ಎ) ಗಳಿಸಿದ ಅರ್ಧಶತಕದ ನೆರವಿನಿಂದ ಪಂಜಾಬ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 163 ರನ್‌ ಗಳಿಸಿತು. ಕ್ಯಾಪಿಟಲ್ಸ್‌ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 166ರನ್‌ ಗಳಿಸಿ ಸಂಭ್ರಮಿಸಿತು.

ಅಂತಿಮ ಓವರ್‌ನಲ್ಲಿ ಡೆಲ್ಲಿ ಗೆಲುವಿಗೆ ಆರು ರನ್‌ಗಳು ಬೇಕಿದ್ದವು. ಸ್ಯಾಮ್‌ ಕರನ್‌ ಹಾಕಿದ ಮೊದಲ ಎರಡು ಎಸೆತಗಳಲ್ಲಿ ಎರಡು ರನ್‌ ಬಂದವು. ಮೂರನೇ ಎಸೆತದಲ್ಲಿ ಅಯ್ಯರ್‌ ಎರಡು ರನ್‌ ಗಳಿಸಿದರು. ಮರು ಎಸೆತವನ್ನು ಮಿಡ್‌ವಿಕೆಟ್‌ನತ್ತ ಬೌಂಡರಿ ಬಾರಿಸಿದ ಶ್ರೇಯಸ್‌ ಸಂಭ್ರಮಿಸಿದರು.

ಇದಕ್ಕೂ ಮುನ್ನ ಧನವ್‌ ಅಮೋಘ ಆಟದ ಮೂಲಕ ತವರಿನ ಅಭಿಮಾನಿಗಳನ್ನು ರಂಜಿಸಿದ್ದರು. ಅವರು ಈ ಸಲದ ಲೀಗ್‌ನಲ್ಲಿ ಮೂರನೇ ಅರ್ಧಶತಕ ದಾಖಲಿಸಿದರು.

ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನೇಪಾಳಿ ಹುಡುಗ ಸಂದೀಪ್ ಲಮಿ ಚಾನೆ (40ಕ್ಕೆ3) ಅವರ ಉತ್ತಮ ದಾಳಿ ಯಿಂದಾಗಿ ಕಿಂಗ್ಸ್ ಇಲೆವನ್‌ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಆದರೆ ಗೇಲ್ ಮಾತ್ರ ಬೀಸಾಟ ಬಿಡಲಿಲ್ಲ. ಅವರು ಆರು ಬೌಂಡರಿ, ಐದು ಅಮೋಘ ಸಿಕ್ಸರ್‌ಗಳನ್ನು ಸಿಡಿಸಿದರು. ಕನ್ನಡಿಗ ಮಯಂಕ್ ಅಗರವಾಲ್ ಮತ್ತು ಡೇವಿಡ್ ಮಿಲ್ಲರ್ ಒಂದಂಕಿ ಮೊತ್ತ ಗಳಿಸಿ ಔಟಾದರು. ಮನದೀಪ್ ಸಿಂಗ್ (30 ರನ್), ಆರ್. ಅಶ್ವಿನ್ ಮತ್ತು ಹರಪ್ರತೀತ್ ಬ್ರಾರ್ ಮಾತ್ರ ಎರಡಂಕಿ ಮೊತ್ತ ಗಳಿಸುವಲ್ಲಿ ಸಫಲರಾದರು.

ಸಂಕ್ಷಿಪ್ತ ಸ್ಕೋರ್
ಕಿಂಗ್ಸ್ ಇಲೆವನ್ ಪಂಜಾಬ್:
20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 163 (ಕೆ.ಎಲ್. ರಾಹುಲ್ 12, ಕ್ರಿಸ್ ಗೇಲ್ 69, ಮನದೀಪ್ ಸಿಂಗ್ 30, ಆರ್. ಅಶ್ವಿನ್ 16, ಹರಪ್ರೀತ್ ಬ್ರಾರ್‌ 20, ಸಂದೀಪ್ ಲಮಿಚಾನೆ 40ಕ್ಕೆ3, ಕಗಿಸೊ ರಬಾಡ 23ಕ್ಕೆ2, ಅಕ್ಷರ್ ಪಟೇಲ್ 22ಕ್ಕೆ2).

ಡೆಲ್ಲಿ ಕ್ಯಾಪಿಟಲ್ಸ್‌: 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 166 (ಶಿಖರ್‌ ಧವನ್‌ 56, ಶ್ರೇಯಸ್‌ ಅಯ್ಯರ್‌ ಔಟಾಗದೆ 58, ಕಾಲಿನ್‌ ಇಂಗ್ರಾಮ್‌ 19; ಹಾರ್ಡಸ್‌ ವಿಲ್‌ಜೊಯೆನ್‌ 39ಕ್ಕೆ2). ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT