ಕರ್ನಾಟಕ ರಣಜಿ ತಂಡದ ನಾಯಕ ದೇವದತ್ತ ಪಡಿಕ್ಕಲ್ ಅವರು ಆರ್ಸಿಬಿ ಪ್ಲೇ ಆಫ್ ತಲುಪವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವರು, ತಮ್ಮ ಸ್ಫೋಟಕ ಹಾಗೂ ಸ್ಥಿರ ಪ್ರದರ್ಶನದ ಕುರಿತು ಜಿಯೋ ಹಾಟ್ಸ್ಟಾರ್ ಜೊತೆ ಮಾತನಾಡಿದ್ದಾರೆ.

ಚೊಚ್ಚಲ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅವರ ಜೊತೆ ಬ್ಯಾಟಿಂಗ್ ಆರಂಭಿಸಿದ್ದರ ಕುರಿತು ಮಾಹಿತಿ ಹಂಚಿಕೊಂಡ ಅವರು, ‘ನಾನು 2020ರಲ್ಲಿ ಐಪಿಎಲ್ಗೆ ಆರ್ಸಿಬಿ ಪರ ಪದಾರ್ಪಣೆ ಮಾಡಿದಾಗ, ಆಡಲು ಸಿದ್ಧನಿದ್ದೇನೆ ಎಂದು ಭಾವಿಸಿದೆ. ಐಪಿಎಲ್ಗೆ ಆಯ್ಕೆಯಾಗುವುದಕ್ಕೆ ಮೊದಲು ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ರನ್ ಕಲೆಹಾಕಿದ್ದೆ. ನಾನು ಒಮ್ಮೆ ಮೈದಾನಕ್ಕೆ ಇಳಿದರೆ, ನನ್ನ ಸಂಪೂರ್ಣ ಶ್ರಮ ನೀಡುತ್ತೇನೆ’ ಎಂದಿದ್ದಾರೆ.

ನಾನು ಆರ್ಸಿಬಿ ಪರ ಪದಾರ್ಪಣೆ ಮಾಡಿದಾಗ, ಕ್ರಿಕೆಟ್ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಅವರ ಜೊತೆ ಆಡುವ ಅವಕಾಶ ಸಿಕ್ಕಿದ್ದು ನನಗೆ ಸಹಾಯ ಮಾಡಿತು. ಈ ವಯಸ್ಸಿನಲ್ಲಿ ಅವರು ಇನಿಂಗ್ಸ್ ಕಟ್ಟುವುದನ್ನು ನೋಡುವುದೇ ನನಗೆ ಸಂಭ್ರಮ. ಅವರನ್ನು ನೋಡಿ ನಾನು ಬಹಳಷ್ಟು ಕಲಿತಿದ್ದೇನೆ’ ಎಂದು ತಿಳಿಸಿದ್ದಾರೆ.

ಆರ್ ಆರ್ ಮತ್ತು ಲಖನೌ ತಂಡಗಳಿಗೆ ಆಡಿದಾಗ ಕಳಪೆ ಪ್ರದರ್ಶನ

‘ಆರಂಭಿಕ ಆಟಗಾರನ ಸ್ಥಾನದಿಂದ ಕೆಳ ಕ್ರಮಾಂಕದಲ್ಲಿ, ವಿಭಿನ್ನ ಪಾತ್ರದಲ್ಲಿ ಬ್ಯಾಟಿಂಗ್ ಮಾಡುವುದಕ್ಕೆ ಹೊಂದಿಕೊಳ್ಳುವುದು ಸವಾಲಿನದ್ದಾಗಿತ್ತು. ಆದರೆ, ರಾಜಸ್ಥಾನ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡದಿಂದ ನಾನು ಕಲಿತ ಪಾಠಗಳು ಕ್ರಿಕೆಟ್ ಜೀವನವನ್ನು ರೂಪಿಸಿವೆ. ವಿಶೇಷವಾಗಿ, ವಿಭಿನ್ನ ಪರಿಸ್ಥಿತಿ ಮತ್ತು ಒತ್ತಡದ ಸನ್ನಿವೇಶದಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ಕಲಿಸಿದೆ’ ಎಂದಿದ್ದಾರೆ.

‘2024ರ ಐಪಿಎಲ್ ಆವೃತ್ತಿಯು ನನಗೆ ಕಠಿಣವಾಗಿತ್ತು. ಅದರಿಂದ ಹಿಂತಿರುಗಿ ಬರುವುದು ಸವಾಲಿನದ್ದಾಗಿತ್ತು. ಆ ಋತುವಿನಲ್ಲಿ, ನನ್ನ ತಲೆಯಲ್ಲಿ ಅನೇಕ ಯೋಚನೆಗಳು ಬಂದು ಹೋಗಿದ್ದವು. ನೀವು ಒಂದು ಹಂತವನ್ನು ದಾಟಬೇಕು. ಆಗ ಮಾತ್ರ ಯಶಸ್ಸು ಸಾಧ್ಯ. ಆ ಆವೃತ್ತಿಯ ಬಳಿಕ ನಾನು ಏನು ಕೆಲಸ ಮಾಡಬೇಕು ಎಂಬುದನ್ನು ಯೋಚಿಸಿದೆ. ನಿರಂತರವಾಗಿ ಪ್ರಯತ್ನಿಸಿದೆ. ಶೀಘ್ರದಲ್ಲೇ ಅದು ಫಲ ನೀಡಿತು’ ಎಂದಿದ್ದಾರೆ.

