ಐದು ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಗಾಯದ ಮೆಲೆ ಬರೆ ಎಳೆದಂತಾಗಿದೆ. ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರು ರಾಜಸ್ಥಾನ ರಾಯಲ್ಸ್ ವಿರುದ್ಧದ ಮೊದಲ ಪಂದ್ಯವನ್ನು ಆಡುವುದಿಲ್ಲ ಎಂದು ಸಿಎಸ್ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ದೃಢಪಡಿಸಿದ್ದಾರೆ.

ಇತ್ತೀಚೆಗೆ ತಾನೆ ಎಂ.ಎಸ್. ಧೋನಿ ಅವರು ಆರಂಭಿಕ ಎರಡು ವಾರಗಳ ಕಾಲ ತಂಡದ ಪರ ಆಡುವುದಿಲ್ಲ ಎಂದು ಸಿಎಸ್ಕೆ ದೃಢಪಡಿಸಿತ್ತು. ಇದೀಗ ರಾಜಸ್ಥಾನ ರಾಯಲ್ಸ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ಟೀಫನ್ ಫ್ಲೆಮಿಂಗ್, ‘ಡೆವಾಲ್ಡ್ ಬ್ರೆವಿಸ್ ಅವರು ಶೀಘ್ರದಲ್ಲೇ ಫಿಟ್ ಆಗುತ್ತಾರೆ’. ಅವರ ರಾಜಸ್ಥಾನ ವಿರುದ್ಧದ ಮೊದಲ ಪಂದ್ಯ ಆಡುವುದಿಲ್ಲ ಎಂದು ಹೇಳಿದ್ದಾರೆ.

ವೇಗದ ಬೌಲರ್ ನಾಥನ್ ಎಲಿಸ್ ಅವರು ಟೂರ್ನಿ ಆರಂಭಕ್ಕೂ ಮುನ್ನವೆ ಸಿಎಸ್ಕೆ ತಂಡವನ್ನು ತೊರೆದರೆ, ಅವರ ಬದಲು ಸ್ಪೆನ್ಸರ್ ಜಾನ್ಸನ್ ಅವರಿಗೆ ಮಣೆಹಾಕಲಾಗಿದೆ. ಇದರ ಜೊತೆಗೆ ಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿರುವ ಎಂ.ಎಸ್. ಧೋನಿ ಅವರು ಮೊದಲ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.

ಕಳೆದ ಋತುವಿನಲ್ಲಿ ಗುರ್ಜಪ್ನೀತ್ ಸಿಂಗ್ ಬದಲು ತಂಡಕ್ಕೆ ಸೇರ್ಪಡೆಯಾಗಿದ್ದ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಅವರು ಆಡಿದ 6 ಇನಿಂಗ್ಸ್ಗಳಲ್ಲಿ 180ರ ಸ್ಟ್ರೈಕ್ ರೇಟ್ನಲ್ಲಿ 17 ಸಿಕ್ಸರ್ಗಳು ಸೇರಿದಂತೆ 225 ರನ್ ಗಳಿಸಿದ್ದರು. ಅವರ ಅಮೋಘ ಪ್ರದರ್ಶನದಿಂದಾಗಿ 2026ರ ಟೂರ್ನಿಗೂ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ಬ್ರೆವಿಸ್ ಬದಲು ರಾಜಸ್ಥಾನ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ಆಲ್ರೌಂಡರ್ ಮ್ಯಾಟ್ ಶಾರ್ಟ್ ಅವರನ್ನು ಆಡಿಸುವ ಸಾಧ್ಯತೆ ಇದೆ ಅಥವಾ ಧೋನಿ ಮತ್ತು ಬ್ರೆವಿಸ್ ಇಬ್ಬರ ಅನುಪಸ್ಥಿತಿಯಲ್ಲಿ, ₹14.2 ಕೋಟಿಗೆ ಖರೀದಿಸಿರುವ ಕಾರ್ತಿಕ್ ಶರ್ಮಾ ಮತ್ತು ಪ್ರಶಾಂತ್ ವೀರ್ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ.

ನಾಯಕ ಋತುರಾಜ್ ಗಾಯಕವಾಡ್ ಅವರು ಸಂಜು ಸ್ಯಾಮ್ಸನ್ ಜೊತೆ ಆರಂಭಿಕರಾಗಿ ಆಡುವುದಾಗಿ ದೃಢಪಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಮತ್ತು ಉರ್ವಿಲ್ ಪಟೇಲ್ ಆಡುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.