ಹ್ಯಾಮಿಲ್ಟನ್: ಡೆವಾನ್ ಕಾನ್ವೆ ಅವರ ಬಿರುಸಿನ ಅರ್ಧ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಎರಡನೇ ಟಿ20 ಪಂದ್ಯದಲ್ಲಿ ಮಂಗಳವಾರ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು 68 ರನ್ಗಳಿಂದ ಸೋಲಿಸಿತು.

ಇದರಿಂದ ಐದು ಪಂದ್ಯಗಳ ಸರಣಿ ಈಗ 1–1 ರಲ್ಲಿ ಸಮಬಲಗೊಂಡಿದೆ. ಮೌಂಟ್ ಮಾಂಗಾನೂಯಿಯಲ್ಲಿ ಭಾನುವಾರ ನಡೆದ ಮೊದಲ ಪಂದ್ಯವನ್ನು ಹರಿಣಗಳ ಪಡೆ 7 ವಿಕೆಟ್ಗಳಿಂದ ಜಯಿಸಿತ್ತು. ಸರಣಿಯ ಮೂರನೇ ಪಂದ್ಯ ಅಕ್ಲೆಂಡ್ನಲ್ಲಿ ಶುಕ್ರವಾರ ನಡೆಯಲಿದೆ.

ಹ್ಯಾಮಿಲ್ಟನ್ನ ಸೆಡನ್ಪಾರ್ಕ್ನಲ್ಲಿ ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ನ್ಯೂಜಿಲೆಂಡ್ 6 ವಿಕೆಟ್ಗೆ 175 ರನ್ಗಳ ಹೋರಾಟದ ಮೊತ್ತ ಗಳಿಸಿತು. ಎಡಗೈ ಬ್ಯಾಟರ್ ಕಾನ್ವೆ 49 ಎಸೆತಗಳಿಂದ 60 ರನ್ ಬಾರಿಸಿದರು.

ದಕ್ಷಿಣ ಆಫ್ರಿಕಾ ಆರಂಭದಲ್ಲೇ ಕುಸಿಯಿತು. 31 ರನ್ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡ ಹರಿಣಗಳ ಪಡೆ ನಂತರ ಹೋರಾಟ ತೋರಲಿಲ್ಲ. 15.3 ಓವರುಗಳಲ್ಲಿ 107 ರನ್ಗಳಿಗೆ ಕುಸಿಯಿತು. ವೇಗದ ಬೌಲರ್ಗಳಾದ ಬೆನ್ ಸಿಯರ್ಸ್ ಮತ್ತು ಲಾಕಿ ಫರ್ಗ್ಯೂಸನ್ ತಲಾ 3 ವಿಕೆಟ್ಗಳನ್ನು ಪಡೆದರು.

ಟಿ20 ವಿಶ್ವಕಪ್ ನಂತರ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿರುವ ಕಾರಣ ಉಭಯ ತಂಡಗಳಲ್ಲಿ ಎರಡನೇ ಹಂತದ ಆಟಗಾರರು ಅವಕಾಶ ಪಡೆದಿದ್ದಾರೆ.

34 ವರ್ಷ ವಯಸ್ಸಿನ ಕಾನ್ವೆ ಅವರ ಎಚ್ಚರಿಕೆ ಮಿಶ್ರಿತ ಆಟದಲ್ಲಿ ಐದು ಬೌಂಡರಿಗಳ ಜೊತೆ ಎರಡು ಸಿಕ್ಸರ್ಗಳಿದ್ದವು. ಇದು, ದಕ್ಷಿಣ ಆಫ್ರಿಕಾ ಮೂಲದ ಆಟಗಾರನಿಗೆ ಈ ಮಾದರಿಯಲ್ಲಿ 13ನೇ ಅರ್ಧ ಶತಕ.

‘ಈ ವರ್ಷ ಭಾರತ ಪ್ರವಾಸ ನಂತರ ವಿಶ್ವಕಪ್ನಲ್ಲಿ ಒಳ್ಳೆಯ ಆಟ ಬಂದಿರಲಿಲ್ಲ. ಈಗ ಪುನರಾಗಮನ ಮಾಡಿರುವುದರ ಜೊತೆಗೆ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರಿಂದ ಸಂತಸವಾಗಿದೆ’ ಎಂದು ಕಾನ್ವೆ ಪ್ರತಿಕ್ರಿಯಿಸಿದರು. ಕೊನೆಯಲ್ಲಿ ಜಾಕ್ ಕಾರ್ಲ್ಸನ್ 2 ಸಿಕ್ಸರ್, 2 ಬೌಂಡರಿಗಳಿದ್ದ ಅಜೇಯ 26 (9 ಎಸೆತ) ಬಾರಿಸಿ ತಂಡದ ಮೊತ್ತ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 20 ಓವರುಗಳಲ್ಲಿ 6 ವಿಕೆಟ್ಗೆ 175 (ಡೆವಾನ್ ಕಾನ್ವೆ 60, ಜೋಶ್ ಕ್ಲಾರ್ಕ್ಸನ್ ಔಟಾಗದೇ 26; ವಿಯಾನ್ ಮುಲ್ಡರ್ 14ಕ್ಕೆ2); ದಕ್ಷಿಣ ಆಫ್ರಿಕಾ: 15.3 ಓವರುಗಳಲ್ಲಿ 107 (ಜಾರ್ಜ್ ಲಿಂಡೆ 26; ಲಾಕಿ ಫರ್ಗ್ಯುಸನ್ 16ಕ್ಕೆ3, ಬೆನ್ ಸಿಯರ್ಸ್ 14ಕ್ಕೆ3, ಸ್ಯಾಂಟ್ನರ್ 19ಕ್ಕೆ2). ಪಂದ್ಯದ ಆಟಗಾರ: ಡೆವಾನ್ ಕಾನ್ವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.