ಆರ್ಸಿಬಿಗೆ ಮರಳಿದ ಬಳಿಕ ಆಟದಲ್ಲಿನ ಬದಲಾವಣೆಗಳ ಕುರಿತು ಮಾತನಾಡಿದ ಅವರು, ‘ದಿನೇಶ್ ಕಾರ್ತಿಕ್ ಮತ್ತು ಆ್ಯಂಡಿ ಫ್ಲವರ್ ನನ್ನ ಬ್ಯಾಟಿಂಗ್ ಸುಧಾರಿಸಲು ಸಹಾಯ ಮಾಡಿದರು. ನನ್ನ ಬ್ಯಾಟಿಂಗ್ ತಂತ್ರದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ನಿಧಾನಗತಿಯ ಬ್ಯಾಟಿಂಗ್ನಿಂದ ಸ್ಫೋಟಕ ಆಟಕ್ಕೆ ಒತ್ತು ನೀಡಲು ನಾನು ಕೆಲವು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು’ ಎಂದು ತಿಳಿಸಿದ್ದಾರೆ.

ಆರ್ಸಿಬಿ ಆಳವಾದ ಬ್ಯಾಟಿಂಗ್ ತಂಡವನ್ನು ಹೊಂದಿರುವುದರ ಪ್ರಯೋಜನವೇನು?

‘ಆರ್ಸಿಬಿ ಬಲಿಷ್ಠ ಮತ್ತು ಆಳವಾದ ಬ್ಯಾಟಿಂಗ್ ತಂಡವನ್ನು ಹೊಂದಿರುವುದು ಉತ್ತಮ ವಿಷಯ. ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದೆ ಎಂದು ತಿಳಿದಾಗ ಮಾತ್ರ, ಅಗ್ರ ಕ್ರಮಾಂಕದಲ್ಲಿ ಮುಕ್ತವಾಗಿ ಬ್ಯಾಟಿಂಗ್ ಮಾಡಬಹುದು. ಟಿ20 ಕ್ರಿಕೆಟ್ನಲ್ಲಿ ಆಟದ ಸ್ವರೂಪ ಬದಲಾಗಿದೆ. ಗೆಲುವಿಗೆ ಅಗತ್ಯವಿರುವ ರನ್ಗಿಂತಲೂ ಹೆಚ್ಚುವರಿಯಾಗಿ 20 ರಿಂದ 30 ರನ್ಗಳ ಅವಶ್ಯಕವಿರುತ್ತದೆ. ಅದನ್ನು ಕಲೆಹಾಕಲು ಸ್ಫೋಟಕ ಆಟ ಮುಖ್ಯ. ಆದರೆ, ಆ ಸಂದರ್ಭದಲ್ಲಿ ವಿಕೆಟ್ ಕಳೆದುಕೊಳ್ಳುವ ಸಾಧ್ಯತೆಗಳು ಕೂಡ ಇರುತ್ತವೆ. ನೀವು ಅದನ್ನು ತ್ಯಾಗ ಸಿದ್ದರಿರಬೇಕು’ ಎಂದಿದ್ದಾರೆ.

ಸೂರ್ಯವಂಶಿ ಅನುಸರಿಸಲು ಯತ್ನಿಸುವುದು ಮೂರ್ಖತನ

ವೈಭವ್ ಸೂರ್ಯವಂಶಿ ಅವರ ಆಟದ ಕುರಿತು ಮಾತನಾಡಿದ ಅವರು, ‘ವೈಭವ್ ಸೂರ್ಯವಂಶಿ ನಿಜಕ್ಕೂ ಅದ್ಭುತವಾಗಿ ಆಡುತ್ತಿದ್ದಾರೆ. ಅವರ ವಯಸ್ಸಿಗೆ, ಆ ರೀತಿಯ ಸ್ಫೋಟಕ ಬ್ಯಾಟಿಂಗ್ ಮಾಡುವುದನ್ನು ನೋಡುವುದು ತುಂಬಾ ವಿಶೇಷವಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಯಾರಾದರೂ ಅವರನ್ನು ಅನುಕರಿಸಲು ಪ್ರಯತ್ನಿಸುವುದು ಕೂಡ ಮೂರ್ಖತನ. ಅವರು ಅಪರೂಪದ ಪ್ರತಿಭೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.